ಫೋನ ಕದ್ದಾಲಿಕೆ ಸುಳ್ಳು- ಸಿಎಂ
ಬೆಂಗಳೂರು,ಏ.೨೫-ಆಡಳಿತಾರೂಡs ಬಿಜೆಪಿ ಸರ್ಕಾರ ಪ್ರತಿಪಕ್ಷ ನಾಯಕರು, ಸಚಿವರು ಹಾಗೂ ಹಲಮ ಶಾಸಕರ ಟೆಲಿಫೋನ್ ಕರೆಗಳನ್ನು ಕದ್ದಾಲಿಸುತ್ತಿದೆ ಎಂಬ ಜಾ.ದಳ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಸಂಬಂಧ ಸಮಗ್ರ ತನಿಖೆಗೆ ಸಿದ್ಧ ಎಂದು ಘೋಷಿಸಿದ್ದಾರೆ. ಶಿವವೊಗ್ಗದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಟೆಲಿಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ಆರೋಪ ನಿರಾಧಾರ ವಾದುದು. ಈ ವಿಷಯದಲ್ಲಿ ಸರ್ಕಾರ ಪಾರ ದರ್ಶಕವಾಗಿದೆ ಎಂದು ಸಮರ್ಥಿಸಿ ಕೊಂಡರು. ಈ ವಿಷಯದಲ್ಲಿ ಜಾ.ದಳ ಮುಖಂಡರು ಮಾಡುತ್ತಿರುವ ಆರೋಪ ಸರಿಯಲ್ಲ ಎಂದ ಅವರು, ಬೇಕಿದ್ದರೆ ಕುಮಾರಸ್ವಾಮಿ ಅವರ ನೇತೃತ್ವದಲ್ಲೇ ತನಿಖೆ ನಡೆಸಲು ಸಿದ್ಧ ಎಂದು ನುಡಿದರು. ಕದ್ದಾಲಿಕೆ-ಮತ್ತೆ ಆರೋಪ: ಹೀಗೆ ಮುಖ್ಯಮಂತ್ರಿ ಯಡಿಯೂರಪ್ಪ ಟೆಲಿಫೋನ್ ಕದ್ದಾಲಿಕೆ ನಡೆಯುತ್ತಿಲ್ಲ ಎಂದ ಬೆನ್ನಲ್ಲೇ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜಾ.ದಳ ಈ ಕುರಿತಂತೆ ಇನ್ನಷ್ಟು ಉಗ್ರ ದಾಳಿಗೆ ಇಳಿದಿದ್ದು, ಟೆಲಿಫೋನ್ ಕದ್ದಾಲಿಕೆ ನಡೆಯುತ್ತಿರುಮದು ನಿಜ ಎಂದಿವೆ. ಮಾಜಿ ಪ್ರಧಾನಿ ದೇವೇಗೌಡ ಇಂದು ಧಾರವಾಡದಲ್ಲಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಪ್ರತಿಪಕ್ಷ ನಾಯಕರು ಮತ್ತು ಹಲಮ ಶಾಸಕರ ದೂರವಾಣಿಯನ್ನು ಕದ್ದಾಲಿಸುತ್ತಿರುಮದು ನಿಜ ಎಂದರು. ಯಡಿಯೂರಪ್ಪ ಉದ್ದಕ್ಕೂ ಅಶ್ಲೀಲ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಗೌರವವಿಲ್ಲ ಎಂದು ದೂರಿದರು. ಈ ಮಧ್ಯೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಟೆಲಿಫೋನ್ ಕದ್ದಾಲಿಕೆಯ ಕುರಿತ ಆರೋಪಗಳಿಗೆ ಧ್ವನಿಗೂಡಿಸಿದ್ದು, ಆ ಮೂಲಕ ಇಡೀ ಪ್ರಕರಣಕ್ಕೆ ಮತ್ತಷ್ಟು ರಂಗೇರಿದಂತಾಗಿದೆ.