ಮಿಮ್ಸ್‌ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮಂಡ್ಯ,ಅ.೧೦- ಮಂಡ್ಯ ಮೆಡಿ ಕಲ್‌ ಕಾಲೇಜಿನ ಪ್ರಾಧ್ಯಾಪಕರ ವಿರುದ್ಧ ಕೆಲ ಸಂಘಟನೆಗಳ ಮುಖಂಡರು ಪ್ರತಿನಿತ್ಯ ಇಲ್ಲಸಲ್ಲದ ಆರೋಪ ಹೊರಿಸು ತ್ತಿದ್ದಾರೆಂದು ಆರೋಪಿಸಿ ವಿದ್ಯಾರ್ಥಿ ಗಳು ಸೋಮವಾರ ಕಪ್ಪುಪಟ್ಟಿ ಕಟ್ಟಿಕೊಂಡು ತರಗತಿಗೆ ಹಾಜರಾಗಿ ಪ್ರತಿಭಟಿಸಿದರು. ಇಲ್ಲಿನ ಕೆಲ ಸಂಘಟನೆಗಳ ಮುಖಂಡರು ಕಾಲೇಜಿನ ನಿರ್ದೇಶಕರು, ಪ್ರಾಧ್ಯಾಪಕರುಗಳನ್ನು ಬೆದರಿಸಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಅದನ್ನು ಮಾಡದಿದ್ದರೆ ಇಲ್ಲದ ಆರೋಪ ಹೊರಿ ಸುತ್ತಿದ್ದಾರೆ ಎಂದು ಆರೋಪಿ ಸಿದರು. ಕಾಲೇಜು ಆರಂಭವಾದ ದಿನದಿಂದ ಪ್ರಾಧ್ಯಾಪಕರನ್ನು ನಿರ್ಭೀತಿಯಿಂದ ಕೆಲಸ ಮಾಡಲು ಬಿಡದೆ, ಪ್ರತಿನಿತ್ಯ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದಾಗಿ ನಮ್ಮ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿ ದರು. ಲಕ್ಷಾಂತರ ರೂ. ವ್ಯಯಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದು, ವೊದಲೇ ಈ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೊರತೆ ಇದ್ದು, ಇರುವ ಪ್ರಾಧ್ಯಾಪಕರನ್ನು ಕಾಲೇಜು ಬಿಡಿಸುವ ಮೂಲಕ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಿರು ಮದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಈ ಹಿಂದೆ ಅಕ್ರಮ ನೇಮಕಾತಿ, ಭ್ರಷ್ಟಾಚಾರ ಇತರೆ ಆರೋಪಗಳನ್ನು ಹೊರಿಸಿ ಹಲವಾರು ಪ್ರಾಧ್ಯಾಪಕರ ವಿರುದ್ಧ ವೊಕದ್ದಮೆ ದಾಖಲು ಮಾಡ ಲಾಗಿದೆ. ಈಗ ಮಿಮ್ಸ್‌ ನಿರ್ದೇಶಕರಿಗೆ ಜೀವ ಬೆದರಿಕೆ ಹಾಕಿ ಕಾಲೇಜಿನಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿರುಮದನ್ನು ತೀವ್ರವಾಗಿ ಖಂಡಿ ಸಿದರು.

No Comments to “ಮಿಮ್ಸ್‌ ವಿದ್ಯಾರ್ಥಿಗಳಿಂದ ಪ್ರತಿಭಟನೆ”

add a comment.

Leave a Reply

You must be logged in to post a comment.