ಅಭಿಮನ್ಯು ಸೇರಿ ೫ ಆನೆಗಳ ಆಗಮನ, ಅದ್ಧೂರಿ ಆಚರಣೆಗೆ ಸಕಲ ಸಿದ್ಧತೆ

ಚಾಮುಂಡೇಶ್ವರಿ ವಿಗ್ರಹ ಹೊರಲಿರುವ
ಅಭಿಮನ್ಯು ನೇತೃತ್ವ ೫ ಆನೆಗಳ ತಂಡ,
ಎಲ್ಲಾ ಇಲಾಖೆಗಳ ಸ್ತಬ್ದಚಿತ್ರಗಳು,
ಸ್ಕೌಟ್‌, ಅಶ್ವದಳ, ಪೊಲೀಸ್‌ ಬ್ಯಾಂಡ್‌
ಗಳ ಮೆರವಣಿಗೆ, ೪೦ಕ್ಕೂ ಹೆಚ್ಚು ಕಲಾ
ತಂಡಗಳ ಆಗಮನ, ತಾಲ್ಲೂಕಿನಾದ್ಯಂತ
ದಸರ ಸ್ವಾಗತ ಕೋರುವ ಬಂಟಿಂಗ್ಸ್‌
ಗಳು, ವಿದ್ಯುತ್‌ ದೀಪಾಲಂಕಾರಗಳಿಂದ
ಸಿಂಗಾರಗೊಂಡಿರುವ ಪಟ್ಟಣ ಇದು
೪೦೦ ವರ್ಷಗಳ ಇತಿಹಾಸವಿರುವ
ಪಾರಂಪರಿಕ ಪಟ್ಟಣ ಶ್ರೀರಂಗಪಟ್ಟಣ
ದಸರಾದ ವಿಶೇಷಗಳು.
ಇದೇ ೩೦ರಿಂದ ೫ ದಿನಗಳ
ಕಾಲ ನಡೆಯಲಿರುವ ಶ್ರೀರಂಗಪಟ್ಟಣ
ದಸರಾ ಉತ್ಸವವನ್ನು ಮೈಸೂರು
ಮಾದರಿಯಲ್ಲಿ ಈ ಬಾರಿ ವಿಶಿಷ್ಟ ರೀತಿ
ಯಲ್ಲಿ ಆಚರಿ ಸಲು ತೀರ್ಮಾನಿಸಿದ್ದು,
ಇದಕ್ಕಾಗಿ ಸರ್ಕಾರದಿಂದ ೫೦ ಲಕ್ಷ
ರೂ. ಅನುದಾನ ಬಿಡುಗಡೆಯಾಗಿದೆ
ಎಂದು ಜಿ.ಪಂ. ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಜಿ.ಜಯರಾಂ
ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಈ ಬಾರಿಯ
ದಸರಾ ಆಚರಣೆಯನ್ನು ಅದ್ಧೂರಿ
ಯಾಗಿ ಆಚರಿಸುವ ಉದ್ದೇಶದಿಂದ
ತಾಲ್ಲೂಕಿನ ಪ್ರತಿ ಗ್ರಾ.ಪಂ.ನಲ್ಲೂ
ಉತ್ಸವದ ಕಟೌಟ್‌, ಬ್ಯಾನರ್‌, ಬಂಟಿಂಗ್ಸ್‌
ಗಳನ್ನು ಹಾಕಲು ಸೂಚಿಸಲಾಗಿದ್ದು,
ಶ್ರೀರಂಗಪಟ್ಟಣ ಮಾತ್ರವಲ್ಲದೆ
ತಾಲ್ಲೂಕು ಹಾಗೂ ಜಿಲ್ಲಾದ್ಯಂತ ಆಚರಿ
ಸುವಂತೆ ತಿಳಿಸಲಾಗಿದೆ ಎಂದರು.
ಸೆ.೩೦ರಂದು ಮಧ್ಯಾಹ್ನ ೨
ಗಂಟೆಗೆ ಕಿರಂಗೂರು ಬನ್ನಿಮಂಟಪ
ದಲ್ಲಿ ವೈಭವಯುತ ಜಂಬೂ ಸವಾರಿ
ಯನ್ನು ಖ್ಯಾತ ಸಾಹಿತಿ, ಜ್ಞಾನ ಪೀಠ
ಪ್ರಶಸ್ತಿ ಪುರಸ್ಕøತ ಡಾ.ಚಂದ್ರಶೇಖರ
ಕಂಬಾರ ಉದ್ಘಾಟಿಸಲಿದ್ದು, ಅಲ್ಲಿಂದ
ಆರಂಭವಾಗುವ ಜಂಬೂ ಸವಾರಿ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರ
ವಣಿಗೆ ಸಾಗಿ ಶ್ರೀರಂಗನಾಥಸ್ವಾಮಿ
ದೇವಾಲಯ ತಲುಪಲಿದೆ ಎಂದು
ಹೇಳಿದರು.
ಸಂಜೆ ೬ ಗಂಟೆಗೆ ನಡೆಯುವ
ಸಾಂಸ್ಕøತಿಕ ಕಾರ್ಯಕ್ರಮವನ್ನು ಗೃಹ
ಹಾಗೂ ಸಾರಿಗೆ ಮತ್ತು ಜಿಲ್ಲಾ ಉಸ್ತು
ವಾರಿ ಸಚಿವ ಆರ್‌.ಅಶೋಕ್‌ ಉದ್ಘಾ
ಟಿಸಲಿದ್ದು, ಶಾಸಕ ರಮೇಶ್‌ಬಂಡಿ
ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ನಡೆಯುವ
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ
ಚುನಾಯಿತ ಜನಪ್ರತಿನಿಧಿಗಳು ಭಾಗ
ವಹಿಸಲಿದ್ದಾರೆ ಎಂದರು.
ಉದ್ಘಾಟನಾ ದಿನದಂದು ವಿವಿಧ
ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯ
ಲಿದ್ದು, ಕರಕುಶಲ ವಸ್ತು, ಪುಸ್ತಕ, ವನ್ಯ
ಜೀವಿ ಛಾಯಾಚಿತ್ರಗಳ ಪ್ರದರ್ಶನ,
ವರ್ಣರಂಜಿತ ಅತ್ಯಾಕರ್ಷಕ ಬಾನ
ಬಿರುಸುಗಳ ಪ್ರದರ್ಶನ, ಸಂಗೀತ
ರಸಮಂಜರಿ ಹಾಗೂ ನೃತ್ಯ
ಪ್ರದರ್ಶಗಳು ನಡೆಯಲಿವೆ.
ಸೆ.೩೦ರಿಂದ ೫ ದಿನಗಳ ಕಾಲ
ನಡೆಯಲಿರುವ ಶ್ರೀರಂಗಪಟ್ಟಣ
ದಸರಾ ಮಹೋತ್ಸವದಲ್ಲಿ ವಿವಿಧ
ಕ್ರೀಡೆಗಳು, ವಿವಿಧ ಸಾಂಸ್ಕøತಿಕ
ಕಾರ್ಯಕ್ರಮಗಳು, ನಾಟಕಗಳು, ನೃತ್ಯ
ರೂಪಕಗಳು, ದಸರಾ ಕವಿ ಸಂಭ್ರಮ,
ಡೊಳ್ಳು ಕುಣಿತ, ಭರತ ನಾಟ್ಯ, ಸುಗಮ
ಸಂಗೀತ, ಯಕ್ಷಗಾನ, ಗೀತಗಾಯನ
ಕಾರ್ಯಕ್ರಮಗಳು ಪ್ರತಿನಿತ್ಯ ಪ್ರವಾಸಿ
ಗರು, ಪ್ರೇಕ್ಷಕರು ಹಾಗೂ ಕಲಾರಸಿಕ
ರನ್ನು ರಂಜಿಸಲಿವೆ ಎಂದರು.
ಜನರ ದಸರಾವಾಗಿ ಆಚರಣೆ:
ಶಾಸಕ ಎ.ಬಿ.ರಮೇಶ್‌ಬಂಡಿಸಿದ್ದೇಗೌಡ
ಮಾತನಾಡಿ, ಈ ಬಾರಿಯ ದಸರಾ
ವನ್ನು ಜನರ ಬಳಿಗೆ ಕೊಂಡೊಯ್ಯುವ
ಉದ್ದೇಶದಿಂದ ಸರ್ಕಾರದ ಆಚರಣೆ
ಯಾಗದೆ, ಇಡೀ ಜನರ ದಸರಾವಾಗಿ
ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಬಾರಿಯ ದಸರಾ ಆಚರಣೆ
ಸರ್ಕಾರ ೫೦ ಲಕ್ಷ ರೂ. ಅನುದಾನ
ನೀಡಿದ್ದು, ತಾಲ್ಲೂಕು ಹಾಗೂ ಜಿಲ್ಲೆಯ
ಜನತೆಯ ಪರವಾಗಿ ಸರ್ಕಾರಕ್ಕೆ
ಅಭಿನಂದನೆ ಸಲ್ಲಿಸಿದರು.
ಕೇಂದ್ರ ಪುರಾತತ್ವ ಇಲಾಖೆ
ಪಟ್ಟಣದಲ್ಲಿ ಸರ್ವೆ ಕಾರ್ಯ ನಡೆಸಿ
ಅದರ ವರದಿಯನ್ನು ಜಿಲ್ಲಾಧಿಕಾರಿಗ
ಳಿಗೆ ನೀಡಿದ್ದು, ಜಿಲ್ಲಾಧಿಕಾರಿಗಳ ಅಭಿ
ಪ್ರಾಯದಂತೆ ಪಟ್ಟಣ ನಾಗರಿಕರಿಗೆ
ಯಾಮದೇ ಅನಾನುಕೂಲವಾಗುಮ
ದಿಲ್ಲ. ಆದ್ದರಿಂದ ಪಟ್ಟಣದ ನಾಗರಿಕರು
ದಸರಾ ಆಚರಣೆಗೆ ಸಹಕಾರ
ನೀಡುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ
ಜಿ.ಪ್ರಭು, ತಹಸಿಲ್ದಾರ್‌ ಅರುಳ್‌ ಕುಮಾರ್‌,
ದಸರಾ ಉತ್ಸವ ಸಮಿತಿಯ ಎಲ್ಲಾ
ಪದಾಧಿಕಾರಿಗಳು ಉಪಸ್ಥಿತರಿದ್ದರು.

No Comments to “ಅಭಿಮನ್ಯು ಸೇರಿ ೫ ಆನೆಗಳ ಆಗಮನ, ಅದ್ಧೂರಿ ಆಚರಣೆಗೆ ಸಕಲ ಸಿದ್ಧತೆ”

add a comment.

Leave a Reply

You must be logged in to post a comment.