ಬೂಟಾಸಿಂಗ ಆಕ್ರೊಶ
ಬೆಂಗಳೂರು,ಏ.೨೮-ಪರಿಶಿಷ್ಟ ಸಮುದಾಯಕ್ಕೆ ಸಂವಿಧಾನದತ್ತವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಈ ಕುರಿತು ಎರಡು ದಿನಗಳಲ್ಲಿ ಸೂಕ್ತ ಮಾಹಿತಿ ನೀಡದಿದ್ದರೆ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಲಾಗುಮದು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೊಗದ ಅಧ್ಯಕ್ಷ ಡಾ.ಬೂಟಾಸಿಂಗ್ ಇಂದಿಲ್ಲಿ ಎಚ್ಚರಿಕೆ ನೀಡಿದರು. ಪರಿಶಿಷ್ಟ ಸಮುದಾಯದ ಸವಲ ತ್ತುಗಳ ಕುರಿತು ಸಮಾಜ ಕಲ್ಯಾಣ ಸಚಿವರು, ಮುಖ್ಯಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಕಾರ್ಯ ದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾಗಿ ನೇಮಕಾತಿಯಲ್ಲಿ ರೋಷ್ಟರ್ ಪದ್ಧತಿ ಅನುಸರಿಸಿಲ್ಲ. ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಮಾಡಿಲ್ಲ ಎಂದು ದೂರಿ ದರು. ಈ ಸಮುದಾಯದ ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಿಸುವಲ್ಲಿ ಸರ್ಕಾರ ಸಫಲವಾಗಿಲ್ಲ. ಪರಿಶಿಷ್ಟರ ಹೆಸರಿನಲ್ಲಿ ೪೨೦೦ ಮಂದಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿಗೆ ಸೇರಿದ್ದರೂ ಕೂಡ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದರು. ಪರಿಶಿಷ್ಟರ ಏಳ್ಗೆಗಾಗಿ ಬಿಡುಗಡೆಯಾದ ಹಣವನ್ನು ರಾಜ್ಯ ಸರ್ಕಾರ ಸದ್ಬಳಕೆ ಮಾಡಿಕೊಂಡಿಲ್ಲ. ವಿವಿಧ ಹುದ್ದೆಗಳಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಸಮುದಾಯದ ಹಕ್ಕುಗಳ ರಕ್ಷಣೆಗೆ ಚೀಫ್ ಲೈಸೆನಿಂಗ್ ಅಧಿಕಾರಿಯನ್ನು ಸರ್ಕಾರ ಈವರೆವಿಗೆ ನೇಮಿಸಿಲ್ಲ. ಕೇವಲ ನೋಡೆಲ್ ಅಧಿಕಾರಿಯೊಬ್ಬರನ್ನು ನಾಮಕಾಸ್ತೆಗೆ ನೇಮಿಸಲಾಗಿದೆ ಎಂದರು. ಪರಿಸ್ಥಿತಿ ಹೀಗಿರುವಾಗ ಸರ್ಕಾರದಿಂದ ನ್ಯಾಯ ನಿರೀಕ್ಷಿಸುಮದಾ ದರೂ ಹೇಗೆ? ಜನಾಂಗದ ಹಕ್ಕುಗಳ ರಕ್ಷಣೆಗೆ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ಇದ್ದರೂ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ತಾಮ ಎತ್ತಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಬಂದಿಲ್ಲ. ಎರಡು ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಮತ್ತೆ ಈ ಕುರಿತು ಸಭೆ ನಡೆಸುಮದಾಗಿ ಡಾ.ಬೂಟಾ ಸಿಂಗ್ ಹೇಳಿದರು.