ಜಿಲ್ಲಾದ್ಯಂತ ಗಾಂಧಿ ಜಯಂತಿ ಆಚರಣೆ

ಮಂಡ್ಯ, ಅ.೨- ಹಿಂಸೆಯಿಂದ ಮಾನವ ಏನನ್ನೂ ಗಳಿಸಲು ಸಾಧ್ಯವಿಲ್ಲ. ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧೀಜಿಯವರು ಅಹಿಂಸಾ ಎಂಬ ಅತಿಶಕ್ತವಾದ ಆಯುಧವನ್ನು ಬಳಸಿ, ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟಿದ್ದಾರೆ. ಇಂತಹ ಅಹಿಂಸಾ ಮಾರ್ಗಮ ನಮಗೆ ಬಹಳಷ್ಟು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಅತಿಶಕ್ತ ಆಯುಧ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್‌ ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೊಜಿಸಿದ್ದ ಮಹಾತ್ಮ ಗಾಂಧಿ ಯವರ ೧೪೨ ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇರುವ ಗಾಂಧಿ ಪುತ್ಥಳಿಗೆ ಪೂಜೆ ಹಾಗೂ ಮಾಲಾರ್ಪಣೆ ಮಾಡಿ ಮಾತನಾಡಿದರು. ತೀವ್ರ ಕುತೂಹಲ ಮೂಡಿಸಿದ್ದ ಅಯೊಧ್ಯೆ ಕುರಿತ ಅಲಹಾಬಾದ್‌ ಹೈಕೋರ್ಟ್‌ನ ತೀರ್ಪಿಗೆ ಜನಸಮಾ ನ್ಯರು ಯಾಮದೇ ರೀತಿಯಾದ ಕಲಹ ಹಾಗೂ ಅಸಮಾಧಾನ ವ್ಯಕ್ತಪಡಿಸದ ಶಾಂತಿ ಮತ್ತು ಸೌಹರ್ದತೆಯಿಂದ ಸ್ವೀಕರಿಸಿದ್ದಾರೆ. ಇದು ಜನಸಾಮಾನ್ಯರು ಪ್ರಬುದ್ಧತೆಯ ಪ್ರವೃತಿ ಬೆಳಸಿಕೊಳ್ಳುತ್ತಿರು ಮದಕ್ಕೆ ಸಾಕ್ಷಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಜಯರಾಂ ಮಾತನಾಡಿ, ಜಿಲ್ಲೆಯಲ್ಲಿ ಸಂಪೂರ್ಣ ಸ್ವಚ್ಛಾತಾ ಆಂದೋಲನ ವನ್ನು ಇಂದಿನಿಂದ (ಅ.೨ ರಿಂದ) ಅ. ೪ ರವರಗೆ ಆಚರಿಸುತ್ತಿದ್ದು, ಇದರ ಮಾಹಿತಿ ಕುರಿತಾದ ಕಿರುಹೊತ್ತಿಗೆ ಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಕಾರ್ಮೆಲ್‌ ಶಾಲೆ, ಮಕ್ಕಳು, ಸ್ವಯಂ ಸೇವಕರು, ವೈರಮುಡಿ ಕಲಾತಂಡದವರು ಗಾಂಧೀ ಜಿಯವರನ್ನು ಸ್ಮರಿಸುವ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್‌, ಅಪರ ಜಿಲ್ಲಾಧಿ ಕಾರಿ ಪಿ.ಸಿ.ಜಯಣ್ಣ, ಮಂಡ್ಯ ಉಪ ವಿಭಾಗಾಧಿಕಾರಿ ರಂಗಪ್ಪ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿ ಕಾರಿ ಸಿದ್ದರಾಮಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್‌. ರಾಜಣ್ಣ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪ ಸ್ಥಿತರಿದ್ದರು. ನಗರಸಭೆ ವತಿಯಿಂದ ನಗರದ ಗಾಂಧಿವನದಲ್ಲಿರುವ ಗಾಂಧಿ ಪ್ರತಿಮೆಗೆ ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್‌ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಹೊಸಹಳ್ಳಿ ಬೋರೇಗೌಡ, ಆಯಿಷಾತಬಸ್ಸಂ, ನಾಗಮಣಿ, ಪದ್ಮಾವತಿ, ಲಕ್ಷö್ಮಣಗೌಡ, ಶಾರದ ಸೇರಿದಂತೆ ಬಹುತೇಕ ಸದಸ್ಯ ರಿದ್ದರು. ಮಾಂಡವ್ಯ ಆಂಗ್ಲ ಶಾಲೆ ವತಿ ಯಿಂದ ಗಾಂಧಿ ಜಯಂತಿ ಅಂಗವಾಗಿ ಗಾಂಧಿವನದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎಸ್‌.ಎಜು ಕೇಷನ್‌ ಟ್ರಸ್ಟ್‌ನ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ರಂಗಸ್ವಾಮಿ ಮತ್ತಿತರ ರಿದ್ದರು. ಬಳಿಕ ಶಾಲಾ ಮಕ್ಕಳು ಗಾಂಧಿ ಸ್ಮರಣೆಯ ಗೀತೆಗಳನ್ನು ಹಾಡಿದರು. ಕಾಂಗ್ರೆಸ್‌ ಕಚೇರಿ: ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಗಾಂಧಿ ಜಯಂತಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಆಚರಿಸ ಲಾಯಿತು. ಇದೇ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಸ್‌.ಆತ್ಮಾನಂದ ಅವರು, ಜ್ಯೋತಿ ಬೆಳಗುವ ಮೂಲಕ ಮತದಾರ ರೊಂದಿಗೆ ಮುಖಾಮುಖಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂ.ಎಸ್‌.ಸತ್ಯಾ ನಂದ, ನರಸಪ್ಪಹೆಗ್ಗಡೆ, ಹೊಸಹಳ್ಳಿ ಬೋರೇಗೌಡ, ಜಿ.ಸಿ.ಆನಂದ್‌, ಶುಭದಾಯಿನಿ,ಜಬೀಮಲ್ಲಾ, ನಾಗ ಮಣಿ, ಸುಜಾತಮಣಿ, ಮಹಾಲಿಂಗು ಮತ್ತಿತರರಿದ್ದರು. ಕರವೇಯಿಂದ ಮಾಲಾರ್ಪಣೆ: ಗಾಂಧಿಜಯಂತಿ ಅಂಗವಾಗಿ ಜಿಲ್ಲಾ ಕರವೇ ವತಿಯಿಂದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮ.ಸೋ.ಚಿದಂಬರ್‌, ಪಿಗ್ಮಿಬಾಬು, ನಾರಾಯಣ ಮತ್ತಿತರರಿದ್ದರು. ಇದೇ ವೇಳೆ ವಿಶ್ವ ಅಹಿಂಸಾ ದಿನವಾದ ಇಂದು ಮದ್ಯ, ಮಾಂಸ ಮಾರಾಟ ನಿಷೇಧಿಸಬೇಕೆಂದು ಒತ್ತಾಯಿಸಿದರು. ಜೈ ಭಾರತ್‌ ಮಾತಾ ಸ್ಕೂಲ್‌: ನಗರದ ಗುತ್ತಲು ಕಾಲೋನಿಯಲ್ಲಿರುವ ಜೈ ಭಾರತ್‌ ಮಾತಾ ವಿದ್ಯಾ ಸಂಸ್ಥೆ ಯಲ್ಲಿ ೧೪೨ನೇ ಗಾಂಧಿ ಜಯಂತಿ ಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟ್ರಸ್ಟ್‌ನ ಕಾರ್ಯದರ್ಶಿ ಎಲ್‌.ರಾಜಣ್ಣ ಮಾತನಾಡಿ, ಮಹಾತ್ಮ ಗಾಂಧೀಜಿ ಯವರ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟು, ಅಹಿಂಸೆ, ಸತ್ಯ, ಪ್ರಾಮಾಣಿಕತೆಯಿಂದ ನಡೆಯುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಚಲುವೇಗೌಡ ಸೇರಿದಂತೆ ಶಾಲೆಯ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರಿದ್ದರು. ಪಾಂಡವಪುರ ವರದಿ: ಗಾಂಧೀಜಿ ಯವರ ಜೀವನ ಚರಿತ್ರೆ ಹಾಗೂ ನಡೆ, ನುಡಿಯನ್ನು ಇಂದಿನ ಜನರು ಅಳ ವಡಿಸಿಕೊಂಡು ಉತ್ತಮ ಜೀವನ ನಡೆ ಸಬೇಕು. ಆಗ ಮಾತ್ರ ಎಲ್ಲರ ಜೀವನ ಸಾರ್ಥಕವಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಜಿ.ಪ್ರಭು ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತ ಆಯೊಜಿಸಿದ್ದ ಗಾಂಧಿಜಯಂತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು ಬದ್ಧ ಜೀವನ ನಡೆಸುವ ಮೂಲಕ ಇಂದಿನ ಯುವಕರು ಸಮಾಜದಲ್ಲಿ ಸೇವಾ ಮನೋಭಾವನೆ ರೂಡಿüಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಗಾಂಧೀಜಿ ದೊಡ್ಡ ವ್ಯಕ್ತಿ, ಅವರ ಜೀವನ ಚರಿತ್ರೆಯನ್ನು ಇಂದಿಗೂ ಎಲ್ಲ ಜನರು ಸ್ಮರಿಸುವಂತಾಗಿದೆ. ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಮೈಗೂಡಿಸಿ ಕೊಂಡರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು. ತಹಶೀಲ್ದಾರ್‌ ಬಿ.ಸಿ.ಶಿವಾನಂದ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಪಶುಸಂಗೋಪನೆ ಇಲಾಖೆಯ ಸಹಾ ಯಕ ನಿರ್ದೇಶಕ ಡಾ.ಎಂ.ಸಿ.ಪದ್ಮ ನಾಭ್‌, ತೋಟಗಾರಿಕೆ ಹಿರಿಯ ಅಧಿ ಕಾರಿ ಸಿ.ಜಿ.ಸುರೇಶ್‌ ಅರೋರ್‌, ಬಿಸಿಎಂ ಇಲಾಖೆಯ ತನಿಖಾಧಿಕಾರಿ ಪ್ರಭಾಕರ್‌ ಎಸ್‌. ಕೊಪ್ಪದ್‌, ಸಮಾಜ ಕಲ್ಯಾಣ ಇಲಾಖೆಯ ಬಿ.ಕೆ.ರಾಮ ಚಂದ್ರು, ಸಿಡಿಪಿಓ ಮ್ಯಾಥ್ಯು, ಸಹಾ ಯಕ ಕೃಷಿ ನಿರ್ದೇಶಕ ಜಿ.ಎಂ.ಮಹ ದೇವಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಣ್ಣು ವಿತರಣೆ: ಪಟ್ಟಣದ ತಾಲೂಕು ಆಸ್ಪತ್ರೆ ಹಾಗೂ ಚರ್ಚ್‌ ಆಸ್ಪತ್ರೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಲಯನ್ಸ್‌ ಕ್ಲಬ್‌ ಆಫ್‌ ಪ್ರೆಂಚ್‌ರಾಕ್ಸ್‌ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ನಂತರ ಮಾತನಾಡಿದ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ರಮೇಶ್‌, ಲಯನ್ಸ್‌ ಸಂಸ್ಥೆಯು ಕಳೆದ ಹಲವಾರು ವರ್ಷ ಗಳಿಂದಲೂ ಸೇವಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ನೇತ್ರ ತಪಾಸಣೆ ಶಿಬಿರ ಸೇರಿದಂತೆ ಇತರೆ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ ಎಂದರು. ಲಯನ್ಸ್‌ ಮಾಜಿ ಅಧ್ಯಕ್ಷ ಬಿ.ಕೃಷ್ಣ, ಪದಾಧಿಕಾರಿಗಳಾದ ಪ್ರಸನ್ನಕುಮಾರ್‌, ನಟೇಶ್‌, ಶಾಂತರಾಮು, ಮುರಳೀ ಧರ್‌, ಸ್ವಾಮಿ, ಅನಿಲ್‌ಕುಮಾರ್‌, ಆಸ್ಪತ್ರೆಯ ಆಡಳಿತಾ ವೈದ್ಯಾಧಿಕಾರಿ ಡಾ.ಟಿ.ಆರ್‌.ಜಯರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಗಮಂಗಲ ವರದಿ: ತಾಲ್ಲೂಕು ಆಡಳಿತದ ವತಿಯಿಂದ ಗಾಂಧಿ ಜ೦iುಂತಿ ಕಾ೦iುರ್ಕ್ರಮವನ್ನು ಮಿನಿ ವಿಧಾನಸೌಧದ ಆವರಣದಲ್ಲಿ ಏರ್ಪಡಿ ಸಲಾಗಿತ್ತು. ತಹಸೀಲ್ದಾರ್‌ ಅವರು ಕಾ೦iುರ್ ಕ್ರಮವನ್ನು ಉದ್ಘಾಟಿಸಿ ಗಾಂಧಿ ಸಂದೇಶ ನೀಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಹಲ ವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕೃ.ರಾ. ಪೇಟೆ ವರದಿ: ತಾಲ್ಲೂಕು ಕಛೇರಿ ಆವರಣದಲ್ಲಿ ಗಾಂಧಿ ಜಯಂತಿ ಕಾ೦iುರ್ಕ್ರಮವನ್ನು ಏರ್ಪಡಿಸಲಾಗಿತ್ತು. ತಹಸೀಲ್ದಾರ್‌ ಡಾ.ಹೆಚ್‌.ಎಲ್‌. ನಾಗ ರಾಜು ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಧಿ ಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಮಳವಳ್ಳಿ ವರದಿ: ತಾಲ್ಲೂಕು ಕಛೇರಿ ಆವರಣದಲ್ಲಿ ಗಾಂಧಿ ಜಯಂತಿ ಕಾ೦iುರ್ಕ್ರಮವನ್ನು ಏರ್ಪಡಿಸಲಾಗಿದ್ದು. ತಹಸೀಲ್ದಾರ್‌ ವಾಣಿ ಅವರು ಕಾ೦iುರ್ ಕ್ರಮವನ್ನು ಉದ್ಘಾಟಿಸಿದರು. ವಿವಿಧ ಶಾಲಾ-ಕಾಲೇಜುಗಳಲ್ಲಿ ಗಾಂಧಿ ಜ೦iುಂತಿ ಕಾ೦iುರ್ಕ್ರಮವನ್ನು ಏರ್ಪಡಿಸಲಾಗಿತ್ತು. ಗಾಂಧಿ ಕುರಿತಂತೆ ಹಲವಾರು ಸ್ಪರ್ಧಾ ಕಾ೦iುರ್ಕ್ರಮ ಗಳನ್ನು ಏರ್ಪಡಿಸಲಾಗಿತ್ತು. ಗಾಂಧಿ ಚಿತಾಭಸ್ಮ ಸ್ಮಾರಕಕ್ಕೆ ಪೂಜೆ: ಶ್ರೀರಂಗಪಟ್ಟಣ ವರದಿ: ರಾಷ್ಟ್ರಪಿತ ಮಹಾತ್ಮಾಗಾಂಧಿ ಹತ್ಯೆ೦iು ನಂತರ ರಾಷ್ಟ್ರದ ವಿವಿಧ ಪ್ರಮುಖ ನದಿಗಳಲ್ಲಿ ಅವರ ಚಿತಾಭಸ್ಮವನ್ನು ಸಮರ್ಪಣೆ ಮಾಡಲಾಗಿತ್ತು. ಅದರಂತೆ ಪಟ್ಟಣದ ಪಶ್ಚಿಮವಾಹಿನಿ೦iುಲ್ಲಿ ಅವರ ಚಿತಾ ಭಸ್ಮವನ್ನು ಕಾವೇರಿ ನದಿ೦iುಲ್ಲಿ ಹರಿ೦iು ಬಿಡಲಾಯಿತು. ಚಿತಾಭಸ್ಮ ಬಿಟ್ಟ ಸ್ಥಳದಲ್ಲಿ ತಾಲ್ಲೂಕು ಆಡಳಿತ ಸ್ಮಾರಕವೊಂದು ನಿರ್ಮಿಸಿದ್ದು, ಸ್ಮಾರಕದ ಬಳಿ ತಾಲ್ಲೂಕು ಆಡಳಿತದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ತಹಶೀಲ್ದಾರ್‌ ಅರುಳ್‌ ಕುಮಾರ್‌, ಪುರಸಭಾಧ್ಯಕ್ಷ ಶಿವಾಜಿರಾವ್‌, ತಾ. ಪಂ. ಕಾ೦iುರ್ನಿರ್ವಹಣಾಧಿಕಾರಿ ರಾಜಣ್ಣ, ಮಾಜಿ ಅಧ್ಯಕ್ಷ ಕೃಷ್ಣ, ಪುರ ಸಭಾ ಸದಸ್ಯರು ಪೂಜಾ ಕಾ೦iುರ್ದಲ್ಲಿ ಭಾಗವಹಿಸಿ ಮಹಾತ್ಮಾಗಾಂಧಿ೦iುವ ರಿಗೆ ಗೌರವ ಸಲ್ಲಿಸಿದರು.

No Comments to “ಜಿಲ್ಲಾದ್ಯಂತ ಗಾಂಧಿ ಜಯಂತಿ ಆಚರಣೆ”

add a comment.

Leave a Reply

You must be logged in to post a comment.