ಗುಂಡ್ಲುಪೇಟೆ: ಸಿಂಡಿಕೇಟ್‌ ಬ್ಯಾಂಕ್‌ ಗ್ರಾಹಕರ ಸಮಾವೇಶ

ಗುಂಡ್ಲುಪೇಟೆ,ಸೆ.೨೭-ಗ್ರಾಮೀಣ ಜನ ರಿಗೆ ಆರ್ಥಿಕ ಶಕ್ತಿ ತುಂಬಲು ಸಿಂಡಿಕೇಟ್‌ ಬ್ಯಾಂಕ್‌ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ಶಾಖೆಯ ಹಿರಿಯ ವ್ಯವಸ್ಥಾಪಕ ರಾಜಗೋಪಾಲರಾವ್‌ ತಿಳಿಸಿದರು. ಪಟ್ಟಣದ ಸಿಂಡಿಕೇಟ್‌ ಬ್ಯಾಂಕ್‌ ಆವ ರಣದಲ್ಲಿ ನಡೆದ ಗ್ರಾಹಕರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ನಮ್ಮ ಶಾಖೆ ೮೧ ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸಿದ್ದು, ರೈತರು ಮತ್ತು ಇತರೆ ಗ್ರಾಹಕರು ೬೦ ಕೋಟಿ ರೂ. ಕಡಿಮೆ ಬಡ್ಡಿ ದರದ ಸಾಲ ನೀಡಿದೆ ಎಂದರು. ಸಿಂಡಿಕೇಟ್‌ ಬ್ಯಾಂಕ್‌ ೨೫೫೦ಕ್ಕೂ ಹೆಚ್ಚು ಶಾಖೆಗಳಲ್ಲಿ ಗ್ರಾಹಕರ ಸಮಾವೇಶ ನಡೆಸಿ ಗ್ರಾಹಕರ ಕುಂದು ಕೊರತೆಯನ್ನು ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ೧೮ ರಿಂದ ೫೬ ವಯೊಮಾನದ ಗ್ರಾಹಕ ರಿಗೆ ಸಿಂಡ್‌ ಸುರಕ್ಷಾ ವಿಮೆ ನೀಡಲಾಗಿದೆ. ಎಸ್‌ಎಂಎಸ್‌ ಬ್ಯಾಂಕಿಂಗ್‌ ಸೇವೆಗೆ ೩೦ ಕ್ಕೂ ಹೆಚ್ಚು ಖಾತೆ ತೆರೆಯಲಾಗಿದೆ ಎಂದರು. ರೈತ ಮುಖಂಡ ಸಿ.ಎಂ.ಶಿವ ಮಲ್ಲಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖಂಡರಾದ ಕೊಡಸೋಗೆ ಶಿವಬಸಪ್ಪ, ಬೇರಂಬಾಡಿ ರಾಜೇಶ್‌, ಕನ್ನೇಗಾಲಸ್ವಾಮಿ, ಮಹದೇವಪ್ಪ, ಗೋಪಾಲಕೃಷ್ಣಭಟ್‌, ಸಾರಿಗೆ ಇಲಾಖೆಯ ಜಿ.ಎನ್‌.ನಾಗೇಶ್‌, ಶಿಕ್ಷಣ ಇಲಾಖೆಯ ಮಂಜುನಾಥ್‌ ಕೆ.ಪ್ರಭಾಕರಶೆಟ್ಟಿ, ಜಿ.ವಿ.ಶ್ರೀಕಾಂತ್‌, ವೀರನಪುರ ಬಸವಣ್ಣ, ಹಾಗೂ ಬ್ಯಾಂಕ್‌ ವ್ಯವಸ್ಥಾಪಕಿ ವೋನಿಕಾ, ಉಪ ವ್ಯವಸ್ಥಾಪಕ ಶಿವಕುಮಾರ್‌, ಕಾರ್ತಿಕ್‌, ಫೀಲ್ಡ್‌ ಆಫೀಸರ್‌ ಲಕ್ಷö್ಮಣ್‌, ತುಳಸಿ ನಾಯಕ್‌, ಸರೋಜಮ್ಮ, ಶ್ರೀನಿವಾಸಅರಸ್‌, ವೋಹನ್‌ರಾಮ್‌, ಕೆ.ವಿ.ನಾಗರಾಜು, ಪುಟ್ಟರಾಜು, ಮುರುಗನ್‌ ಹಾಜರಿದ್ದರು. ಬರಗಿ ಮತ್ತು ಕನ್ನೇಗಾಲ: ಶಾಖೆಯಲ್ಲೂ ಗ್ರಾಹಕರ ಸಮಾವೇಶ ನಡೆಸಲಾಯಿತು. ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸಯ್ಯ, ಅಕ್ಷಯ, ಸಿಬ್ಬಂದಿ ಮತ್ತು ಗ್ರಾಹಕರು ಹಾಜ ರಿದ್ದರು.

No Comments to “ಗುಂಡ್ಲುಪೇಟೆ: ಸಿಂಡಿಕೇಟ್‌ ಬ್ಯಾಂಕ್‌ ಗ್ರಾಹಕರ ಸಮಾವೇಶ”

add a comment.

Leave a Reply

You must be logged in to post a comment.