ಚನೈ ಐಪಿಎಲ ಕಿಂಗ

ಮುಂಬೈ, ಏ.೨೫- ಮಹತ್ವದ ಫೈನಲ್‌ ಪಂದ್ಯದಲ್ಲಿ ಸಾಂಘಿಕ ಹೋರಾಟ ಪ್ರದರ್ಶಿಸಿದ ಚೆನ್ನೆöೖ ಸೂಪರ್‌ ಕಿಂಗ ್‌್ಸ ಬಲಿಷ್ಠ ಮುಂಬೈ ಇಂಡಿಯನ್ಸ್‌ ತಂಡವನ್ನು ೨೨ ರನ್‌ಗಳಿಂದ ಪರಾಭವಗೊಳಿಸಿ ಐಪಿಎಲ್‌ ಮೂರನೇ ಆವೃತ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡು ವಿಜೃಂಭಿಸಿದೆ. ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುಮದ ರೊಂದಿಗೆ ಫೆವರೇಟ್‌ ತಂಡವಾಗಿ ಹೊರಹೊಮ್ಮಿದ್ದ ಮುಂಬೈ ಇಂಡಿಯನ್ಸ್‌ ತಂಡ ಸೋಲಿನ ಆಘಾತದೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆಲ್‌ರೌಂಡ್‌ ಆಟದ ಮೂಲಕ ತಂಡದ ಗೆಲುವಿಗೆ ಕಾರಣರಾದ ಸುರೇಶ್‌ ರೈನಾ (ಔಟಾಗದೇ ೫೭ ರನ್‌ ಹಾಗೂ ೨೧/೧ ವಿಕೆಟ್‌) ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಎದುರಾಳಿಗಳ ೧೬೯ ರನ್‌ ಸವಾಲಿನ ವೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ತಂಡ ಪ್ರಬಲ ಪ್ರತಿರೋಧದ ನಡುವೆಯೂ ನಿಗದಿತ ೨೦ ಓವರ್‌ನಲ್ಲಿ ೯ ವಿಕೆಟ್‌ ಕಳೆದುಕೊಂಡು ೧೪೬ ರನ್‌ ಮಾತ್ರ ಗಳಿಸಲು ಶಕ್ತವಾಯಿತು. ಗೆಲುವಿನ ಸಂಕಲ್ಪದೊಂದಿಗೆ ಸ್ಕ್ರೀಸ್‌ಗಿಳಿದ ಮುಂಬೈಗೆ ಶಿಖರ್‌ ಧವನ್‌ (೦) ಆರಂಭಿಕ ಆಘಾತ ನೀಡಿದರು. ಬಳಿಕ ಸಚಿನ್‌-ಅಭಿಷೇಕ್‌ ನಾಯರ್‌ ಜೋಡಿ ೨ನೇ ವಿಕೆಟ್‌ ೬೬ ರನ್‌ಗಳ ಜೊತೆಯಾಟವಾಡಿ ಬುನಾದಿ ಭದ್ರಗೊಳಿಸಿದರು. ಈ ಹಂತದಲ್ಲಿ ನಾಯರ್‌ ೨೬ ಎಸೆತದಲ್ಲಿ ೨ ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಹಿತ ೨೭ ರನ್‌ ಗಳಿಸಿದ್ದಾಗ ರನೌಟ್‌ ಆಗಿ ನಿರಾಶೆ ಅನುಭವಿಸಿದರು. ಅಷ್ಟರಲ್ಲೇ ಹರಭಜನ್‌ (೧) ರೈನಾ ಬೌಲಿಂಗ್‌ ನಲ್ಲಿ ಅನುಮಾನಾಸ್ಪದ ಎಲ್‌ಬಿಡಬ್ಲೂö್ಯ ತೀರ್ಪಿಗೆ ಬಲಿಯಾದರು. ಏತನ್ಮಧ್ಯೆ ೪೫ ಎಸೆತದಲ್ಲಿ ೭ ಬೌಂಡರಿಯೊಂದಿಗೆ ಜವಾಬ್ದಾರಿ ಯುತ ಆಟ ಪ್ರದರ್ಶಿಸಿದ್ದ ಸಚಿನ್‌ ತೆಂಡೂಲ್ಕರ್‌ (೪೮) ಅರ್ಧಶತಕದಂ ಚಿನಲ್ಲಿ ಜಕಾತಿಗೆ ವಿಕೆಟ್‌ ಒಪ್ಪಿಸಿ  ಪೆವಿಲಿಯನ್‌ನತ್ತ ನಡೆದರು. ನಂತರ ಬಂದ ಸೌರಭ್‌ ತಿವಾರಿ (೦), ಡುಮಿನಿ (೬) ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿ ದರು. ಒತ್ತಡದ ಹಂತದಲ್ಲಿ ಸ್ಕ್ರೀಸ್‌ಗಿಳಿದ ಪೋಲಾರ್ಡ್‌ ಕೇವಲ ೧೦ ಎಸೆತ ದಲ್ಲಿ ಸಿಡಿಲಿನ ೩ ಬೌಂಡರಿ ಹಾಗೂ ಮಿಂಚಿನ ೨ ಸಿಕ್ಸರ್‌ನೊಂದಿಗೆ ೨೭ ರನ್‌ ಸಿಡಿಸಿ ಎದುರಾಳಿಗಳಲ್ಲಿ ನಡುಕು ಹುಟ್ಟಿಸಿದರು. ಈ ಹಂತದಲ್ಲಿ ಅಂಬಟಿ ರಾಯುಡು (೨೧) ರನೌಟ್‌ ಆಗಿ ಲೆಕಾ ್ಕ  ಚಾರ ತಲೆಕೆಳಗಾಗಿಸಿದರು. ಬೆನ್ನಲ್ಲೇ ಪೋಲಾರ್ಡ್‌(೨೭) ವೊರ್ಕೆಲ್‌ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಮುಂಬೈನ ಪಾಲಿನ ವಿಶ್ವಾಸಕ್ಕೆ ತಣ್ಣೀರೆರಚಿದರು. ಅಂತಿಮವಾಗಿ ತಂಡ ೨೦ ಓವರ್‌ ನಲ್ಲಿ ಕೇವಲ ೧೪೬ ರನ್‌ಗಳಿಸ ಲಷ್ಟೇ ಶಕ್ತವಾಗಿ ಸೋಲಿನ ನಿರಾಶೆ ಅನುಭವಿಸಿತು. ರೈನಾ ಅಬ್ಬರ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಚೆನ್ನೆöೖ ಸೂಪರ್‌ ಕಿಂಗ್ಸ್‌ ಮಧ್ಯಮ ಕ್ರಮಾಂ ಕದ ಸುರೇಶ್‌ ರೈನಾ (೫೭ಶ್ರೀ) ಅಜೇಯ ಅರ್ಧಶತಕದ ನೆರವಿ ನಿಂದ ನಿಗದಿತ ೨೦ ಓವರ್‌ನಲ್ಲಿ ೫ ವಿಕೆಟ್‌ ನಷ್ಟಕ್ಕೆ ೧೬೮ ರನ್‌ ಕಲೆ ಹಾಕಿತು. ಆರಂಭದಿಂದಲೂ ಬೌಲರ್‌ ಗಳ ಮೇಲೆ ಸವಾರಿ ನಡೆಸಿದ ರೈನಾ ಕೇವಲ ೩೫ ಎಸೆತದಲ್ಲಿ ತಲಾ ೩ ಸಿಕ್ಸರ್‌ ಮತ್ತು ಬೌಂಡರಿ ಮೂಲಕ ಅಜೇಯ ೫೭ರನ್‌ ಗಳಿಸಿದರು. ತಂಡ ಸವಾಲಿನ ವೊತ್ತ ಗಳಿಸಲು ನೆರವಾದರು. ಏತನ್ಮಧ್ಯೆ ಎದುರಾಳಿ ಗಳ ಬಿಗಿ ಬೌಲಿಂಗ್‌ ನಡುವೆಯೂ ಆರಂಭಿಕ ಎಂ.ವಿಜಯ್‌-ಮ್ಯಾಥ್ಯೂ ಹೇಡನ್‌ ಜೋಡಿ ವೊದಲ ವಿಕೆಟ್‌ಗೆ ೪೪ ರನ್‌ ಕೂಡಿ ಹಾಕಿ ಉತ್ತಮ ಅಡಿಪಾಯ ಹಾಕಿ ಕೊಟ್ಟರು.

No Comments to “ಚನೈ ಐಪಿಎಲ ಕಿಂಗ”

add a comment.

Leave a Reply

You must be logged in to post a comment.