ಡಿಸ್ಕಸ್‌: ಧರ್ಮವೀರಸಿಂಗ್‌ ಹೊಸ ದಾಖಲ

ಮೈಸೂರು, ಅ.೨- ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಎರಡನೇ ದಿನ ಡಿಸ್ಕಸ್‌ ಥ್ರೋನಲ್ಲಿ ಮೈಸೂರು ವಿಭಾಗದ ಧರ್ಮವೀರಸಿಂಗ್‌ ಸೇರಿದಂತೆ ಮೂರು ನೂತನ ಕೂಟ ದಾಖಲೆಗಳು ದಾಖಲಾದಮ. ಪುರುಷರ ವಿಭಾಗದ ತಟ್ಟೆ ಎಸೆತ (ಡಿಸ್ಕಸ್‌ ಥ್ರೋ) ದಲ್ಲಿ ಮೈಸೂರು ವಿಭಾಗದ ಧರ್ಮವೀರಸಿಂಗ್‌ ೪೭.೭೬ ಮೀಟರ್‌ ದೂರ ಎಸೆದು ೧೩ ವರ್ಷಗಳ ದಾಖಲೆಯನ್ನು ಮುರಿದುನೂತನ ಕೂಟ ದಾಖಲೆ ನಿರ್ಮಿಸಿದರು. ಕಳೆದ ೧೯೯೮ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾ ಗದ ಡಿ.ಸಿ.ರಾಜೀವ್‌ ಅವರು ನಿರ್ಮಿಸಿದ್ದ ೪೬೩.೯೨ ಮೀಟರ್‌ ದೂರದ ದಾಖಲೆಯನ್ನು ಹಿಂದಿಕ್ಕಿದರು. ಉಳಿದಂತೆ ಬೆಂಗಳೂರು ನಗರ ವಿಭಾಗದ ಶೀತಲ್‌ ಕುಮಾರ್‌ ೪೧.೩೯ ಮೀಟರ್‌ ಹಾಗೂ ಮೈಸೂರಿನ ಎಂ.ಆರ್‌. ನಂದೀಶ್‌ ೩೫.೮೩ ಮೀಟರ್‌ ದೂರ ಎಸೆದು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಿಟ್ಟಿಸಿಕೊಂಡರು. ಹರ್ಡಲ್ಸ್‌ನಲ್ಲಿ ಸುಮಂತ್‌ ಇತಿಹಾಸ: ಸವಾಲಿನ ೧೧೦ ಮೀಟರ್‌ ಓಟ ಹರ್ಡಲ್ಸ್‌ನಲ್ಲಿ ಬೆಂಗಳೂರಿನ ಗ್ರಾಮಾಂತರ ವಿಭಾಗದ ಎಂ.ಕೆ.ಸುಮಂತ್‌ ೧೫.೦೧ ಸೆ.ನಲ್ಲಿ ನಿಗದಿತ ಗುರಿ ತಲುಪಿದರು. ಈ ಹಿಂದೆ ೨೦೦೯ ರಲ್ಲಿ ಬೆಂಗಳೂರುನಗರ ವಿಭಾಗದ ರೋಹಿತ್‌ ಹವಾಲ್‌ ೧೫.೩ ಸೆ. ನಿರ್ಮಿಸಿದ್ದ ದಾಖಲೆಯನ್ನು ಮುರಿದು ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಹೊಸ ಇತಿಹಾಸ ನಿರ್ಮಿಸಿದರು. ೨೦ ವರ್ಷದ ದಾಖಲೆ ಅಳಿಸಿದ ಶೃತಿ: ಮಹಿಳಾ ವಿಭಾಗದ ೮೦೦ ಮೀಟರ್‌ ತುರುಸಿನ ಓಟದಲ್ಲಿ ಬೆಂಗ ಳೂರು ನಗರ ವಿಭಾಗದ ಕೆ.ಸಿ.ಶೃತಿ (೨:೧೫.೦೬ ಸೆ.) ತಮ್ಮದೇ ವಿಭಾಗದ ಸಮೀಪಸ್ಪರ್ಧಿ ಬಿ.ಇ.ಇಂದಿರಾ (೨:೨೩.೩ ಸೆ.) ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಆರಂಭದಿಂದಲೂ ಅದ್ಭುತ ನಿರ್ವ ಹಣೆ ಪ್ರದರ್ಶಿಸಿದ ಶೃತಿ ಕಳೆದ ೧೯೯೧ ರಲ್ಲಿ ಮೈಸೂರಿನ ಹೆಚ್‌.ಎಂ.ಸುನಂದ (೨:೧೯.೧೦ ಸೆ.) ಅವರು ನಿರ್ಮಿಸಿದ್ದ ೨೦ ವರ್ಷದ ದಾಖಲೆಯನ್ನು ಅಳಿಸಿ ಹಾಕಿ, ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನು ಹೊಸದಾಗಿ ನಮೂದಿಸಿದರು. ಬೆಂಗಳೂರು ನಗರ ವಿಭಾಗದ ಬಿ.ಇ.ಇಂದಿರಾ (೨:೨೩.೦೩ ಸೆ.) ದ್ವಿತೀಯ ಸ್ಥಾನ ಪಡೆದರೆ, ಮೈಸೂರಿನ ಸಿ.ಸ್ಮಿತಾ (೨:೨೪.೦೭ ಸೆ.) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡರು. ಉಳಿದಂತೆ ಮಹಿಳಾ ವಿಭಾಗದ ೧೦೦ ಮೀಟರ್‌ ಹರ್ಡಲ್ಸ್‌ನಲ್ಲಿ ಬೆಂಗಳೂರು ನಗರ ವಿಭಾಗದ ಜಿ.ಎಂ. ಐಶ್ವರ್ಯ ೧೪.೬೦ ಸೆ., ತ್ರಿವಿಧ ಜಿಗಿತದಲ್ಲಿ ಬೆಂಗಳೂರು ನಗರದ ಸಹನ ಕುಮಾರಿ (೧೧.೭೪ ಮೀಟರ್‌) ಚಿನ್ನದ ಸಾಧನೆ ಪ್ರದರ್ಶಿಸಿದರು. ೪ಘಿ೧೦೦ ಮೀಟರ್‌ ರಿಲೇಯಲ್ಲಿ ಮೈಸೂರು ವಿಭಾಗೀಯ ತಂಡ (೪೯.೭೪ ಸೆ.) ಬೆಂಗಳೂರು ನಗರ ವಿಭಾಗೀಯ ತಂಡವನ್ನು (೫೦.೫೭ಸೆ,) ಸೆಕೆಂಡ್‌ಗಳ ಅಂತರದಲ್ಲಿ ಪರಾಭವ ಗೊಳಿಸಿ ವೊದಲ ಸ್ಥಾನ ಗಿಟ್ಟಿಸಿಕೊಂಡು ವಿಜೃಂಭಿಸಿದರು. ಪುರುಷರ ವಿಭಾಗದ ೮೦೦ ಮೀಟರ್‌ ಓಟದಲ್ಲಿ ಬೆಂಗಳೂರು ನಗರ ವಿಭಾಗದ ಕೆ.ಎ.ಭರತ್‌ (೧:೫೯.೩೨ ಸೆ.) ವೊದಲ ಸ್ಥಾನದ ಪಾರಮ್ಯ ಪದರ್ಶಿಸಿದರೆ, ೪ಘಿ೧೦೦ ಮೀಟರ್‌ ರಿಲೇಯಲ್ಲಿ ಬೆಂಗಳೂರು ನಗರ ವಿಭಾಗೀಯ ತಂಡ ೪೨.೮೪ ಸೆ.ನಲ್ಲಿ ನಿಗದಿತ ಗುರಿ ತಲುಪಿ ಚಿನ್ನದ ಪದಕ ಪಡೆದುಕೊಂಡರು.

No Comments to “ಡಿಸ್ಕಸ್‌: ಧರ್ಮವೀರಸಿಂಗ್‌ ಹೊಸ ದಾಖಲ”

add a comment.

Leave a Reply

You must be logged in to post a comment.