ಇಂದು ಆಸ್ಪತ್ರೆಯಿಂದ ಬಿಡುಗಡೆ ಸಾಧ್ಯತ

ಬೆಂಗಳೂರು,ಅ.೧೭-ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂ ರಪ್ಪ ಅವರಿಗೆ ಯಾಮದೇ ರೀತಿಯಾದ ಗಂಭೀರ ಹೃದಯ ಸಮಸ್ಯೆ ಇಲ್ಲ ಎಂದು ಹೇಳಿರುವ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ. ಮಂಜುನಾಥ್‌, ಬಹುತೇಕ ನಾಳೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಗುಮದು ಎಂದು ಹೇಳಿದ್ದಾರೆ. ಹಾಗೊಂದು ವೇಳೆ ನಾಳೆ ಯಡಿ ಯೂರಪ್ಪ ಬಿಡುಗಡೆಯಾದರೆ ಮತ್ತೊಮ್ಮೆ ನಗರದ ಪರಪ್ಪನ ಅಗ್ರಹಾರ ಜೈಲು ಸೇರುಮದು ಅನಿ ವಾರ್ಯವಾಗಲಿದೆ. ಡಿನೋಟಿಫಿಕೇಷನ್‌ ಹಾಗೂ ಭ್ರಷ್ಟಾಚಾರ ಹಗರಣದಲ್ಲಿ ಜೈಲು ಪಾಲಾಗಿ, ಅನಾರೋಗ್ಯದ ಕಾರಣ ಜಯದೇವ ಆಸ್ಪತ್ರೆ ಸೇರಿರುವ ಯಡಿ ಯೂರಪ್ಪ ಅವರ ಆರೋಗ್ಯ ಸುಧಾ ರಿಸಿದ್ದು, ನಾಳೆ ಅವರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಕುರಿತು ಪರಿ ಶೀಲಿಸಲಾಗುಮದು ಎಂದು ತಿಳಿಸಿದ್ದಾರೆ. ಯಡಿಯೂರಪ್ಪ ಅವರ ಸಮಗ್ರ ಆರೋಗ್ಯ ತಪಾಸಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆನ್ನುಹುರಿ ನೋಮ, ಎದೆ ನೋಮ, ಮಧುಮೇಹ ಸಮಸ್ಯೆಗಳು ಯಡಿಯೂರಪ್ಪ ಅವರಿಗಿತ್ತು. ಈಗ ಸಕ್ಕರೆ ಕಾಯಿಲೆ ಸಂಪೂರ್ಣ ನಿಯಂತ್ರ ಣಕ್ಕೆ ಬಂದಿದೆ. ಆದರೆ ಅವರ ಎದೆ ಬಡಿತದಲ್ಲಿ ಒಂದು ಹೆಚ್ಚುವರಿ ಬೀಟ್‌ ಇರುಮದರಿಂದ ಈ ಬಗ್ಗೆ ತುರ್ತು ಚಿಕಿತ್ಸಾ ಘಟಕದಲ್ಲಿ ವೋಲ್ಟರ್‌ ನಿಗಾ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ನಾಳೆ ಬೆಳಿಗ್ಗೆ ಹೊತ್ತಿಗೆ ತಪಾಸಣೆ ಮುಗಿಯಲಿದ್ದು, ನಾಳೆ ಮಧ್ಯಾಹ್ನದ ಹೊತ್ತಿಗೆ ಅವರು ಸಂಪೂರ್ಣವಾಗಿ ಆರೋಗ್ಯದಿಂದಿರಲಿದ್ದಾರೆಯೆು ಎಂಬು ದನ್ನು ನೋಡಿಕೊಂಡು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುಮದು ಎಂದಿದ್ದಾರೆ. ಇದರೊಂದಿಗೆ ಕಳೆದ ಎರಡು ದಿನಗಳಿಂದ ಜೈಲುವಾಸ ತಪ್ಪಿಸಿಕೊಂ ಡಿದ್ದ ಯಡಿಯೂರಪ್ಪ ಅವರಿಗೆ ಮತ್ತೆ ತಲೆ ನೋಮ ಕಾಣಿಸಿಕೊಂಡಂತಾಗಿದೆ. ಈ ಬೆಳವಣಿಗೆ ಯಡಿಯೂರಪ್ಪ ಅವರ ಜಾಮೀನಿನ ಮೇಲೂ ಪ್ರತಿ ಕೂಲ ಪರಿಣಾಮ ಬೀರುವಂತಾಗಿದೆ. ಆರೋಗ್ಯ ಪರಿಸ್ಥಿತಿ ಆಧಾರದ ಮೇಲೆ ಯಡಿಯೂರಪ್ಪ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಆರೋಗ್ಯ ಸಮಸ್ಯೆ ಇಲ್ಲ ಎಂದ ಮೇಲೆ ಅವರಿಗೆ ಜಾಮೀನು ಸಿಗುಮದು ಕೂಡ ಸಮಸ್ಯೆಯಾಗಿ ಪರಿಣಮಿಸಲಿದೆ. ಯಡಿಯೂರಪ್ಪ ಅವರನ್ನು ಇಂದು ಮಧ್ಯಾಹ್ನ ಆಂಜಿಯೊಗ್ರಾಮ್‌ ಪರೀಕ್ಷೆಗೆ ಒಳಪಡಿಸಿದ ತಜ್ಞ ವೈದ್ಯರ ತಂಡ, ಯಡಿಯೂರಪ್ಪ ಅವರ ಹೃದಯ ಬಹುತೇಕ ಸಹಜ ಸ್ಥಿತಿಯ ಲ್ಲಿದೆ ಎಂಬುದನ್ನು ಪತ್ತೆ ಹಚ್ಚಿತು. ಈ ವರದಿಯ ಆಧಾರದ ಮೇಲೆ ಹೇಳುಮದಾದರೆ ಅವರಿಗೆ ಯಾಮದೇ ಹೇಳಿಕೊಳ್ಳುವಂಥ ಸಮಸ್ಯೆ ಇಲ್ಲ. ನಿನ್ನೆ ರಾತ್ರಿ ೧೧ ಗಂಟೆ ಸಮಯದಲ್ಲಿ ಉಸಿರಾಟದ ಸಮಸ್ಯೆ ಇತ್ತು. ಕಫ ತೆಗೆಯಲಾಯಿತು. ಅವರಿಗೆ ಮೂತ್ರದ ಸಮಸ್ಯೆ ಇತ್ತು. ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಸಂಪೂರ್ಣ ನಿಯಂ ತ್ರಣಕ್ಕೆ ಬಂದಿದೆ ಎಂದರು. ಬೆನ್ನು ನೋಮ, ಅತೀ ರಕ್ತ ದೊತ್ತಡ ಹಾಗೂ ಮಧುಮೇಹ ಸಂಬಂಧಿತ ಸಮಸ್ಯೆ ಇನ್ನೂ ಇದೆ. ನೆನ್ನೆ ಸರಿಯಾಗಿದ್ದ ರಕ್ತದಲ್ಲಿನ ಸಕ್ಕರೆ ಅಂಶ ಇಂದು ೩೫೩ ಕ್ಕೇರಿದೆ. ಇದಲ್ಲದೆ ಅವರು ಥೈರಾಯ್ಡ್‌ ಸಮಸ್ಯೆ, ಪಾರ್‌ಕಿನ್‌ಸನ್‌ ಸೇರಿ ಇತ್ಯಾದಿ ಸಮಸ್ಯೆ ಗಳಿಂದಲೂ ಬಳಲುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಯಡಿಯೂರಪ್ಪ ಅವರನ್ನು ನೋಡಲು ಹೆಚ್ಚಿನ ಜನರಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸಮರ್ಥಿಸಿ ಕೊಂಡ ಅವರು, ಮಾಜಿ ಮುಖ್ಯ ಮಂತ್ರಿಯನ್ನು ಕಾಣಲು ನೂರಾರು ಸಂಖ್ಯೆಯಲ್ಲಿ ಮುಖಂಡರು ಬರುತ್ತಿರು ಮದರಿಂದ ಸಾರ್ವಜನಿಕರಿಗೆ ಅಥವಾ ರೋಗಿಗಳಿಗೆ ಯಾಮದೇ ತೊಂದರೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು

No Comments to “ಇಂದು ಆಸ್ಪತ್ರೆಯಿಂದ ಬಿಡುಗಡೆ ಸಾಧ್ಯತ”

add a comment.

Leave a Reply

You must be logged in to post a comment.