ನಾಡಕುಸ್ತಿ ವೈಭವಕ್ಕೆ ಸಂಭ್ರಮದ ಚಾಲನ

ಮೈಸೂರು, ಸೆ.೨೮-ನಾಡಹಬ್ಬ ದಸರಾ ಮಹೋ
ತ್ಸವದ ಪ್ರಮುಖ ಆಕರ್ಷಣೆಯಾದ ನಾಡ ಕುಸ್ತಿ ಪಂದ್ಯಕ್ಕೆ
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಎಸ್‌.ಎ.ರಾಮದಾಸ್‌ ಬುಧವಾರ ಚಾಲನೆ ನೀಡಿದರು.
ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ
ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭಗೊಂಡ ೬
ದಿನಗಳ ಕುಸ್ತಿ ವೈಭವದ ಉದ್ಘಾಟನೆ ಬಳಿಕ ಮಾತನಾ
ಡಿದ ಸಚಿವರು, ಮೈಸೂರಿನ ಸಾಂಸ್ಕøತಿಕ ಪ್ರತೀಕವಾಗಿ
ಕುಸ್ತಿ ಪರಂಪರೆ ಚಿರನೂತನವಾಗಿರಬೇಕು ಎಂದರು.
ಈ ನಿಟ್ಟಿನಲ್ಲಿ ಪೈಲ್ವಾನರಿಗೆ ಮತ್ತಷ್ಟು ಪ್ರೋತ್ಸಾಹದ
ಜೊತೆಗೆ ಕುಸ್ತಿ ವೀಕ್ಷಿಸಲು ಬರುವ ಪ್ರೇಕ್ಷಕರಿಗೂ ಸೌಲಭ್ಯ
ವಿಸ್ತರಿಸಲಾಗುಮದು. ಈ ನಿಟ್ಟಿನಲ್ಲಿ ಇದೇ ವರ್ಷದಲ್ಲಿ
ಪ್ರೇಕ್ಷಕರ ಗ್ಯಾಲರಿಗೂ ಮೇಲ್ಛಾವಣಿ ಹಾಕುವ ಕಾಮಗಾರಿ
ಯನ್ನು ಆರಂಭಿಸಿ ಪೂರ್ಣಗೊಳಿಸುಮದಾಗಿ ಭರವಸೆ ನೀಡಿದರು.
ಕುಸ್ತಿ ಕ್ರೀಡಾ ಜ್ಯೋತಿ: ಕೆ.ಜಿ.ಕೊಪ್ಪಲಿನ ಹಿರಿಯ
ಕುಸ್ತಿಪಟು ಪೈಲ್ವಾನ್‌ ಪುಟ್ಟಸ್ವಾಮಿ ಅವರು ಕೋಟೆ
ಮಾರಮ್ಮ ದೇವಸ್ಥಾನದಿಂದ ಕ್ರೀಡಾ ಜ್ಯೋತಿ ತಂದು
ಮಟ್ಟಿಯಲ್ಲಿ ನೆಟ್ಟರು.
ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾದ
ಮೈಸೂರು ಹತ್ತು ಜನ ಈಶ್ವರರಾಯರ ಗರಡಿಯ ಪೈಲ್ವಾನ್‌
ಕುಮಾರ್‌ ಹಾಗೂ ಮಂಡ್ಯ ಜಿಲ್ಲೆ ಶ್ರೀನಿವಾಸ ಅಗ್ರಹಾರದ
ಪೈಲ್ವಾನ್‌ ಜ್ಞಾನೇಶ್‌ ನಡುವಿನ ೧೫ ನಿಮಿಷಗಳ ಕಾದಾಟ
ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತು.
ಇಬ್ಬರೂ ಪೈಲ್ವಾನರು ಸಮ ಬಲದಿಂದ ಕಾದಾಡು
ತ್ತಿದ್ದರೆ ಪ್ರೇಕ್ಷಕರು ಸಿಳ್ಳೆ, ಕರತಾಡನದ ಮೂಲಕ ಪ್ರೋತ್ಸಾಹ
ನೀಡಿದರು. ಬಹು ಹೊತ್ತಿನ ವರೆಗೂ ಕುಸ್ತಿ ನಡೆಯಿತಾ
ದರೂ; ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ನಿರಾಶೆ ತಂದಿತು.
ಆಕರ್ಷಣೆ ನೀಡಿದ ಮೇಯರ್‌: ಭೂತಪ್ಪನವರ
ಗರಡಿಯ ಕಿಶೋರ್‌ ಹಾಗೂ ಶ್ರೀನಿವಾಸಣ್ಣ ಗರಡಿಯ
ವಿಷ್ಣುರಾಜ್‌ ನಡುವೆ ನಡೆದ ಎರಡನೇ ಪಂದ್ಯಕ್ಕೆ
ಮಹಾಪೌರರಾದ ಪುಷ್ಪಾಲತಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ
ಜೆ.ಸುನೀತಾ ವೀರಪ್ಪಗೌಡ ಚಾಲನೆ ನೀಡಿದರು. ಕೇಸರಿ
ಪೇಟ ಧರಿಸಿದ ಮಹಾಪೌರರಾದ ಪುಷ್ಪಾಲತಾ
ಟಿ.ಬಿ.ಚಿಕ್ಕಣ್ಣ, ಜಿ.ಪಂ.ಅಧ್ಯಕ್ಷೆ ಸುನೀತಾ ವೀರಪ್ಪಗೌಡ
ಅವರು ಪೈಲ್ವಾನರ ನಡುವೆ ಕೇಂದ್ರ ಬಿಂದುವಾಗಿದ್ದರು.
ಇದೇ ಸಂದರ್ಭದಲ್ಲಿ ದಾವಣಗೆರೆಯ ಭಗವಂತ
ಬೆಳಗಿ ಹಾಗೂ ಬೆಳಗಾವಿಯ ಅಮರ್‌ ಬಿರಡಿ ನಡುವಣ
ಪಾಯಿಂಟ್‌ ಕುಸ್ತಿ ಅರ್ಹತಾ ಸುತ್ತಿನ ಪಂದ್ಯಕ್ಕೆ ಚಾಲನೆ
ನೀಡಲಾಯಿತು. ಶಾಸಕ ಗೋ.ಮಧುಸೂದನ್‌, ಕರ್ನಾಟಕ
ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಕರ್ನಾಟಕ
ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್‌,
ಮುಡಾ ಅಧ್ಯಕ್ಷ ಎಲ್‌. ನಾಗೇಂದ್ರ, ಜಿಲ್ಲಾಧಿಕಾರಿ
ಪಿ.ಎಸ್‌.ವಸ್ತ್ರದ್‌, ನಗರ ಪೊಲೀಸ್‌ ಆಯುಕ್ತ ಸುನೀಲ್‌
ಅಗರವಾಲ್‌, ಕುಸ್ತಿ ಉಪ ಸಮಿತಿ ಅಧ್ಯಕ್ಷ ಅಮೃತ್‌
ಪುರೋಹಿತ್‌, ಕಾರ್ಯಾಧ್ಯಕ್ಷ ಪಿ.ವೆಂಕಟಸ್ವಾಮಿ ಮತ್ತಿತರರು
ಹಾಜರಿದ್ದರು.

No Comments to “ನಾಡಕುಸ್ತಿ ವೈಭವಕ್ಕೆ ಸಂಭ್ರಮದ ಚಾಲನ”

add a comment.

Leave a Reply

You must be logged in to post a comment.