ಪ್ರಧಾನಿ ಅಥವಾ ರಾಹುಲ ಬಂದರೆ ಮಾತ್ರ ಸಂಧಾನ

ಹೊಸದಿಲ್ಲಿ,ಆ.೨೨- ಗಾಂಧಿವಾದಿ ಅಣ್ಣಾ ಹಜಾರೆ ಅವರ ನಿರಶನ ಸೋಮವಾರ ೭ನೇ ದಿನಕ್ಕೆ ಕಾಲಿಟ್ಟ ವೇಳೆ ಕೇಂದ್ರ ಸರ್ಕಾರಕ್ಕೆ ಅಣ್ಣಾ ತಂಡ ದಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ. ಪ್ರಧಾನಿ ಮನವೋಹನ್‌ ಸಿಂಗ್‌ ಅಥವಾ ರಾಹುಲ್‌ ಗಾಂಧಿ ಮಾತುಕತೆಯ ನೇತೃತ್ವ ವಹಿಸಿದರೆ ಮಾತ್ರ ಸಂಧಾನಕ್ಕೆ ಮುಂದಾಗುಮದಾಗಿ ಕೇಂದ್ರ ಸರ್ಕಾರಕ್ಕೆ ಅಣ್ಣಾ ತಿಳಿಸಿದ್ದಾರೆ. ೭೪ರ ಹರೆಯದ ಅಣ್ಣಾ ಸತತ ೭ ದಿನಗಳಿಂದ ಉಪವಾಸ ಮಾಡು ತ್ತಿರುಮದರಿಂದ ಇದೀಗ ೫ ಕೆಜಿ ತೂಕ ಕಳೆದುಕೊಂಡಿದ್ದು, ವೈದ್ಯರು ಸತತ ವಾಗಿ ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ರಾಮಲೀಲಾ ಮೈದಾನದಲ್ಲಿ ಸುದ್ದಿ ಗಾರರೊಂದಿಗೆ ಬೆಳಿಗ್ಗೆ ಮಾತನಾಡಿದ ಅಣ್ಣಾ, ಕೇಂದ್ರ ಸರ್ಕಾರದ ಇತರೆ ಸಚಿವರು ಬಂದರೆ ತಾಮ ಸಂಧಾನಕ್ಕೆ ಬರುಮದಿಲ್ಲ. ಪ್ರಧಾನಿ ಅಥವಾ ರಾಹುಲ್‌ ಗಾಂಧಿ ಬಂದರೆ ಮಾತ್ರ ಮಾತುಕತೆ ಸಾಧ್ಯ. ಹಾಗೇನಾದರೂ ಚಿದಂಬರಂ ಅಥವಾ ಕಪಿಲ್‌ ಸಿಬಾಲ್‌ ಬಂದರೂ ತಾಮ ಮಾತುಕತೆ ನಡೆ ಸುಮದಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರೇತರ ಸಂಧಾನಕಾರರು ಮಾತುಕತೆಗೆ ಬಂದರೆ, ಅದು ಪ್ರಯೊಜನ ವಾಗುಮದಿಲ್ಲ ಎಂದು ಹೇಳುವ ಮೂಲಕ ಆಧ್ಯಾತ್ಮಿಕ ಗುರು ಭಯ್ಯುಜಿ ಮಹಾರಾಜ್‌ ಮತ್ತು ಹಿರಿಯ ಅಧಿಕಾರಿ ಸಾರಂಗಿ ಅವರೊಂದಿಗಿನ ಮಾತುಕತೆ ಸಾಧ್ಯತೆ ಯನ್ನು ತಳ್ಳಿ ಹಾಕಿದರು. ಇವರಿಬ್ಬರೂ ಈಗಾಗಲೇ ಹಿಂಬಾಗಿಲ ಮಾತುಕತೆಗೆ ಸಿದ್ಧವಾಗಿದ್ದರು. ಮಾತುಕತೆಗೆ ಮಹಾ ರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌವಾಣ್‌ ಆಗಮಿಸಿದರೂ ತಾಮ ಮುಂದುವರಿಯುಮದಾಗಿಯೂ ಅಣ್ಣಾ ತಿಳಿಸಿದರು

No Comments to “ಪ್ರಧಾನಿ ಅಥವಾ ರಾಹುಲ ಬಂದರೆ ಮಾತ್ರ ಸಂಧಾನ”

add a comment.

Leave a Reply

You must be logged in to post a comment.