ರೈತರು, ಎಬಿವಿಪಿ ಮೇಲಿನ ವೊಕದ್ದಮೆ ವಾಪಸ
ಬೆಂಗಳೂರು,ಮಾ.೨೯-ಕಳೆದೆ ರಡು ವರ್ಷಗಳ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ರೈತರು ಹಾಗೂ ಎಬಿವಿಪಿ ವಿದ್ಯಾರ್ಥಿಗಳು ಹೋರಾಟ ನಡೆಸಿದ ಸಂದರ್ಭದಲ್ಲಿ ಹೂಡಲಾ ಗಿರುವ ವೊಕದ್ದಮೆಗಳನ್ನು ಹಿಂಪಡೆ ಯುವ ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಅಧಿಕಾರಕ್ಕೆ ಬಂದ ಶುರುವಿನಲ್ಲಿ ಭುಗಿಲೆದ್ದ ಹಾವೇರಿಯ ರಸಗೊಬ್ಬರದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಮ ರೈತರ ಮೇಲೆ ವೊಕದ್ದಮೆ ಗಳನ್ನು ಹೂಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾ ಗಿದ್ದ ರೈತರ ಮೇಲಿನ ವೊಕದ್ದಮೆಗ ಳನ್ನು ಹಿಂಪಡೆಯುವಂತೆ ಕಳೆದ ಹಲಮ ಕಾಲದಿಂದ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆ ಯಲ್ಲಿ ಪ್ರಕರಣದಲ್ಲಿ ಭಾಗಿಗಳಾದ ರೈತರ ಮೇಲಿನ ವೊಕದ್ದಮೆಯನ್ನು ಸರ್ಕಾರ ಹಿಂಪಡೆದುಕೊಂಡಿದೆ. ಇದೇ ರೀತಿ ಬಿಜೆಪಿಯ ಬಗ್ಗೆ ಸಹಾನುಭೂತಿ ಹೊಂದಿರುವ ಹಾಗೂ ಆಡಳಿತ ಪಕ್ಷದ ಜೊತೆಗೆ ಪರೋ ಕ್ಷವಾಗಿ ಗುರುತಿಸಿಕೊಂಡಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳ ಮೇಲೆ ದಾಖಲಾದ ಎಬಿವಿಪಿ ಕಾರ್ಯಕರ್ತರ ಮೇಲಿನ ವೊಕದ್ದಮೆಗಳನ್ನು ಹಿಂಪಡೆಯಲು ಸರ್ಕಾರ ಕೈಗೊಂಡಿರುವ ಕ್ರಮ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಹಾವೇರಿ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎ.ಬಿ.ವಿ.ಪಿ ವಿದ್ಯಾರ್ಥಿಗಳ ಮೇಲೆ ದಾಖಲಾದ ವೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ಸಂಪುಟ ಅನುಮತಿ ನೀಡಿದೆ. ಅದೇ ರೀತಿ ಗದಗ ಜಿಲ್ಲೆಯ ಬೆಟ ಗೇರಿ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಚಳವಳಿ ಸಂದರ್ಭದಲ್ಲಿ ದಾಖಲಾದ ವೊಕದ್ದಮೆಗಳನ್ನು ಕೂಡ ಇದೇ ಸಂದರ್ಭದಲ್ಲಿ ಹಿಂಪಡೆಯ ಲಾಗಿದೆ. ಹಾಸನ, ಗುಲ್ಬರ್ಗಾ ಮತ್ತು ಬೆಂಗ ಳೂರು ನಗರದಲ್ಲಿ ಚಳವಳಿ ನಿರತ ರೈತರ ಮೇಲೆ ಹೂಡಿರುವ ವೊಕ ದ್ದಮೆಗಳನ್ನು ಅಭಿಯೊಜನೆಯಿಂದ ಹಿಂದಕ್ಕೆ ಪಡೆಯಲಾಗುತ್ತಿದೆ. ಇದ ಲ್ಲದೇ ಶಿವವೊಗ್ಗ ಮೆಸ್ಕಾಂ ಜಾಗೃತ ದಳ ಪೊಲೀಸರು ರೈತರ ಮೇಲೆ ದಾಖಲಿಸಿರುವ ಮೂರು ಪ್ರಕರಣ ಗಳನ್ನು ಹಿಂಪಡೆಯಲಾಗುತ್ತಿದೆ.