ನಾಳೆ ದಸರಾ ಕ್ರೀಡಾಕೂಟಕ್ಕೆ ಕುಂಬ್ಳೆ ಚಾಲನ

ಮೈಸೂರು,ಸೆ.೨೮- ವೈಭವೋಪೇತ ದಸರಾಗೆ ಇನ್ನಷ್ಟು ಮೆರುಗು ನೀಡುವ
ಕ್ರೀಡಾಕೂಟ, ಈ ಬಾರಿ ಕೆಲ ವಿಶೇಷತೆ
ಗಳೊಂದಿಗೆ ಶುಕ್ರವಾರ ಪ್ರಾರಂಭವಾಗಲಿದೆ.
ನಾಲ್ಕು ದಿನಗಳ ಕಾಲ ನಡೆಯುವ ಈ ಕ್ರೀಡಾ
ಸಂಭ್ರಮಮ, ಒಲಿಂಪಿಕ್‌ ಮಾದರಿ ಉದ್ಘಾಟನೆ
ಹಾಗೂ ಅಂತಾರಾಷ್ಟ್ರೀಯ ಮಟ್ಟದ
ಕ್ರೀಡಾಪಟುಗಳ ಸಮಾಗಮ ಒಳಗೊಂಡಿದೆ.
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ
ಹಾಗೂ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಅನಿಲ್‌
ಕುಂಬ್ಳೆ ಕ್ರೀಡಾಕೂಟಕ್ಕೆ ಚಾಮುಂಡಿ ವಿಹಾರ
ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ೪ಕ್ಕೆ ಚಾಲನೆ ನೀಡಲಿದ್ದು, ಇದಕ್ಕೂ
ಮುನ್ನ ಕ್ರೀಡಾಜ್ಯೋತಿ ತಲುಪಿಸುವ ಸಾಂಪ್ರದಾಯಿಕ ಪದ್ಧತಿ ನೆರವೇರಲಿದೆ.
ಉದ್ಘಾಟನೆಗೆ ಚಾಲನೆ ಸಿಕ್ಕ ಬಳಿಕ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳ
ಮಾದರಿಯಲ್ಲಿ ಮನರಂಜನಾ ಕಾರ್ಯಕ್ರಮಗಳು ಕ್ರೀಡಾಂಗಣದಲ್ಲಿ ಸಂಭ್ರಮ
ತುಂಬಲಿವೆ.
ಕ್ರೀಡಾಕೂಟದ ಮತ್ತೊಂದು ಭಾಗವಾದ ದಸರಾ ಹಾಫ್‌ ಮ್ಯಾರಥಾನ್‌
ಅ.೨ರಂದು ನಡೆಯಲಿದ್ದು, ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಅರಮನೆ
ಮುಖ್ಯದ್ವಾರದಲ್ಲಿ ಅಂದು ಬೆಳಿಗ್ಗೆ ೬.೩೦ಕ್ಕೆ ಚಾಲನೆ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದಸರಾ ಕ್ರೀಡಾ ಉಪಸಮಿತಿ
ಅಧ್ಯಕ್ಷ ಎಂ.ದಾಸಯ್ಯ, ಜನಾಕರ್ಷಣೆಗಾಗಿ ಈ ಬಾರಿ ಸಾಂಸ್ಕøತಿಕ
ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕ್ರೀಡಾಕೂಟಕ್ಕೆ ಒಲಿಂಪಿಕ್‌
ಮಾದರಿ ಚಾಲನೆ ಸಿಗಲಿದೆ. ಪರಿಣಾಮ ಕ್ರೀಡಾಕೂಟದ ವೊದಲ ಕ್ರೀಡಾಜ್ಯೋತಿ
ಹಾಗೂ ಉದ್ಘಾಟನಾ ಸಮಾರಂಭವಷ್ಟೇ ನಡೆಯಲಿದೆ ಎಂದು ತಿಳಿಸಿದರು.
ಬಳಿಕ ಅಧಿಕೃತ ಉದ್ಘಾಟನೆ ಬಳಿಕ ಸಂಜೆ ೭ಕ್ಕೆ ಖ್ಯಾತ ಚಲನಚಿತ್ರ
ತಾರೆಯರ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಎಂದಿನಂತೆ
ಚಾಮುಂಡಿ ವಿಹಾರ ಕ್ರೀಡಾಂಗಣ ಹಾಗೂ ಮೈಸೂರು ವಿಶ್ವವಿದ್ಯಾಲಯ
ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ಏಕಕಾಲದಲ್ಲಿ ನಡೆಯಲಿವೆ. ಅ.೩ರಂದು ಸಂಜೆ
೪ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲೇ ನಡೆಯಲಿರುವ ಸಮಾರೋಪದಲ್ಲಿ
ವಿಜೇತರಿಗೆ ಒಟ್ಟು ೨೨ ಲಕ್ಷ ರೂ. ವೊತ್ತದ ಬಹುಮಾನ ವಿತರಿಸಲಾಗುಮದು.
ಕ್ರೀಡಾಕೂಟಕ್ಕೆ ನಾಲ್ಕು ವಿಭಾಗಗಳನ್ನು ಮಾಡಿಕೊಂಡಿದ್ದು, ಬೆಂಗಳೂರು
ಗ್ರಾಮಾಂತರ, ಬೆಂಗಳೂರು, ಬೆಳಗಾವಿ ಹಾಗೂ ಮೈಸೂರು ವಿಭಾಗಗಳಿಂದ
ತಂಡಗಳು ಭಾಗವಹಿಸಲಿವೆ. ಕ್ರೀಡಾಕೂಟದಲ್ಲಿ ಹೊಸ ದಾಖಲೆ
ದಸರಾ ಕ್ರೀಡಾಕೂಟದ ಬಜೆಟ್‌ ೬೮ ಲಕ್ಷ ರೂ.
ಮೈಸೂರು,ಸೆ.೨೮- ಈ ಬಾರಿಯ ದಸರಾ ಕ್ರೀಡಾಕೂಟದಲ್ಲೆ ಕೆಲ
ಕ್ರೀಡೆಗಳನ್ನು ಹೊಸದಾಗಿ ಸೇರಿಸಿರುಮದಲ್ಲದೇ, ಮನೋರಂಜನಾ
ಕಾರ್ಯಕ್ರಮ ಹಮ್ಮಿಕೊಂಡಿರುಮದರಿಂದ ಕ್ರೀಡಾಕೂಟದ ಬಜೆಟ್‌ ಈ
ಬಾರಿ ೬೮ ಲಕ್ಷ ರೂ.ಗೆ ಹಿಗ್ಗಿದೆ ಎಂದು ದಸರಾ ಕ್ರೀಡಾ ಉಪಸಮಿತಿ
ಅಧ್ಯಕ್ಷ ಎಂ.ದಾಸಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯ ಕ್ರೀಡಾಕೂಟಕ್ಕೆ ೩೦ ಲಕ್ಷ
ರೂ. ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಇನ್ನೂ ೨೫ ಲಕ್ಷ
ರೂ. ಅಗತ್ಯವಿದೆ ಎಂದು ಹೇಳಿದರು.
ಈಗಾಗಲೇ ವಿವಿಧ ಟೆಂಡರ್‌ಗಳಿಗೆ ೨೧ ಲಕ್ಷ ರೂ. ವ್ಯಯವಾಗುತ್ತಿದೆ.
ಇದರಲ್ಲಿ ಊಟ, ವಸತಿ, ಸಮವಸ್ತ್ರ ಎಲ್ಲವೂ ಸೇರಿವೆ ಎಂದು ಹೇಳಿದರು.
ಉಪಸಮಿತಿ ಕಾರ್ಯದರ್ಶಿ ಹಾಗೂ ಯುವಜನ ಸೇವಾ ಮತ್ತು
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರೂ ಆದ ಕೆ.ಸುರೇಶ್‌
ಮಾತನಾಡಿ, ಯಾಮದೇ ರೀತಿಯಲ್ಲೂ ಲೋಪವಾಗದಂತೆ ಕ್ರೀಡಾಪಟುಗಳಿಗೆ
ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸಲಾಗುಮದು. ಕ್ರೀಡಾ ಶೂಗಳೂ
ಕೂಡ ಉತ್ತಮ ಗುಣಮಟ್ಟದ್ದಾಗಿರುತ್ತವೆ ಎಂದು ಹೇಳಿದರು.
ನಿರ್ಮಿಸುವವರಿಗೆ ೧೦,೦೦೦ ಸಾವಿರ ರೂ. ವಿತರಿಸಲಾಗುಮದು. ವ್ಯಯಕ್ತಿಕ
ವಿಭಾಗಗಳ ವಿಜೇತರಿಗೆ (ಪ್ರ-೫೦೦೦ ರೂ., ದ್ವಿ-೩೦೦೦ ರೂ., ತೃ-
೧೫೦೦ ರೂ.), ಗುಂಪು ವಿಭಾಗಗಳ ವಿಜೇತರಿಗೆ (ಪ್ರ-೨೦೦೦ ರೂ., ದ್ವಿ-
೧೫೦೦ ರೂ., ತೃ-೧೦೦೦ ರೂ.) ವಿತರಿಸಲಾಗುತ್ತದೆ.
ಅಥ್ಲೆಟಿಕ್ಸ್‌, ಬ್ಯಾಸ್ಕೆಟ್‌ ಬಾಲ್‌, ಬಾಲ್‌ ಬ್ಯಾಡ್ಮಿಂಟನ್‌, ಬ್ಯಾಡ್ಮಿಂಟನ್‌,
ದೇಹದಾಡs್ಯರ್ ಸ್ಪರ್ಧೆ, ಫುಟ್‌ಬಾಲ್‌, ಜಿಮ್ನಾಸ್ಟಿಕ್‌, ಹ್ಯಾಂಡ್‌ ಬಾಲ್‌, ಹಾಕಿ,
ಕಬಡ್ಡಿ, ಖೋ-ಖೋ, ನೆಟ್‌ ಬಾಲ್‌, ಈಜು, ಟೇಬಲ್‌ ಟೆನ್ನಿಸ್‌, ಟೆನ್ನಿಸ್‌,
ಥ್ರೋಬಾಲ್‌, ಟೇಕ್ವಾಂಡೋ, ವಾಲಿಬಾಲ್‌, ಚೆಸ್‌, ಸ್ಕೇಟಿಂಗ್‌, ದಸರಾ ಹಾಫ್‌
ಮ್ಯಾರಥಾನ್‌ ಸೇರಿದಂತೆ ಒಟ್ಟು ೨೪ ವಿವಿಧ ಸ್ಪರ್ಧೆಗಳು ಆಯಾ ದಿನಗಳಲ್ಲಿ ನಡೆಯಲಿವೆ.
ಈ ಬಾರಿ ಟೇಕ್ವಾಂಡೋ ಹಾಗೂ ನೆಟ್‌ ಬಾಲ್‌ ಹೊಸದಾಗಿ ಸೇರಿಸುವ ಕ್ರೀಡೆಗಳು.
ಸುಮಾರು ೨,೫೦೦ ಮಂದಿಯಷ್ಟು ಈ ಕೂಟದಲ್ಲಿ ಭಾಗವಹಿಸುತ್ತಿದ್ದು,
ಅವರಿಗೆಲ್ಲಾ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಂಜರಾಜ
ಬಹದ್ದೂರ್‌ ಛತ್ರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ವಸತಿ ಸೌಲಭ್ಯಕ್ಕಾಗಿ
ನಗರದ ವಿವಿಧ ೯ ಕಲ್ಯಾಣ ಮಂಟಪ ಹಾಗೂ ಸಭಾಂಗಣಗಳನ್ನು
ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ, ತುರ್ತು ಆರೋಗ್ಯ ಸೇವೆಗಾಗಿ ಎರಡು

No Comments to “ನಾಳೆ ದಸರಾ ಕ್ರೀಡಾಕೂಟಕ್ಕೆ ಕುಂಬ್ಳೆ ಚಾಲನ”

add a comment.

Leave a Reply

You must be logged in to post a comment.