ವಿಷಮಿಶ್ರಿತ ಆಹಾರ ಸೇವನೆ-ಮೂರು ಹಸುಗಳು ಸಾಮ

ಮದ್ದೂರು,ಅ.೧೭-ವಿಷ ಮಿಶ್ರಿತ ಆಹಾರ ಸೇವಿಸಿ ಮೂರು ಹಸುಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟರಾಜು ಎಂಬು ವರಿಗೆ ಸೇರಿದ ಸುಮಾರು ೧.೫೦ ಲಕ್ಷ ರೂ. ಮೌಲ್ಯದ ಮೂರು ಹಸು ಗಳು ಸಾವನ್ನಪ್ಪಿವೆ. ಸೋಮವಾರ ಮುಂಜಾನೆ ೪ ಗಂಟೆ ಸಮಯದಲ್ಲಿ ಹಸುಗಳಿಗೆ ಕೆ.ಎಂ. ಎಫ್‌. ಫೀಡ್ಸ್‌ ಹಾಗೂ ರವೆ ಬೂಸಾ ವನ್ನು ಹಸುಗಳಿಗೆ ಹಾಕಿದ್ದಾರೆ. ಅರ್ಧ ಗಂಟೆ ಬಿಟ್ಟು ಹಾಲು ಕರೆಯಲು ಬಂದಾಗ ಹಸುಗಳು ಅಸ್ವಸ್ಥಗೊಂಡು ಒದ್ದಾಡುತ್ತಿದ್ದಮ. ಇದಾದ ಸ್ವಲ್ಪ ಸಮಯ ದಲ್ಲೆ ಹಸುಗಳು ಸಾವನ್ನಪ್ಪಿದಮ. ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಶಾಸಕಿ ಕಲ್ಪನಾ ಸಿದ್ದರಾಜು, ಜಿ.ಪಂ. ಸದಸ್ಯ ಸುರೇಶ್‌ಕಂಠಿ, ತಾ.ಪಂ. ಸದಸ್ಯರು ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಸು ಸೇವಿಸಿರುವ ಆಹಾರ ಅಥವಾ ನೀರಿನಲ್ಲಿ ವಿಷಮಿಶ್ರಿತವಾಗಿ ರಬಹುದೆಂದು ಅಧಿಕಾರಿಗಳು ಶಂಕಿ ಸಿದ್ದು, ಪರೀಕ್ಷೆಯ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಕೆ.ಎಂ.ಎಫ್‌. ಫೀಡ್ಸ್‌ನಿಂದ ಹಸುಗಳು ಸಾವನ್ನಪ್ಪಿದ್ದರೆ, ಸೂಕ್ತ ಪರಿಹಾರ ಕೊಡಿಸಬೇಕು. ಇಲ್ಲವೇ ರವೆಬೂಸಾದಿಂದ ಹಸುಗಳು ಸಾವನ್ನ ಪ್ಪಿದ್ದರೆ ಯಾವ ಕಂಪನಿಗೆ ಸೇರಿ ದ್ದೆಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುಮದರ ಜೊತೆಗೆ ಸೂಕ್ತ ಪರಿಹಾರ ಕೊಡಿಸುವಂತೆ ಶಾಸಕರು ಹಾಗೂ ಜಿ.ಪಂ. ಸದಸ್ಯರು ಒತ್ತಾಯಿಸಿದರು.

One Comment to “ವಿಷಮಿಶ್ರಿತ ಆಹಾರ ಸೇವನೆ-ಮೂರು ಹಸುಗಳು ಸಾಮ”

  1. Chethan says:

    Spelling mistakes in Kannada Paper is shamed matter for kannadigas. Pls hav a look on this — ಹಸುಗಳು ಸಾಮ

Leave a Reply

You must be logged in to post a comment.