ಖಾಸಗಿ ಹಾಲೂ ದುಬಾರಿ
ಬೆಂಗಳೂರು,ಏಪ್ರಿಲ್,೧೨-ನಂದಿನಿ ಹಾಲಿನ ದರ ಹೆಚ್ಚಳವಾದ ಬೆನ್ನಲ್ಲೇ ಹೆರಿಟೇಜ್,ದೊಡ್ಲ ಸೇರಿದಂತೆ ಹಲಮ ಖಾಸಗಿ ಸಂಸ್ಥೆಗಳು ಉತ್ಪಾದಿಸುವ ಹಾಲಿನ ದರ ಇಂದಿನಿಂದಲೇ ತಲಾ ಎರಡು ರೂ ಹೆಚ್ಚಳವಾಗಿದೆ. ನಂದಿನಿ ಹಾಲಿನ ದರವನ್ನು ಸರ್ಕಾರ ಪ್ರತಿ ಲೀಟರ್‌ಗೆ ಮೂರು ರೂ. ಹೆಚ್ಚಳ ಮಾಡಿದ ಬೆನ್ನಲ್ಲೇ ಖಾಸಗಿ ಉತ್ಪಾದ ಕರೂ ಹಾಲಿನ ದರವನ್ನು ಹೆಚ್ಚಳ ಮಾಡಿದ್ದು ಈ ಬೆಳವಣಿಗೆ ಹಾಲಿನ ದರ ಸಮರಕ್ಕೆ ನಾಂದಿಯಾಗುವ ಸಾಧ್ಯತೆಗಳಿವೆ. ಖಾಸಗಿಯವರು ರೈತರು ಪೂರೈ ಸುವ ಹಾಲಿಗೆ ಹೆಚ್ಚಿನ ಬೆಲೆ ಕೊಡು ತ್ತಿದ್ದ ಹಿನ್ನೆಲೆಯಲ್ಲಿ ಕೆಎಂಎಫ್ ವ್ಯಾಪ್ತಿ ಯಲ್ಲಿರುವ ಜಿಲ್ಲಾ ಹಾಲು ಒಕ್ಕೂಟ ಗಳಿಗೆ ಹಾಲಿನ ಪೂರೈಕೆ ಗಣನೀಯ ವಾಗಿ ಕಡಿಮೆಯಾಗಿತ್ತು.