ಸೌತ್‌ ಆಸ್ಟ್ರೇಲಿಯಾಗೆ ಗೆಲುಮ

ಹೈದರಾಬಾದ್‌, ಸೆ.೨೭- ಫರ್ಗುಸನ್‌ (೭೦ಶ್ರೀ) ಅವರ ಅಜೇಯ ಅರ್ಧ ಶತಕದ ನೆರವಿನಿಂದ ಸೌತ್‌ ಆಸ್ಟ್ರೇಲಿಯಾ ತಂಡ, ಕೋಲ್ಕೊತ್ತಾ ನೈಟ್‌ ರೈಡರ್ಸ್‌ ವಿರುದ್ಧ ೧೯ ರನ್‌ಗಳ ಸುಲಭ ಗೆಲುಮ ದಾಖಲಿಸಿದೆ. ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್‌-ಬಿ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಸೌ.ಆಸ್ಟ್ರೇಲಿಯಾ ತಂಡ ಕಲ್ಲಮ್‌ ಫರ್ಗುಸನ್‌ ಹಾಗೂ ಡೇನಿಯಲ್‌ ಕ್ರಿಶ್ಚಿಯನ್‌ (೪೨) ಅವರ ಅತ್ಯದ್ಭುತ ಬ್ಯಾಟಿಂಗ್‌ ನೆರವಿನಿಂದ ೨೦ ಓವರ್‌ಗಳಲ್ಲಿ ೧೮೮ ರನ್‌ ಭಾರೀ ವೊತ್ತ ದಾಖಲಿಸಿತು. ೧೮೯ ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕೊತ್ತಾ ನೈಟ್‌ರೈಡರ್ಸ್‌ ೨೦ ಓವರ್‌ಗಳಲ್ಲಿ ೧೬೯ ರನ್‌ ಗಳಿಸಲಷ್ಟೇ ಶಕ್ತವಾಯಿತು. ಆರಂಭದಲ್ಲೇ ೨ ವಿಕೆಟ್‌ ಕಳೆದುಕೊಂಡು, ಆಘಾತ ಅನುಭವಿಸಿದ ಕೋಲ್ಕೊತ್ತಾ ನೈಟ್‌ರೈಡರ್ಸ್‌ಗೆ ಜಾಕ್‌ ಕಾಲಿಸ್‌ (೨೦), ಮನೋಜ್‌ ತಿವಾರಿ (೪೦) ಹಾಗೂ ಡೆಯೊಸ್ಚಾಟ್‌ (೩೨) ನೆರವಾದರಾದರೂ ತಂಡದ ಗೆಲುಮ ದೂರವೇ ಉಳಿದಿತ್ತು. ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಸೌತ್‌ ಆಸ್ಟ್ರೇಲಿಯಾ ಯಾಮದೇ ಹಂತದಲ್ಲೂ ಒತ್ತಡಕ್ಕೆ ಸಿಲುಕಿಲ್ಲ. ವೊದಲಿಗೆ ಕ್ಲಿಂಗರ್‌ (೨೦) ಹಾಗೂ ಹ್ಯಾರಿಸ್‌ (೨೬) ಉತ್ತಮ ಆರಂಭ ನೀಡಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿದ ಫರ್ಗುಸನ್‌ ಎದುರಾಳಿ ಆಟಗಾರರನ್ನು ಇನ್ನಿಲ್ಲದಂತೆ ದಂಡಿಸಿದರು. ಕೋಲ್ಕೊತ್ತಾ ಪರ ಆಡಿದ ಬ್ರೆಟ್‌ಲೀ ತಮ್ಮ ತವರು ತಂಡ, ಸೌತ್‌ಆಸ್ಟ್ರೇಲಿಯಾ ನಿಯಂತ್ರಣಕ್ಕೆ ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಸೌತ್‌ಆಸ್ಟ್ರೇಲಿಯಾದ ರನ್‌ಗಳಿಕೆ ವೇಗಕ್ಕೆ ಕಡಿವಾಣ ಹಾಕಲು ಫರ್ಗುಸನ್‌ ಅವರ ವಿಕೆಟ್‌ ಕೋಲ್ಕೊತ್ತಾಗೆ ಅನಿವಾರ್ಯವಾಗಿತ್ತು. ಹೀಗಾಗಿ ಹಲಮ ಬಾರಿ ಬೌಲರ್‌ಗಳು ಅನೇಕ ಪ್ರಯೊಗ ಕೈಗೊಂಡರಾದರೂ ಪ್ರಯೊಜನವಾಗಲಿಲ್ಲ. ಫರ್ಗುಸನ್‌ಗೆ ಕ್ರಿಶ್ಚಿಯನ್‌ (೪೨) ಸಾಥ್‌ ನೀಡಿದ ಬಳಿಕವಂತೂ ಸೌತ್‌ ಆಸ್ಟ್ರೇಲಿಯಾ ರನ್‌ವೇಗ ಇನ್ನಷ್ಟು ಹೆಚ್ಚಾಯಿತು. ಸಂಕ್ಷಿಪ್ತ ಸ್ಕೋರ್‌

No Comments to “ಸೌತ್‌ ಆಸ್ಟ್ರೇಲಿಯಾಗೆ ಗೆಲುಮ”

add a comment.

Leave a Reply

You must be logged in to post a comment.