ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಕಲಚೇತನರ ಪ್ರತಿಭಟನ

ಮಂಡ್ಯ, ಅ. ೧೪- ನಿವೇಶನರಹಿತರಿಗೆ ಕೂಡಲೇ ನಿವೇಶನ ನೀಡಬೇಕು, ಎಲ್ಲ ಬಡವರಿಗೂ ಮನೆ ನಿರ್ಮಿಸಿಕೊಡಬೇಕು ಎಂಬುದೂ ಸೇರಿದಂತೆ ಹಲಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಪ್ರಾಂತ ರೈತ ಸಂಘ ಮತ್ತು ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಶುಕ್ರವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ಮೆರವಣಿಗೆಯಲ್ಲಿ ತೆರಳಿದ ನೂರಾರು ಮಂದಿ ಕಾರ್ಯ ಕರ್ತರು, ಗುಡಿಸಲಿನ ಸ್ತಬ್ಧಚಿತ್ರವನ್ನು ಮೆರ ವಣಿಗೆಯಲ್ಲಿ ಕೊಂಡೊಯ್ದು ಜಿಲ್ಲಾಧಿ ಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಧರಣಿ ಕುಳಿತರು. ಬಗರ್‌ ಹುಕುಂ ಮತ್ತು ಅರಣ್ಯ ಭೂಮಿ ಸಕ್ರಮಕ್ಕಾಗಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೊಜನೆಯ ಸಮರ್ಪಕ ಜಾರಿಗಾಗಿ, ರೈತರು, ಕೃಷಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಅಗತ್ಯ ಪ್ರಮಾಣದ ಬ್ಯಾಂಕ್‌ ಸಾಲ ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸರ್ಕಾರ ತನ್ನೊಳಗಿನ ಬಿಕ್ಕ ಟ್ಟನ್ನು ಪರಿಹರಿಸಿಕೊಳ್ಳಲು ವಿಫಲ ವಾಗಿದ್ದು, ಭ್ರಷ್ಠಾಚಾರ, ಸ್ವಜನಪಕ್ಷಪಾತ ದಲ್ಲಿ ತೊಡಗಿದೆ. ಮುಖ್ಯಮಂತ್ರಿ ಬದ ಲಾಗಿದ್ದರೂ ಬಡವರ ಬಗೆಗಿನ ಸರ್ಕಾ ರದ ನಿರ್ಲಕ್ಷö್ಯ ಧೋರಣೆ ಬದಲಾಗಿಲ್ಲ. ಬಡವರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ ಎಂದು ದೂರಿದರು. ಜಿಲ್ಲಾದ್ಯಂತ ಕಳೆದ ೪೦ ವರ್ಷ ಗಳಿಂದ ಸರ್ಕಾರದ ಭೂಮಿಯಲ್ಲಿ ಗುಡಿ ಸಲು ಹಾಕಿಕೊಂಡು ವಾಸಿಸುತ್ತಿ ರುವ ಬಡ ಕೂಲಿಕಾರರಿಗೆ ಹಕ್ಕುಪತ್ರ ನೀಡುವಲ್ಲಿ ಮತ್ತು ಹಕ್ಕುಪತ್ರ ಹೊಂದಿರು ವವರಿಗೆ ನಿವೇಶನ ಜಾಗ ತೋರಿಸುವಲ್ಲಿ ಜಿಲ್ಲಾಡಳಿತ ವಿಫಲ ವಾಗಿದೆ ಎಂದು ಆರೋಪಿಸಿದರು. ಜಿಲ್ಲೆಯ ಕೃಷಿ ಕೂಲಿಕಾರರು, ಮಹಿಳೆಯರು, ಯುವಜನರು ಮತ್ತು ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದರೂ ಜಿಲ್ಲಾಡಳಿತ ಗಮನಹರಿ ಸಿಲ್ಲ ಎಂದು ಆರೋಪಿಸಿದ ಅವರು, ಎಲ್ಲ ನಿವೇಶನ ರಹಿತರಿಗೆ ಕೂಡಲೇ ನಿವೇಶನ ಹಾಗೂ ಮನೆ ನಿರ್ಮಿಸಿ ಕೊಡಬೇಕು, ಬಗರ್‌ ಹುಕುಂ ಮತ್ತು ಅರಣ್ಯ ಭೂಮಿ ಸಕ್ರಮಗೊಳಿಸಬೇಕು, ಬಲವಂತದ ಭೂಸ್ವಾಧೀನ ಕೈಬಿಡಬೇಕು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೊಜನೆಯನ್ನು ಸಮರ್ಪಕ ವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶಿಸುವ ನಾಲ್ಕೂ ದ್ವಾರ ಗಳಿಗೂ ಬೀಗ ಹಾಕಿ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಚೇರಿಯ ಒಳಗೆ ಮತ್ತು ಹೊರಗೆ ಹೋಗಲು ಹೆಣಗಾಡಬೇಕಾಯಿತು. ಮುಖಂಡರಾದ ಎಂ. ಪುಟ್ಟ ಮಾದು, ಎನ್‌. ಸುರೇಂದ್ರ, ಕೆ. ಬಸವ ರಾಜು, ಡಿ. ಹನುಮೇಶ್‌, ಟಿ.ಎಲ್‌. ಕೃಷ್ಣೇಗೌಡ, ಟಿ. ಯಶ್ವಂತ್‌, ದೇವಿ, ಸುನೀತಾ, ಶೋಭಾ, ಲತಾ, ಡಿವೈ ಎಫ್‌ಐನ ಲಿಂಗರಾಜಮೂರ್ತಿ, ಗುರು ಸ್ವಾಮಿ ಸೇರಿದಂತೆ ಹಲವರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

No Comments to “ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಕಲಚೇತನರ ಪ್ರತಿಭಟನ”

add a comment.

Leave a Reply

You must be logged in to post a comment.