ಭಜ್ಜಿ ಔಟ್‌, ಸಚಿನ್‌, ಸೆಹ್ವಾಗ್‌ಗೆ ವಿಶ್ರಾಂತಿ

ಲಯ ಕಳೆದುಕೊಂಡಿರುವ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅವರನ್ನು ಬಿಸಿಸಿಐ ಆಯ್ಕೆು ಸಮಿತಿ ಮುಂಬರುವ ಇಂಗ್ಲೆಂಡ್‌-ಭಾರತ ನಡುವಣ ೫ ಏಕದಿನ ಪಂದ್ಯಗಳ ಸರಣಿಯ ವೊದಲ ಎರಡು ಪಂದ್ಯಗಳಿಂದ ಕೈಬಿಟ್ಟಿದೆ. ವಿರೇಂದ್ರ ಸೆಹ್ವಾಗ್‌ ಹಾಗೂ ಸಚಿನ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್‌ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅ.೧೪ರಿಂದ ಆರಂಭವಾಗಲಿರುವ ಸರಣಿಗೆ ತಂಡವನ್ನು ಆಯ್ಕೆು ಮಾಡಲಾಯಿತು. ಕರ್ನಾಟಕದ ವೇಗಿ ವಿನಯ್‌ ಕುಮಾರ್‌ ಹಾಗೂ ಎಸ್‌.ಅರವಿಂದ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದು, ಭಜ್ಜಿ ಬದಲಿಗೆ ಎಡಗೈ ಸ್ಪಿನ್‌ ಮಾಂತ್ರಿಕ ಯುವ ಆಟಗಾರ ರಾಹುಲ್‌ ಶರ್ಮಾ ಅವರಿಗೆ ಸ್ಥಾನ ನೀಡಲಾಗಿದೆ. ಆರ್‌.ಅಶ್ವಿನ್‌ ಅವರೂ ತಂಡದಲ್ಲಿ ಉಳಿದುಕೊಂಡಿದ್ದಾರೆ. ಮಂದ ದೃಷ್ಟಿಯಿಂದ ಇಂಗ್ಲೆಂಡ್‌ ಪ್ರವಾಸದ ಅಂತಿಮ ಪಂದ್ಯಗಳಲ್ಲಿ ಕಾಣಿಸಿಕೊಳ್ಳದಿದ್ದ ಗೌತಮ್‌ ಗಂಭೀರ್‌ ತಂಡಕ್ಕೆ ಮರಳಿದ್ದಾರೆ. ಉಳಿದಂತೆ ವೇಗಿ ಉಮೇಶ್‌ ಯಾದವ್‌ ಮತ್ತು ಜಾರ್ಖಂಡ್‌ ವೇಗಿ ವರುಣ್‌ ಆರೊನ್‌ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಹೀಗೆ ಒಟ್ಟು ಐವರು ವೇಗಿಗಳು ಹಾಗೂ ಮೂವರು ಸ್ಪಿನ್ನರ್‌ಗಳಿರುವ ತಂಡವನ್ನು ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಸಿದ್ಧಪಡಿಸಲಾಗಿದೆ. ಒಟ್ಟಿನಲ್ಲಿ ಗಾಯಗೊಂಡು, ಕಳೆದ ಸರಣಿಯಲ್ಲಿ ತಂಡಕ್ಕೆ ಅಲಭ್ಯರಾಗಿದ್ದ ತೆಂಡೂಲ್ಕರ್‌, ಸೆಹ್ವಾಗ್‌, ಯುವರಾಜ್‌ ಸಿಂಗ್‌, ರೋಹಿತ್‌ ಶರ್ಮಾ, ಜಹೀರ್‌ ಖಾನ್‌, ಮುನಾಫ್‌ ಮತ್ತು ಇಶಾಂತ್‌ ಮತ್ತೆ ತಂಡಕ್ಕೆ ಅಲಭ್ಯರಾಗಿದ್ದಾರೆ.

No Comments to “ಭಜ್ಜಿ ಔಟ್‌, ಸಚಿನ್‌, ಸೆಹ್ವಾಗ್‌ಗೆ ವಿಶ್ರಾಂತಿ”

add a comment.

Leave a Reply

You must be logged in to post a comment.