ಪ್ರಧಾನಿ ರೈತರ ಗೋಳು ಕೇಳಲಿ
ಬೆಂಗಳೂರು,ಫೆ.೧೬-ಯಡಿ ಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರೈತರನ್ನು ಸಮಾಧಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದರೆ ರಾಜ್ಯದ ಕಾಂಗ್ರೆಸ್ ನಾಯಕರು ನೋಡಿಕೊಂಡು ಸುಮ್ಮನಿ ದ್ದಾರೆ ಎಂದು ಟೀಕಿಸಿರುವ ಮಾಜಿ ಪ್ರಧಾನಿ ದೇವೇಗೌಡ,ಈ ಹಿನ್ನೆಲೆಯಲ್ಲಿ ಪ್ರಧಾನಿ ಮನವೋಹನ್‌ಸಿಂಗ್ ಅವರೇ ಬಂದು ರೈತರ ಗೋಳು ಕೇಳಲಿ. ಇಲ್ಲದಿದ್ದರೆ ಸಂಸತ್ತಿಗೆ ಮುತ್ತಿಗೆ ಹಾಕುಮದಾಗಿ ಎಚ್ಚರಿಕೆ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಯೊಜನೆಗಳ ಹೆಸರಿನಲ್ಲಿ ಯಡಿಯೂರಪ್ಪ ಸರ್ಕಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳುತ್ತಿದ್ದು ಇದನ್ನು ತಡೆಗಟ್ಟುವವರೆಗೆ ವಿರಮಿಸಲಾರೆ ಎಂದು ಹೇಳಿದರು. ರೈತರ ಸಮಾಧಿ ಮೇಲೆ ಟೌನ್ ಶಿಪ್ ಮಾಡಿ ಕೋಟಿ ಕೋಟಿ ಹಣ ಲೂಟಿ ಮಾಡಲು ಹೊರಟಿರುವ ನೈಸ್ ಮುಖ್ಯಸ್ಥ ಖೇಣಿ ವಿರುದ್ಧ ಧ್ವನಿ ಎತ್ತದೇ ಕಾಂಗ್ರೆಸ್ ನಾಯಕರು ಮೌನ ವಹಿಸಿರುಮದು ಏಕೆ ಎಂದು ಪ್ರಶ್ನಿಸಿದ ಅವರು, ಯಾರು ಧ್ವನಿ ಎತ್ತದಿದ್ದರೂ ಸರಿಯೆು ನನ್ನ ಉಸಿರಿರುವವರೆಗೆ ರೈತ ರಿಗೆ ಅನ್ಯಾಯವಾಗಲು ಬಿಡುಮದಿಲ್ಲ ಎಂದು ಗುಡುಗಿದರು. ಬಿಎಂಐಸಿ ಯೊಜನೆ ವಿರುದ್ಧ ರಣಕಹಳೆ ವೊಳಗಿಸಿರುವ ದೇವೇ ಗೌಡರು ಇಂದು ರೈತರ ಭೂಸ್ವಾಧೀನ ವಿರೋಧಿಸಿ ಹಮ್ಮಿಕೊಂಡಿರುವ ಜಾಗೃತಿ ಸಮಾವೇಶಕ್ಕೆ ನೈಸ್ ರಸ್ತೆ ಮಾರ್ಗದ ಹೆಮ್ಮಿಗೆಪುರದ ಬಳಿ ಚಾಲನೆ ನೀಡಿ, ದಾವೂದ್ ಇಬ್ರಾಹಿಂ ಗಿಂತ ಅಪಾಯಕಾರಿ ಮನುಷ್ಯ ಖೇಣಿಗೆ ನೆರವಾಗಲು ಮುಖ್ಯಮಂತ್ರಿ ಯಡಿ ಯೂರಪ್ಪ ಅವರು ಮಾಡಬಾರದ್ದು ಮಾಡುತ್ತಿದ್ದಾರೆ. ಇವರಿಗೆ ಪಾಠ ಕಲಿ ಸುಮವರೆಗೆ ನಾನು ವಿರಮಿಸುಮದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ರೈತರ ಭೂಮಿಯನ್ನು ಅಭಿವೃದ್ಧಿ ಯೊಜನೆಗಳ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳುಮದನ್ನು ತಡೆಯಲು ಪ್ರಧಾನಿ ಮನವೋಹನ್‌ಸಿಂಗ್ ಸಂಸ ತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿ ಸಬೇಕು.ಇಲ್ಲದಿದ್ದರೆ ದೇಶದ ರೈತರು ಸರ್ವನಾಶವಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇವತ್ತು ಯಡಿ ಯೂರಪ್ಪ ಸರ್ಕಾರ ವಿವಿಧ ಅಭಿವೃದ್ಧಿ ಯೊಜನೆಗಳ ಹೆಸರಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳೂತ್ತಾ ಆ ಸಮುದಾಯವನ್ನು ಬೀದಿಪಾಲು ಮಾಡುತ್ತಿದೆ.