ಪಶ್ರಾಂತ್‌ ಬೂಷಣ್‌ ಮೆಲೆ ಅಮಾನವೀಯ ಹಲ

ಹೊಸದಿಲ್ಲಿ,ಅ.೧೨- ಹಿರಿಯ ವಕೀಲ ಹಾಗೂ ಅಣ್ಣಾ ಹಜಾರೆ
ತಂಡದ ಸದಸ್ಯ ಪ್ರಶಾಂತ್‌ ಭೂಷಣ್‌ ಅವರ ಕೊಠಡಿಗೆ ನುಗ್ಗಿದ ಮೂವರು
ಯುವಕರು ಅಮಾನವೀಯವಾಗಿ ಹಲ್ಲೆ ನಡೆ
ಸಿದ ಘಟನೆ ಸರ್ವೋಚ್ಚ ನ್ಯಾಯಾಲಯದ
ಆವರಣದಲ್ಲಿ ಬುಧವಾರ ನಡೆದಿದ್ದು, ಆರೋ
ಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ.
ಈ ಮೂವರೂ ಯುವಕರು ಭಗತ್‌
ಸಿಂಗ್‌ ಕ್ರಾಂತಿ ಸೇನಾ ಸಂಘಟನೆಯವರೆಂದು
ಹೇಳಿಕೊಂಡಿದ್ದಾರಾದರೂ ಇವರು ಶ್ರೀರಾಮ
ಸೇನೆ ಸಂಘಟನೆಗೆ ಸೇರಿದವರು ಎಂದೂ ಹೇಳಲಾಗಿದೆ. ಹಲ್ಲೆಗೊಳಗಾದ
ಸ್ವತಃ ಪ್ರಶಾಂತ್‌ ಭೂಷಣ್‌ ಶ್ರೀರಾಮಸೇನೆಯಂಥ ಸಂಘಟನೆಗಳನ್ನು
ನಿಷೇಧಿಸಬೇಕು ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತ ಗಣನೆ ಕುರಿತಂತೆ ಪ್ರಶಾಂತ್‌
ಭೂಷಣ್‌ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ. ಕೊಠಡಿಗೆ
ಮಧ್ಯಾಹ್ನ ನುಗ್ಗಿದ ಯುವಕರು, ಭೂಷಣ್‌ ಅವರನ್ನು ಅವರು ಕುಳಿತಿದ್ದ
ಕುರ್ಚಿಯಿಂದ ಎಳೆದಾಡಿದರು. ಬಳಿಕ ಸುಧಾರಿಸಿಕೊಳ್ಳಲೂ ಅವಕಾಶ
ನೀಡದೆ ತೀವ್ರವಾಗಿ ಹಲ್ಲೆ ನಡೆಸಿದರು. ಭೂಷಣ್‌ ಕುರ್ಚಿಯಿಂದ ಕೆಳಕ್ಕೆ
ಬಿದ್ದರೂ ಬಿಡದೆ, ಅವರನ್ನು ಕಾಲಿನಿಂದಲೂ ಆರೋಪಿಗಳು ಜಾಡಿಸಿದರು.
ಸುದ್ದಿ ಹರಡುವ ಮುನ್ನವೇ ಈ ದೃಶ್ಯಾವಳಿಗಳೆಲ್ಲಾ ಟೀವಿ ವಾಹಿನಿಗಳಲ್ಲಿ
ಬಿತ್ತರವಾದಮ. ಕಾರಣ- ಖಾಸಗಿ ಟಿವಿ ವಾಹಿನಿಯೊಂದು ಸಂದರ್ಶನ
ನಡೆಸುತ್ತಿದ್ದಾಗಲೇ ಪ್ರಶಾಂತ್‌ ಭೂಷಣ್‌ ಅವರ ಮೇಲೆ ಹಲ್ಲೆ ಶುರುವಾಗಿತ್ತು.
ಹಲ್ಲೆ ಬಳಿಕ ಒಬ್ಬ ಆರೋಪಿಯನ್ನು ಹಿಡಿದು ಥಳಿಸಲಾಯಿತು. ಆದರೆ
ಇನ್ನಿಬ್ಬರು ಪರಾರಿಯಾದರು. ಬಂಧಿತನನ್ನು ಹೊಸದಿಲ್ಲಿಯ ನಂಗ್ಲೋಯ್‌ನ
ಇಂದರ್‌ ವರ್ಮಾ ಎಂದು ಗುರುತಿಸಲಾಗಿದೆ.

No Comments to “ಪಶ್ರಾಂತ್‌ ಬೂಷಣ್‌ ಮೆಲೆ ಅಮಾನವೀಯ ಹಲ”

add a comment.

Leave a Reply

You must be logged in to post a comment.