ವರುಣಾ ಕೆರೆಯಲ್ಲಿ ಜಲ ಸಾಹಸೋತ್ಸವ

ಮೈಸೂರು, ಸೆ.೨೯-ಸಾಂಸ್ಕøತಿಕ ನಗ ರಿಯ ವರುಣಾ ಕೆರೆಯಲ್ಲಿ ಜಲ ಸಾಹ ಸೋತ್ಸವಕ್ಕೆ (ಸಾಹಸ ಕ್ರೀಡೆಗಳಿಗೆ) ಚಾಲನೆ ದೊರೆಯಿತು. ಮೈಸೂರಿನ ಹೊರವಲಯದ ಮೈಸೂರು – ಟಿ.ನರಸೀಪುರ ಮಾರ್ಗದಲ್ಲಿರುವ ಕೆರೆಯಲ್ಲಿ ದಸರಾ ಸಾಹಸ ಕ್ರೀಡಾ ಉಪಸಮಿತಿಯು ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೊಗದಲ್ಲಿ ಹಮ್ಮಿ ಕೊಳ್ಳಲಾಗಿರುವ `ಸಾಹಸ ಕ್ರೀಡಾ ಕಾರ್ಯ ಕ್ರಮವನ್ನು ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡ `ಜೆಟ್‌ಸ್ಕೀಯಿಂಗ್‌\’ ಚಾಲನೆ ಮೂಲಕ ಉದ್ಘಾಟಿಸಿದರು. ಊರಿಗೊಂದು ಕ್ರೀಡಾಂಗಣ ಇರಲಿ: ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ರಾಜೂಗೌಡ ಅವರು, ಸಾಹಸ ಕ್ರೀಡೆಗಳಿಂದ ಆತ್ಮಸ್ಥೆöೖರ್ಯ; ಮನೋಬಲ ಹೆಚ್ಚುತ್ತದೆ. ಕಠಿಣ ಸವಾಲುಗಳನ್ನೂ ದಿಟ್ಟವಾಗಿ ಎದುರಿಸುವ ಮನೋಭಾವ ಬೆಳೆಯುತ್ತದೆ. ಆದರೆ ಆಧುನಿಕತೆ ಜೀವನ ಶೈಲಿಯಿಂದಾಗಿ ನಾವೆಲ್ಲ ಕ್ರೀಡೆಗಳಿಂದ ದೂರ ಉಳಿದು ಸೋಮಾರಿ ಗಳಾಗುತ್ತಿದ್ದೇವೆ ಎಂದು ಹೇಳಿದರು. ಯುವಸಮೂಹವನ್ನು ಕ್ರೀಡೆಗಳತ್ತ ಆಕರ್ಷಿಸಲು ಒತ್ತು ನೀಡುವ ನಿಟ್ಟಿನಲ್ಲಿ ಊರಿ ಗೊಂದು ಕ್ರೀಡಾಂಗಣ ನಿರ್ಮಾಣ ವಾಗಬೇಕಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ. ರಾಮದಾಸ್‌, ಸಾಹಸ ಕ್ರೀಡೆಗಳು ಯುವ ಜನತೆಯಲ್ಲಿ ಗುರಿ ತೋರುತ್ತವೆ. ಯಾಮದೇ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ತುಂಬುತ್ತವೆ ಎಂದು ಸಾಹಸ ಕ್ರೀಡೆಗಳ ಉಪಯೊಗದ ಬಗ್ಗೆ ಮಾತನಾಡಿದರು. ಉದ್ಘಾಟನಾ ಬಳಿಕ ಸಚಿವರಾದ ರಾಜೂಗೌಡ, ರಾಮದಾಸ್‌, ಉಪಮೇಯರ್‌ ರವಿಕುಮಾರ್‌, ಜಿ.ಪಂ.ಉಪಾಧ್ಯಕ್ಷ ಡಾ.ಶಿವರಾಂ ಮತ್ತಿತರರು ಜೆಟ್‌ ಸ್ಕೀಯಿಂಗ್‌ (ಜಲ ವೋಟಾರ್‌ ಬೈಕ್‌ ) ಸವಾರಿ ನಡೆಸಿ ಉತ್ಸವಕ್ಕೆ ಉತ್ಸಾಹ ತುಂಬಿದರು. ಕೈಕೊಟ್ಟ ಬೋಟ್‌: ಮೇಯರ್‌ ಪುಷ್ಪಲತಾ, ಜಿ.ಪಂ. ಅಧ್ಯಕ್ಷೆ ಸುನೀತಾವೀರಪ್ಪಗೌಡ ಮತ್ತಿತರರು ಜೀವರಕ್ಷಕ ಜಾಕೆಟ್‌ ತೊಟ್ಟು ಬೋಟಿನಲ್ಲಿ ವಿಹರಿಸಲು ಸಜ್ಜಾದರು. ಆದರೆ, ತಾಂತ್ರಿಕ ತೊಂದರೆ ಯಿಂದಾಗಿ ಬೋಟ್‌ ಚಾಲೂ ಆಗಲೇ ಇಲ್ಲ. ದುರಸ್ತಿಗೆ ಯತ್ನಿಸಿದರೂ ಸರಿಯಾಗಲಿಲ್ಲ. ಕೊನೆಗೆ ಅವರೆಲ್ಲಾ ನಿರಾಶೆಯಿಂದ ಹಿಂದಿರುಗಿದರು. ಮಾಜಿ ಶಾಸಕ ಬಾಲರಾಜ್‌, ಸಮಿತಿ ಉಪವಿಶೇಷಾಧಿಕಾರಿ ಮನೀಶ್‌ ಕರ್ಬಿಕರ್‌, ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಹಾಗೂ ಸದಸ್ಯರು ಹಾಜರಿದ್ದರು. ಆರು ದಿನಗಳ ಕಲರವ: ವರುಣ ಕೆರೆ ಯಲ್ಲಿ ಆರು ದಿನಗಳ ಕಾಲ ಸಾಹಸ ಕ್ರೀಡೆಗಳ ಕಲರವ ಇರಲಿದೆ. ಯುವ ಸಮೂಹ, ಕಾಲೇಜು ವಿದ್ಯಾರ್ಥಿಗಳಾದಿಯಾಗಿ ನಾಗರಿಕರು ಜೆಟ್‌ ಸ್ಕೀಯಿಂಗ್‌, ವೋಟಾರ್‌ ಬೋಟ್‌ ರೈಡ್‌, ಬನಾನ ರೈಡ್‌, ಕಯಾಕಿಂಗ್‌ ವೊದಲಾದ ಸಾಹಸ ಕ್ರೀಡೆಗಳಿಗೆ ನಿಗದಿತ ಶುಲ್ಕ ಪಾವತಿಸಿ ಸಾಹಸ ಕ್ರೀಡೆಗಳ ಅನುಭವ ಪಡೆಯಬಹುದಾಗಿದೆ.

No Comments to “ವರುಣಾ ಕೆರೆಯಲ್ಲಿ ಜಲ ಸಾಹಸೋತ್ಸವ”

add a comment.

Leave a Reply

You must be logged in to post a comment.