ಜಿಲ್ಲೆಯ ವಿವಿಧ ಗ್ರಾ.ಪಂ. ಚುನಾವಣಾ ಫಲಿತಾಂಶ ಪ್ರಕಟ

ಮಂಡ್ಯ, ಸೆ. ೨೯- ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ತೆರವಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆದಿದ್ದು ಫಲಿತಾಂಶ ಹೊರಬಿದ್ದಿದೆ. ಮಂಡ್ಯ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳಲ್ಲಿ ಮೂರು ಕ್ಷೇತ್ರಗಳಿಗೆ ಅವಿರೋಧ ಆಯ್ಕೆು ನಡೆದಿದ್ದು, ತಾಲ್ಲೂ ಕಿನ ಹೊಸಬೂದನೂರು ಗ್ರಾ. ಪಂ. ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಡಿ.ಕೆ. ಕೆಂಪೇಗೌಡ ಅವರು ಆಯ್ಕೆುಯಾಗಿದ್ದಾರೆ. ಚೀರನಹಳ್ಳಿ ಕಾಂಗ್ರೆsಸ್‌, ಹಳುವಾಡಿ ಮತ್ತು ರಾಯ ಶೆಟ್ಟಿಪುರದ ಜಾ.ದಳದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆುಯಾಗಿದ್ದಾರೆ. ಮದ್ದೂರು ವರದಿ: ವಿವಿಧ ಕಾರಣ ಗಳಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಗ್ರಾಪಂ ಉಪ ಚುನಾವಣೆಯಲ್ಲಿ ಈ ಕೆಳಕಂಡ ಗ್ರಾಪಂಗಳಿಂದ ನೂತನ ಸದ ಸ್ಯರು ಆಯ್ಕೆುಗೊಂಡಿದ್ದು, ಫಲಿತಾಂಶ ಇಂತಿದೆ. ಕದಲೂರು: ಕಳೆದ ೩೦ವರ್ಷ ಗಳಿಂದ ಇಲ್ಲಿನ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯೆು ಗೆಲುಮ ಸಾಧಿಸುತ್ತಿದ್ದು, ಈ ಬಾರಿಯೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಚಿಕ್ಕರಾಮೇಗೌಡ ೪೯೩ ಮತ ಪಡೆಯುವ ಮೂಲಕ ತಮ್ಮ ಸಮೀಪ ಸ್ಪರ್ಧಿ ತಿಮ್ಮಯ್ಯ( ೩೫೦) ಅವರನ್ನು ಒಟ್ಟು ೧೪೩ ಮತಗಳ ಅಂತರದಿಂದ ಪರಾಭವಗೊಳಿಸಿದರು. ಚಾಮನಹಳ್ಳಿ: ಇಲ್ಲಿ ನಡೆದ ಗ್ರಾಪಂ ಉಪ ಚುನಾವಣೆಯಲ್ಲಿ ರತ್ನಮ್ಮ ೫೭೩ ಮತ ಪಡೆಯುವ ಮೂಲಕ ಜಯ ಸಾಧಿಸಿದ್ದಾರೆ. ಇವರು ತಮ್ಮ ಸಮೀಪದ ಸ್ಪರ್ಧಿ ಪೂರ್ಣಿಮ(೩೩೨) ಅವರನ್ನು ೨೪೧ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ದೊಡ್ಡರಸಿನಕೆರೆ: ಇಲ್ಲಿನ ಮುಟ್ಟ ನಹಳ್ಳಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಎಂ.ವಿ.ರಮೇಶ್‌ ೪೮೨ಮತ ಪಡೆದು ತಮ್ಮ ಸಮೀಪದ ಸ್ಪರ್ಧಿ ಅರಕೇಶ್‌ (೩೪೪) ಅವರನ್ನು ೧೩೮ ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಡಿಲುವಾಗಿಲು: ಇಲ್ಲಿನ ಲಕ್ಷೆö್ಮಗೌಡನದೊಡ್ಡಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶಿಲ್ಪ ೪೭೨ ಮತ ಪಡೆದು ಸಮೀಪದ ಸ್ಪರ್ಧಿ ಅಂಬಿಕಾ(೪೦೪) ಅವರನ್ನು ೬೮ ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಾಂಡವಪುರ ವರದಿ: ತಾಲ್ಲೂಕಿನ ೨ ಗ್ರಾಮ ಪಂಚಾಯಿತಿಗೆ ನಡೆದ ಮರು ಚುನಾವಣೆ೦iುಲ್ಲಿ ಕೆನ್ನಾಳು ೨ನೇ ವಾರ್ಡಿನಲ್ಲಿ ರೈತ ಸಂಘದ ಬೆಂಬಲಿತ ಅಭ್ಯರ್ಥಿ ಎಸ್‌. ಮಮತಾ ಅವರು ೪೨೩ ಮತ ಪಡೆದು ಪ್ರತಿಸ್ಪರ್ಧಿ ಕೆ. ಆರ್‌. ಸಾವಿತ್ರಮ್ಮ ಅವರನ್ನು ೨೫೨ ಮತಗಳ ಅಂತರದಿಂದ ಮಣಿಸಿದ್ದಾರೆ. ಬನಘಟ್ಟ : ಗ್ರಾ. ಪಂ.ನ ಕನಗೋನ ಹಳ್ಳಿ ವಾರ್ಡಿನ ಜಾ.ದಳ ಬೆಂಬಲಿತ ಅಭ್ಯರ್ಥಿ ಪಿ.ಆರ್‌. ರಾಜೇಶ್‌ ೨೫೮ ಮತಗಳನ್ನು ಪಡೆದರೆ, ಕಾಂಗ್ರೆಸ್‌ ಬೆಂಬ ಲಿತ ರಾಮ೦iು್ಯ ೨೨೪ ಮತಗಳನ್ನು ಪಡೆದು, ೩೪ ಮತಗಳ ಅಂತರದಲ್ಲಿ ರಾಜೇಶ್‌ ಜ೦iು ಸಾಧಿಸಿದ್ದಾರೆ. ಎರಡು ಗ್ರಾ.ಪಂ.ಗಳಲ್ಲಿ ಅವಿ ರೋಧ ಆಯ್ಕೆುಯಾಗಿದ್ದು, ಕನಗನಮ ರಡಿ ಗ್ರಾ.ಪಂ.ನ ಚಿಕ್ಕಮರಳಿ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಬಿ.ಬಿ. ತಮ್ಮಣ್ಣ ಹಾಗೂ ನಾರಾಯಣಪುರ ಗ್ರಾ ಪಂ. ಮಾರ್ಮಹಳ್ಳಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಬಿ. ತಿಮ್ಮರಾಜು ಅವರು ಅವಿರೋ ಧವಾಗಿ ಆಯ್ಕೆಯಯಾದರು. ನಾಗಮಂಗಲ ವರದಿ: ತಾಲ್ಲೂಕಿನ ನಾಲ್ಕು ಗ್ರಾ.ಪಂ.ಗಳ ಮರು ಚುನಾವಣೆಯಲ್ಲಿ ಕದಬಳ್ಳಿ ಪಂಚಾ ಯಿತಿಯ ಸಿದ್ದಲಿಂಗಣ್ಣನವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದು ಜಾ.ದಳ ಬೆಂಬಲಿತ ಅಭ್ಯರ್ಥಿ ಕೆ.ಪಿ.ದೇವರಾಜು ೧೫೮ ಮತ ಗಳನ್ನು ಪಡೆದು ಕಾಂಗ್ರೆಸ್‌ನ ಹೊನ್ನೇ ಗೌಡ ಅವರನ್ನು ಪರಾಭವಗೊಳಿ ಸಿದರು. ಮಾಯಿಗೋನಹಳ್ಳಿ : ಗ್ರಾ. ಪಂ.ನ ಹೂವಿನಹಳ್ಳಿ ಮತ ಕ್ಷೇತ್ರದ ಹಾಲಿ ಜಿ. ಪಂ. ಸದಸ್ಯ ಚಂದ್ರು ಅವರ ರಾಜೀ ನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಶಂಕರೇ ಗೌಡ ೨೫೨ ಮತಗಳನ್ನು ಪಡೆದು ೧೯೬ ಮತಗಳನ್ನು ಪಡೆದ ಜಾ.ದಳದ ಗುರುಮೂರ್ತಿಯವರನ್ನು ಮಣಿಸಿದ್ದಾರೆ. ಹರದನಹಳ್ಳಿ : ಗ್ರಾ.ಪಂ.ನ ಯಳವನಹಳ್ಳಿ ವಾರ್ಡಿನ ವೆಂಕಟ ರಾಮು ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದು ಜಾ.ದಳ ಬೆಂಬಲಿತ ಚನ್ನಬಸಪ್ಪ ೨೪೬ ಮತಗಳನ್ನು ಪಡೆದು ಇದೇ ಪಕ್ಷದ ಬಂಡಾ೦iು ಅಭ್ಯರ್ಥಿ ಹನುಮಂತ ಅವರನ್ನು ಪರಾಭವಗೊಳಿಸಿದ್ದಾರೆ. ಶಾಂತಾಪುರ: ಗಾ. ಪಂ. ಎಸ್‌. ಮಲ್ಲಸಂದ್ರ ಗ್ರಾಮದ ನಾರಾಯಣ ಗೌಡರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಮಂಜುನಾಥ್‌ ೩೨೪ ಮತಗಳನ್ನು ಪಡೆದು ಜಾ.ದಳದ ಇಂದ್ರಮ್ಮ ಅವರನ್ನು ಸೋಲಿಸಿದರು. ಈ ಮೂಲಕ ತಾಲ್ಲೂಕಿನಲ್ಲಿ ಜಾ.ದಳ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳು ಸಮಬಲ ಸಾಧಿಸಿದಂತಾಗಿವೆ. ಮಳವಳ್ಳಿ ವರದಿ: ತಾಲ್ಲೂಕಿನಲ್ಲಿ ಖಾಲಿ ಉಳಿದಿದ್ದ ೪ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜಾ.ದಳ ಬೆಂಬಲಿತರು ತಲಾ ಎರಡೆರಡು ಸ್ಥಾನಗಳಲ್ಲಿ ಗೆಲುಮ ಸಾಧಿಸಿದ್ದಾರೆ. ಪಂಡಿತಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಾಚನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾಗಿದ್ದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಜುಳಾದೇವಿ ಅವರು ೩೫೨ ಮತ ಗಳೊಂದಿಗೆ ಜಯ ಗಳಿಸಿದರೆ ಇವರ ಪ್ರತಿಸ್ಪರ್ಧಿ ಮರಿಮಾದಮ್ಮ ೨೭೦ ಮತಗಳೊಂದಿಗೆ ಸೋಲನ್ನಪ್ಪಿದ್ದಾರೆ. ಜಿ.ಪಂ. ಸದಸ್ಯ ಜಕ್ರಿಯಾಖಾನ್‌ ರಾಜೀನಾಮೆಯಿಂದ ತೆರವಾಗಿದ್ದ ಕಿರುಗಾವಲು ಗ್ರಾ.ಪಂ. ನ ೪ನೇ ಕ್ಷೇತ್ರಕ್ಕೆ ನಡದ ಚುನಾವಣೆಯಲ್ಲಿ ೫೬೬ ಮತಗಳನ್ನು ಗಳಿಸಿ ಸೈಫುಲ್‌ ಅವರು ಜಯ ಸಾಧಿಸಿದ್ದರೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಖಲಿಮುಲ್ಲಾಖಾನ್‌ ೩೨, ಜಯಶಂಕರೇಗೌಡ ೦೨, ಮಹಮದ್‌ ಅಬ್ದುಲ್ಲಾ ೨೮೬, ಸೈಯದ್‌ಅಲ್ಫಾ ೦೬ ಮತಗಳನ್ನು ಗಳಿಸಿ ಪರಾಭವ ಗೊಂಡಿದ್ದಾರೆ. ಬಂಡೂರು ಗ್ರಾ.ಪಂ. ವ್ಯಾಪ್ತಿಯ ದಡದಪುರ ಗ್ರಾಮದ ಎರಡು ಸ್ಥಾನಗಳ ಪೈಕಿ ಬಿ ಸಿ ಎಂ(ಬಿ) ಗೆ ಮೀಸಲಾಗಿದ್ದ ಒಂದು ಸ್ಥಾನಕ್ಕೆ ಜಿ.ಗುರುಸ್ವಾಮಿ ಎಂಬು ವರು ಅವಿರೋಧವಾಗಿ ಆಯ್ಕೆು ಗೊಂಡಿದ್ದು ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದ ಮತ್ತೊಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ನಾಗರಾಜು ಅವರು ೬೮೦ ಮತಗಳಿಸಿ ಜಯ ಸಾಧಿ ಸಿದ್ದರೆ, ಡಿ ಎಲ್‌ ಓಂಪ್ರಕಾಶ್‌ ೧೭೧ ಮತಗಳನ್ನು ಮಾತ್ರ ಪಡೆದು ಸೋಲೊಪ್ಪಿಕೊಂಡಿದ್ದಾರೆ. ಆಯ್ಕೆುಯಾ ಗಿರುವ ನಾಲ್ವರು ಸದಸ್ಯರು ಜಾ.ದಳ ಹಾಗೂ ಕಾಂಗ್ರೆಸ್‌ನ ತಲಾ ಇಬ್ಬರು ಬೆಂಬಲಿಗತರಾಗಿದ್ದಾರೆ. ಕೃ.ರಾ.ಪೇಟೆ ವರದಿ: ತಾಲ್ಲೂಕಿ ನಲ್ಲಿ ನಡೆದ ವಿವಿಧ ಗ್ರಾ.ಪಂ.ಗಳ ತೆರವಾದ ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿವೆ. ಭಾರತಿಪುರ ಕ್ರಾಸ್‌ ಗ್ರಾ. ಪಂ. ಕೂಂದೂರಿನಿಂದ ನಡೆದ ಚುನಾ ವಣೆಯಲ್ಲಿ ಜಾ.ದಳ ಬೆಂಬಲಿತ ಮಾಲತಿ ಮಂಜುನಾಥ್‌ ಅವರು ೪೮೦ ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಜಯರಾಮ್‌ ವಿರುದ್ಧ ಭಾರೀ ಮತಗಳ ಅಂತರದಿಂದ ಆಯ್ಕೆುಯಾ ಗಿದ್ದಾರೆ. ಆನೆಗೊಳ ಗ್ರಾ.ಪಂ. ಸದಸ್ಯ ಕಡ ಹೆಮ್ಮಿಗೆ ಗ್ರಾಮದಿಂದ ತಾ.ಪಂ. ಸದಸ್ಯರಾಗಿ ಆಯ್ಕೆುಯಾಗಿರುವ ಧನಂಜಯ ಅವರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ವೆಂಕಟೇಶ್‌ ಅವರು ೪೧೪ ಮತಗ ಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಂಜುನಾಥ್‌ ವಿರುದ್ಧ ಆಯ್ಕೆುಯಾಗಿದ್ದಾರೆ. ಮಾದಾಪುರ ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ ಜಾ.ದಳ ಬೆಂಬಲಿತ ಎಂ.ಆರ್‌.ಕವಿತಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕೆಂಪಾಜಮ್ಮ ಅವರನ್ನು ಪರಾಭವಗೊಳಿಸಿ ಆಯ್ಕೆು ಯಾಗಿದ್ದಾರೆ. ಹರಿಹರಪುರ ಗ್ರಾಮದಲ್ಲಿ ತೆರವಾ ಗಿದ್ದ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೌಭಾಗ್ಯ ಮಂಜಯ್ಯ ಅವರು ಅವಿರೋಧವಾಗಿ ಆಯ್ಕೆುಯಾಗಿದ್ದಾರೆ. ಈ ನಾಲ್ಕೂ ಪಂಚಾಯಿತಿಗಳಿಗೆ ಕ್ರಮವಾಗಿ ಚುನಾವಣಾಧಿಕಾರಿಗಳಾಗಿ ಲೇಪಾಕ್ಷಿಗೌಡ, ಜೆ.ಜಿ.ರಾಜೇಗೌಡ, ಕೆಂಪಲಿಂಗಪ್ಪ ಹಾಗೂ ಸತೀಶ್‌ ಕಾರ್ಯನಿರ್ವಹಿಸಿದರು. ತಹಸಿಲ್ದಾರ್‌ ಡಾ.ಹೆಚ್‌.ಎಲ್‌.ನಾಗರಾಜ್‌, ತಾಲ್ಲೂಕು ಕಛೇರಿಯ ಚುನಾವಣಾ ಶಾಖೆಯ ಶಿರಸ್ತೇದಾರ್‌ ರಾಮಕೃಷ್ಣಪ್ಪ ಅವರು ವಿಜಯಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.

No Comments to “ಜಿಲ್ಲೆಯ ವಿವಿಧ ಗ್ರಾ.ಪಂ. ಚುನಾವಣಾ ಫಲಿತಾಂಶ ಪ್ರಕಟ”

add a comment.

Leave a Reply

You must be logged in to post a comment.