ಅಣ್ಣಾ ಹೋರಾಟಕ್ಕೆ ಜನ ಸಾಗರ

ಹೊಸದಿಲ್ಲಿ,ಆ.೨೧-ಗಾಂಧಿವಾದಿ ಅಣ್ಣಾ ಹಜಾರೆ ಅವರ ೬ನೇ ದಿನದ ನಿರಶನವೂ ಭಾರೀ ಜನಸಾಗರ ದೊಂದಿಗೆ ಮುಂದುವರಿಯುತ್ತಿದ್ದಂತೆ ಸರ್ಕಾರದೊಂದಿಗಿನ ಮಾತುಕತೆಗೆ ಅಣ್ಣಾ ತಂಡ ಇನ್ನಷ್ಟು ಹತ್ತಿರವಾಗು ತ್ತಿದೆ. ಆದರೆ, ಈ ಬೆಳವಣಿಗೆ ನಡು ವೆಯೆು ಹಿಂಬಾಗಿಲಿನ ಮಾತುಕತೆ- ಸಂಧಾನವೇರ್ಪಟ್ಟಿದೆ ಎಂಬ ಊಹಾ ಪೋಹವೂ ಹೊರಬಿದ್ದಿದೆ. ಸುಮಾರು ೫೦,೦೦೦ ಜನಸಾಗ ರದ ಮುಂದೆ ಭಾನುವಾರ ರಾತ್ರಿ ಮಾತನಾಡಿದ ಅಣ್ಣಾ ಹಜಾರೆ, ನಮ್ಮ ಮಸೂದೆಯನ್ನು ಅಂಗೀಕರಿಸದಿದ್ದರೆ ಮುಂದೆ ಮಹಾಕ್ರಾಂತಿಯೆು ನಡೆಯು ತ್ತದೆ ಎಂದು ಎಚ್ಚರಿಸಿದರು. ಅಲ್ಲದೆ, ಸರ್ಕಾರವೇನಾದರೂ ನಮ್ಮ ಮಸೂದೆ ಮಂಡಿಸದಿದ್ದರೆ, ದೇಶ ಹಿಂದೆಂದೂ ಕಂಡರಿಯದ ಕ್ರಾಂತಿ ಎದುರಿಸುತ್ತದೆ. ಅದಕ್ಕೆ ಸಿದ್ಧವಾಗಿರುವಂತೆ ಜನತೆಗೆ ಕರೆಕೊಟ್ಟರು. ಒಟ್ಟಿನಲ್ಲಿ ಕ್ರಾಂತಿ ಕಹಳೆ ಮುಂದು ವರಿದಂತೆ ಭಾನುವಾರದ ಕೆಲ ಬೆಳ ವಣಿಗೆಗಳು ಅಣ್ಣಾ ತಂಡ ಸಂಪೂರ್ಣ ಮಾತುಕತೆಗೆ ಸಿದ್ಧವಾಗಿರುಮದು ಸ್ಪಷ್ಟವಾಗಿ ತೋರಿಸುತ್ತಿತ್ತು. ಸರ್ಕಾರಕ್ಕೆ ಎಚ್ಚರಿಕೆ ನೀಡುವ ಮುನ್ನವೇ ಈ ಮಾತನಾಡಿದ್ದ ಅಣ್ಣಾ ಹಜಾರೆ, ತಮ್ಮ ಅಭಿಯಾನ ಮಾತು ಕತೆಯ ಬಾಗಿಲು ಮುಚ್ಚಿಸಿಲ್ಲ. ನಾಮ ಮಾತುಕತೆಗೆ ಮುಕ್ತವಾಗಿದ್ದು, ಅದರ ಮೂಲಕವಷ್ಟೇ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಬೆಂಬಗಲಿಗರ ಸಮ್ಮುಖ ಹೇಳಿದರು. ಸರ್ಕಾರ ಮಾತುಕತೆಗೆ ಮುಂದೆ ಬಂದಿದೆಯಾದರೂ ಈ ಬಗ್ಗೆ ನಮಗೆ ಯಾಮದೇ ಪ್ರಸ್ತಾವ ಸಿಕ್ಕಿಲ್ಲ. ನಾಮ ಯಾರೊಂದಿಗೆ ಮಾತುಕತೆ ನಡೆಸ ಬೇಕು. ಎಲ್ಲಿ ನಡೆಯಬೇಕು ಎಂಬ ಬಗ್ಗೆ ಯಾಮದೇ ಮಾಹಿತಿ ನೀಡಿಲ್ಲ ಎಂದು ಅರವಿಂದ್‌ ಕೇಜ್ರಿವಾಲ ಸುದ್ದಿಗಾರರಿಗೆ ತಿಳಿಸಿದರು. ಕೇಂದ್ರ ಸರ್ಕಾರ ಮಾತುಕತೆಗೆ ಮುಂದೆ ಬಂದಿದೆಯಾದರೂ ಅದಕ್ಕೆ ಅಧಿಕೃತ ಸಂಧಾನಕಾರರೊಬ್ಬರನ್ನು ನೇಮಿಸಬೇಕು. ಅಲ್ಲದೆ, ಸದ್ಯ ಮಂಡನೆ ಯಾಗಿರುವ ಮಸೂದೆಯನ್ನು ಹಿಂಪಡೆ ಯುವ ಮೂಲಕ ಮಾತುಕತೆಗೆ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸ್ವಾಮಿ ಅಗ್ನಿವೇಶ್‌ ಹೇಳುವ ಮೂಲಕ ಸಂಧಾನಕ್ಕೆ ಈ ತೆರನಾದ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿ ಕೊಟ್ಟಿದ್ದಾರೆ.

No Comments to “ಅಣ್ಣಾ ಹೋರಾಟಕ್ಕೆ ಜನ ಸಾಗರ”

add a comment.

Leave a Reply

You must be logged in to post a comment.