ದೇವೇಗೌಡ ಪುತ್ರ ಬಾಲಕೃಷ್ಣ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು,ಅ.೧೪-ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಪುತ್ರ ಹಾಗೂ ನಿವೃತ್ತ ಕೆ.ಎ.ಎಸ್‌. ಅಧಿಕಾರಿ ಹೆಚ್‌.ಡಿ.ಬಾಲಕೃಷ್ಣೇಗೌಡರ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸ ಗಳ ಮೇಲೆ ಲೋಕಾಯುಕ್ತ ಪೊಲೀ ಸರು ಇಂದು ಏಕಕಾಲದಲ್ಲಿ ದಾಳಿ ನಡೆಸಿ, ಮಹತ್ವದ ದಾಖಲೆಪತ್ರಗಳನ್ನು ವಶಪಡಿಸಿಕೊಂಡರು. ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂ ರಿನ ಬಾಲಕೃಷ್ಣೇಗೌಡರ ನಿವಾಸ ಸೇರಿ ಐದು ಕಡೆ ಹಾಗೂ ಮೈಸೂರಿನ ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾ ಯುಕ್ತ ಪೊಲೀಸರು ದಾಳಿ ನಡೆಸಿದರು. ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ದಾಖಲೆ ಪತ್ರಗಳು ಪತ್ತೆಯಾಗಿವೆ. ನಗರದ ಪದ್ಮನಾಭ ನಗರದಲ್ಲಿ ರುವ ಬಾಲಕೃಷ್ಣೇಗೌಡರ ಅನ್ನಪೂರ್ಣ ನಿವಾಸ, ನಾಲ್ಕು ಕಚೇರಿಗಳಿಗೆ ಲಗ್ಗೆ ಇಟ್ಟ ಅಧಿಕಾರಿಗಳು, ಅಗತ್ಯ ದಾಖ ಲಾತಿ ಪತ್ರಗಳನ್ನು ಪರಿಶೀಲಿಸಿದರು. ಅದೇ ರೀತಿ ಮೈಸೂರಿನ ಇಟ್ಟಿಗೆ ಗೂಡಿನಲ್ಲಿರುವ ಅವರ ಮಾವ ಹೊನ್ನಪ್ಪ ಅವರ ಮನೆ ಹಾಗೂ ವಿಜಯನಗರದಲ್ಲಿರುವ ಬಾವಮೈದ ರವೀಂದ್ರ ಅವರ ಮನೆಯ ಮೇಲೂ ದಾಳಿ ಮಾಡಲಾಗಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್‌ ವಿಕ್ಟರ್‌ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಬಾಲಕೃಷ್ಣೇಗೌಡ ಅವರ ಒಡೆ ತನಕ್ಕೆ ಸೇರಿರುವ ಬಿಎಸ್‌ಕೆ ಮತ್ತು ಕುನಾಲ್‌ ಕಂಪನಿಗಳ ಮೇಲೆ ಕೂಡಾ ದಾಳಿ ಮಾಡಲಾಗಿದೆ. ಬಾಲಕೃಷ್ಣೇ ಗೌಡರ ವಿರುದ್ಧ ೧೫೬ರ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ಯಲ್ಲಿ ಯಾಮದೇ ಕ್ಷಣದಲ್ಲಿ ಬಂಧಿ ಸುವ ಸಾಧ್ಯತೆ ಇದೆ ಎಂದು ಹೇಳ ಲಾಗಿದೆ. ಬಾಲಕೃಷ್ಣೇಗೌಡ ಕೆಎಎಸ್‌ ಅಧಿ ಕಾರಿಯಾಗಿ ನಿವೃತ್ತಿಯಾದ ಸಂದರ್ಭ ದಲ್ಲಿ ಅವರ ಆಸ್ತಿ ೭೦ ಕೋಟಿ ರೂ. ಮಾತ್ರ ಇತ್ತು. ನಂತರ ಅವರ ಆಸ್ತಿ ೫೦೦ ಕೋಟಿ ರೂ.ಗೆ ಏರಿದೆ. ಈ ಬಗ್ಗೆ ಅವರ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಶಿವವೊಗ್ಗದ ನಿವೃತ್ತ ಇಂಜಿ ನಿಯರ್‌ ಎಸ್‌.ಎನ್‌.ಬಾಲಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್‌ ದಾಖಲಿಸಿ ದ್ದರು.

No Comments to “ದೇವೇಗೌಡ ಪುತ್ರ ಬಾಲಕೃಷ್ಣ ಮನೆ ಮೇಲೆ ಲೋಕಾಯುಕ್ತ ದಾಳಿ”

add a comment.

Leave a Reply

You must be logged in to post a comment.