ಟಿ-೨೦: ಮುಗ್ಗರಿಸಿದ ಟ್ರಿನಿಡಾಡ್‌; ಗೆದ್ದ ಮುಂಬೈ

ಬೆಂಗಳೂರು, ಸೆ.೨೬-ಕಡೇ ಎಸೆತದವರೆಗೂ ಭಾರೀ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಟ್ರಿನಿಡಾಡ್‌ ಅಂಡ್‌ ಟೋಬಾಗೋ ವಿರುದ್ಧ ೧ ವಿಕೆಟ್‌ ರೋಮಾಂಚ ಕಾರಿ ಗೆಲುಮ ದಾಖಲಿಸಿದೆ. ಪ್ರಯಾಸದ ಗೆಲುಮ: ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ೯೯ ರನ್‌ಗಳ ಸಾಧಾರಣ ವೊತ್ತದ ಸವಾಲಿಗೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್‌ ತಂಡ ೩೩/೫ ವಿಕೆಟ್‌ ಸಂಕಷ್ಟದಲ್ಲಿಯೂ (೨೦ ಓವರ್‌) ಕೊನೆ ಎಸೆತದಲ್ಲಿ ಅಗತ್ಯವಿದ್ದ ೨ ರನ್‌ ಗಳಿಸಿ ಪ್ರಯಾಸದ ಗೆಲುಮ ಸಾಧಿಸಿತು. ಅಂಬಟಿ ರಾಯುಡು (೩೬) ಹಾಗೂ ಕೊನೆ ಆಟಗಾರ ಯಜುವೇಂದ್ರ ಚಂಚಲ್‌ ಮಿಂಚಿನ ೨ ರನ್‌ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಟ್ರಿನಿಡಾಡ್‌ನ ರವಿರಾಮ್‌ಪಾಲ್‌ (೧೭/೩) ಪ್ರಭಾವಿ ಹೋರಾಟ ವ್ಯರ್ಥವಾಯಿತು. ತಂಡದ ಕಳಪೆ ಫೀಲ್ಡಿಂಗ್‌ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿ ವಂತೆ ಮಾಡಿತು; ನಿರಾಶೆಗೆ ಕಾರಣವಾಯಿತು. ಅಲ್ಪವೊತ್ತಕ್ಕೆ ಆಲೌಟ್‌: ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಟ್ರಿನಿಡಾಡ್‌ ಅಂಡ್‌ ಟೋಬಾಗೋ ತಂಡ ಉತ್ತಮ ಆರಂಭದ ನಡುವೆಯೂ ಹಠಾತ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ೧೬.೨ ಓವರ್‌ ನಲ್ಲಿ ಕೇವಲ ೯೮ ರನ್‌ಗೆ ಸರ್ವಪತನಗೊಂಡಿತು. ಎದುರಾಳಿಗಳ ಬಿಗಿ ಬೌಲಿಂಗ್‌ ನಡುವೆ ಸಿಮನ್ಸ್‌ (೨೧), ಭರತ್‌ (೧೧), ಬ್ರಾವೋ (೧೮), ವೊಹಮ್ಮದ್‌ (೨೩) ಹಾಗೂ ನಾರೈನೇ (೧೧) ರನ್‌ ಹೊರತುಪಡಿಸಿದರೆ ಉಳಿದವರು ಸಂಪೂರ್ಣ ವಿಫಲರಾದರು. ಸ್ಪಿನ್‌ ವೋಡಿ ಮಾಡಿದ ಭಜ್ಜಿ ೩, ಮಾಲಿಂಗ ೨ ವಿಕೆಟ್‌ ಉರುಳಿಸಿದರು.

No Comments to “ಟಿ-೨೦: ಮುಗ್ಗರಿಸಿದ ಟ್ರಿನಿಡಾಡ್‌; ಗೆದ್ದ ಮುಂಬೈ”

add a comment.

Leave a Reply

You must be logged in to post a comment.