ವಿದ್ಯುತ್‌, ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಮಂಡ್ಯ,ಸೆ.೨೮-ವಿದ್ಯುತ್‌, ನೀರು,
ಅಡುಗೆ ಅನಿಲ ಹಾಗೂ ಇತರೆ ಮೂಲ
ಭೂತ ಸೌಕರ್ಯಗಳ ಸಮಸ್ಯೆ ಪರಿಹರಿ
ಸುವಂತೆ ಶಾಸಕ ಸಿ.ಎಸ್‌.ಪುಟ್ಟರಾಜು
ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, ಸರ್ಕಾರ ಜಿಲ್ಲೆಯನ್ನು
ಕಗ್ಗತ್ತಲಿಗೆ ದೂಡಿದೆ. ಕಳೆದ ಒಂದು
ವಾರದಿಂದ ಸರಿಯಾಗಿ ವಿದ್ಯುತ್‌
ನೀಡುತ್ತಿಲ್ಲ,.ಇದರಿಂದಾಗಿ ಕುಡಿಯುವ
ನೀರಿನ ಸಮಸ್ಯೆ ಎದುರಾಗಿದೆ.
ಜಿಲ್ಲೆಯಲ್ಲಿ ಸರಿಯಾದ ಪ್ರಮಾಣದಲ್ಲಿ
ಮಳೆ ಬಿದ್ದಿಲ್ಲ, ಜಿಲ್ಲಾ ಉಸ್ತುವಾರಿ
ಸಚಿವರು ಜಿಲ್ಲೆಯ ಕಡೆಗೆ ತಿರುಗಿಯೂ
ನೋಡಿಲ್ಲ. ವಿದ್ಯುತ್‌ ಕಡಿತ ಮಾಡುವ
ಯಾಮದೇ ಸೂಚನೆ ನೀಡದೆ ವಿದ್ಯುತ್‌
ತೆಗೆಯುತ್ತಿರುಮದ ರಿಂದ ಈ ಸಮಸ್ಯೆ
ಎದುರಾಗಿದೆ ಎಂದರು.
ಅಡುಗೆ ಅನಿಲ ವಿತರಣೆಯ
ಲ್ಲಿಯೂ ಸಮಸ್ಯೆ ತಲೆದೂರಿದೆ. ಸೀಮೆ
ಎಣ್ಣೆಯೂ ಸಮರ್ಪಕ ರೀತಿಯಲ್ಲಿ
ದೊರೆಯುತ್ತಿಲ್ಲ. ಇದರಿಂದಾಗಿ ನಾಗರಿ
ಕರು ಕಗ್ಗತ್ತಲ್ಲಲ್ಲಿ ಬದುಕು ನಡೆಸುವ
ಪರಿಸ್ಥಿತಿ ಎದುರಾಗಿದೆ. ಸಂಧ್ಯಾ ಸುರಕ್ಷಾ,
ವಿಧವೆ, ವೃದ್ಧಾಪ್ಯ ವೇತನಗಳು ಕಳೆದ
೭-೮ ತಿಂಗಳಿಂದ ಬಿಡುಗಡೆಯಾಗದೆ
ಕಡುಬಡವರು ಕಷ್ಟದಲ್ಲಿ ಬದುಕು
ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಗ್ರಾಮೀಣ
ಪ್ರದೇಶಗಳ ರಸ್ತೆಗಳ ಸ್ಥಿತಿ ಅದೋಗತಿ
ಗಿಳಿದಿದೆ ಎಂದು ಆಪಾದಿಸಿದರು.
ಸಿಎಂಗೆ ಮನವಿ:ಈ ಎಲ್ಲಾ ಸಮ
ಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ
ಒತ್ತಾಯಿಸಿ, ದಸರಾ ಉದ್ಘಾಟನೆಗೆಂದು
ಆಗಮಿಸಿದ್ದ ಮುಖ್ಯಮಂತ್ರಿ ಡಿ.ವಿ.ಸದಾ
ನಂದಗೌಡ ಅವರಿಗೆ ಮನವಿ ಪತ್ರ
ಅರ್ಪಿಸ ಲಾಯಿತು. ಮನವಿಗೆ
ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು
ವೃದ್ಧಾಪ್ಯ, ವಿಧವಾ ವೇತನಗಳ ಬಿಡು
ಗಡೆಗೆ ಕೂಡಲೇ ಕ್ರಮ ಕೈಗೊಳ್ಳುತ್ತೇನೆ,
ಜಿಲ್ಲೆಯಲ್ಲಿನ ವಿದ್ಯುತ್‌,ಅಡುಗೆ ಅನಿಲ,
ಕುಡಿಯುವ ನೀರಿನ ಸಮಸ್ಯೆ ಕುರಿತಂತೆ
ಜಿಲ್ಲಾ ಉಸ್ತು ವಾರಿ ಸಚಿವರು ೨-೩
ದಿನದಲ್ಲಿ ಸಭೆ ನಡೆಸಿ, ಕ್ರಮ ಕೈಗೊಳ್ಳು
ವಂತೆ ಸೂಚಿಸುತ್ತೇನೆ ಎಂದು
ತಿಳಿಸಿದ್ದಾಗಿ ಹೇಳಿದರು.
ಒಂದು ವೇಳೆ ವಾರದೊಳಗಾಗಿ
ಸಮಸ್ಯೆ ಪರಿಹರಿಸದಿದ್ದರೆ, ಉಗ್ರ
ಹೋರಾಟ ರೂಪಿಸಬೇಕಾಗುತ್ತದೆ
ಎಂದು ಪುಟ್ಟರಾಜು ಎಚ್ಚರಿಸಿದರು.
ಹೇಮಾವತಿ ಜಲಾಶಯದಿಂದ
ನೀರು ಬಿಟ್ಟು ಜಿಲ್ಲೆಯ ಪಾಂಡವಪುರ,
ನಾಗಮಂಗಲ ಪ್ರಾಂತ್ಯಗಳ ಕೆರೆ ಕಟ್ಟೆ
ಗಳನ್ನು ತುಂಬಿಸಬೇಕು. ಜಿಲ್ಲಾಡಳಿತ
ಇತ್ತ ಗಮನಹರಿಸಿ ಈ ವಿಷಯವನ್ನು
ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಚಿವೆ ಶೋಭಾ ಕರಂದ್ಲಾಜೆ
ಅವರು ವಿದ್ಯುತ್‌ ಸಮಸ್ಯೆಗೆ ತೆಲಂಗಾಣ
ಬಿಕ್ಕಟ್ಟು ಕಾರಣ ಎಂದು ನೆಪ ಹೇಳುತ್ತಿ
ದ್ದಾರೆ. ಜವಾಬ್ದಾರಿಯಿಂದ ನುಣಚಿ
ಕೊಳ್ಳುವ ಸಲುವಾಗಿ ಇದೆಲ್ಲಾ ಸುಳ್ಳು
ಹೇಳುತ್ತಿದ್ದಾರೆ. ಇಚ್ಛಾ ಶಕ್ತಿ ಇದ್ದರೆ
ಸಮಸ್ಯೆ ಪರಿಹರಿಸುಮದು ಕಷ್ಟವೇನೆಲ್ಲ
ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರು
ಗಳಾದ ಎಂ.ಶ್ರೀನಿವಾಸ್‌, ರಮೇಶ್‌
ಬಂಡಿಸಿದ್ದೇಗೌಡ, ಕಲ್ಪನ ಸಿದ್ದರಾಜು,
ಜಿ.ಪಂ ಅಧ್ಯಕ್ಷ ಎಂ.ಶಿವಣ್ಣ, ಮುಖಂಡ
ಕೆ.ಸಿ.ರಮೇಶ್‌ ಉಪಸ್ಥಿತರಿದ್ದರು.

No Comments to “ವಿದ್ಯುತ್‌, ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ”

add a comment.

Leave a Reply

You must be logged in to post a comment.