ಸಭೆಗೆ ಬಾರದ ಅಧ್ಯಕ್ಷ, ಉಪಾಧ್ಯಕ್ಷರು ; ಕೋರಂ ಅಭಾವದಿಂದ ಮುಂದೂಡಿದ

ಮಂಡ್ಯ, ಅ. ೩- ಮಂಡ್ಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿ೦iುಲ್ಲಿ ಕುಡಿಯುವ ನೀರು, ರಸ್ತೆ, ಕ್ಷಾಮ ಸೇರಿದಂತೆ ಮೂಲಭೂತ ಸಮಸ್ಯೆಗಳು ನೂರಾರು ಇದ್ದರೂ ಜಿಲ್ಲಾ ಪಂಚಾಯಿತಿ ಸಭೆ ಕರೆದ ಅಧ್ಯಕ್ಷರು, ಉಪಾಧ್ಯಕ್ಷರು ಸಭೆಗೆ ಗೈರು ಹಾಜರಾದ ಹಿನ್ನೆಲೆ೦iುಲ್ಲಿ ಸೋಮವಾರ ಕರೆಯಲಾಗಿದ್ದ ಜಿ. ಪಂ. ಸಾಮಾನ್ಯ ಸಭೆ ಕೋರಂ ಅಭಾವದಿಂದ ರದ್ದಾಯಿತು. ಜಿ. ಪಂ. ಅಧ್ಯಕ್ಷ ಶಿವಣ್ಣ ಅಧ್ಯಕ್ಷತೆ ಯಲ್ಲಿ ಸೋಮವಾರ ೧೧ ಗಂಟೆಗೆ ಜಿ. ಪಂ. ಕಾವೇರಿ ಸಭಾಂಗಣ ದಲ್ಲಿ ಸಭೆ ನಿಗದಿಯಾಗಿತ್ತು. ೧೨ ಗಂಟೆ ಯಾದರೂ ಆಡಳಿತಾರೂಡs ಜಾತ್ಯ ತೀತ ಜನತಾದಳದ ಸದಸ್ಯರು ಕೇವಲ ೩ ಮಂದಿ ಹಾಜರಾದರು. ಅಧಿಕಾರದ ಚುಕ್ಕಾಣಿ ಹಿಡಿದಿರುವ ಜಾ.ದಳದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಜಯಲಕ್ಷ್ಮಮ್ಮ ಸಭೆಗೆ ಹಾಜರಾಗಲೇ ಇಲ್ಲ. ಸಿಇಓ ಜಯರಾಂ ಸಹ ಮುಖ್ಯಮಂತ್ರಿಗಳ ಸಭೆಗೆ ಹಾಜರಾಗಲು ತೆರಳಿ ತಮ್ಮ ಕಾ೦iುರ್ ವನ್ನು ಉಪ ಕಾರ್ಯದರ್ಶಿ ನಾಗರಾಜು ಅವರು ನಿರ್ವಹಿಸುವಂತೆ ಸೂಚಿಸಿ ತೆರಳಿದ್ದರು. ಒಟ್ಟು ೪೦ ಸದಸ್ಯ ಬಲದ ಜಿ. ಪಂ.ನಲ್ಲಿ ೨೪ ಮಂದಿ ಜಾ.ದಳದ ಸದಸ್ಯರು, ೧೪ ಕಾಂಗ್ರೆಸ್‌, ೧ ರೈತ ಸಂಘ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಗಳು ಜ೦iುಗಳಿಸಿದ್ದು, ೨೪ ಮಂದಿ ಸದಸ್ಯರು ಜಾ.ದಳದವರಿದ್ದರೂ ಸಭೆಗೆ ಹಾಜರಾಗಿದ್ದವರು ಕೇವಲ ೩ ಮಂದಿ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್‌, ಮಾದಪ್ಪ ಮತ್ತು ಶಂಕರೇ ಗೌಡ, ಕೆಲಮ ತಾಲ್ಲೂಕಿನ ಬೆರಳೆ ಣಿಕೆಯ ತಾಲ್ಲೂಕು ಅಧ್ಯಕ್ಷರು ಹಾಜರಾಗಿದ್ದರು. ಕಾಂಗ್ರೆಸ್‌ ನ ೧೩ ಮಂದಿ ಸದ ಸ್ಯರು, ರೈತ ಸಂಘ, ಪಕ್ಷೇತರದ ಇಬ್ಬರು ಸದಸ್ಯರು ಸಭೆಗೆ ಹಾಜರಾಗಿದ್ದರು. ಸಮಯ ಮೀರುತ್ತಿದ್ದಂತೆ ವಿರೋಧ ಪಕ್ಷದ ನಾಯಕರಾದ ಬಸವರಾಜು ಸಭೆಯ ಗಮನ ಸೆಳೆದು ಸಭೆಯಲ್ಲಿ ಕೋರಂ ಇದ್ದರೆ, ಅಧ್ಯಕ್ಷರು-ಉಪಾ ಧ್ಯಕ್ಷರು ಇಲ್ಲದಿರುಮದರಿಂದ ಬೇರೆ ಸದ ಸ್ಯರಿಗೆ ಸಭಾ ಅಧ್ಯಕ್ಷತೆ ವಹಿಸಿ ಸಭೆ ನಡೆಸಿ ಎಂದು ಮನವಿ ಮಾಡಿದರು. ಪಕ್ಷೇತರ ಸದಸ್ಯ ಮರೀಗೌಡ ಮಾತನಾಡಿ ಕಳೆದ ಏಳೆಂಟು ತಿಂಗಳಾ ಗಿದೆ. ಸಭೆ ಎಂದರೆ ಯಾವ ರೀತಿ ಇರಬೇಕು. ಅಧ್ಯಕ್ಷರಿಲ್ಲ, ಸಿಇಓ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸದಸ್ಯ ಹುಚ್ಚೇಗೌಡ ಮಾತನಾಡಿ ಈಗಾಗಲೇ ಒಂದು ಗಂಟೆ ತಡವಾಗಿದೆ ಜನರಿಗೆ ಯಾವ ಉತ್ತರ ಹೇಳುಮದು, ಆಡಳಿತ ಪಕ್ಷದ ಅಧ್ಯಕ್ಷರು-ಉಪಾ ಧ್ಯಕ್ಷರು ಬಂದಿಲ್ಲ. ಅಧಿಕಾರಿಗಳೇ ಉತ್ತರ ಹೇಳಿ ಎಂದು ತರಾಟೆಗೆ ತೆಗೆದು ಕೊಂಡರಲ್ಲದೆ, ಸಿಇಓ ಜಯರಾಂ ಸಹ ಗೈರಾಗಿರುವ ಬಗ್ಗೆ ಕಿಡಿಕಾರಿದರು. ಉಪ ಕಾರ್ಯದರ್ಶಿ ನಾಗರಾಜು ಮಾತನಾಡಿ, ಸಿಎಂ ರವರ ತುರ್ತು ಸಭೆ ಹಿನ್ನೆಲೆಯಲ್ಲಿ ಜಯರಾಂ ಅವರು ಬೆಂಗಳೂರಿಗೆ ತೆರಳಿದ್ದು, ಅವರ ಕಾರ್ಯವನ್ನು ತಮಗೆ ವಹಿಸಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಾದಪ್ಪ ಮಾತನಾಡಿ, ಕಾರಣಗಳು ನೂರಾರು ಇರುಮದರಿಂದ ಅಧ್ಯಕ್ಷರು-ಉಪಾ ಧ್ಯಕ್ಷರು ಬಂದಿಲ್ಲ. ದ೦iುಮಾಡಿ ಕ್ಷಮಿಸಿ ಎಂದು ಕೋರಿ ತಟಸ್ಥರಾದರು. ಇದರಿಂದ ಕುಪಿತರಾದ ಸದಸ್ಯರು ಸ್ಥಾಯಿ ಸಮಿತಿ ಸದಸ್ಯರು ಮತ್ತು ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂ ಡರು. ಈ ಮಧ್ಯೆ ಸಭೆಯಲ್ಲಿ ಉಪಹಾರ ಹಂಚುತ್ತಿದ್ದ ಸಂದರ್ಭದಲ್ಲಿ ಸದಸ್ಯ ಶಂಕರೇಗೌಡ ಸಭೆ ಕರೆದ ಉದ್ದೇಶವೇ ನೆರವೇರಿಲ್ಲ. ತಿಂಡಿ ಏಕೆ ಬೇಕು ಎಂದು ಗದರಿ ಸೇವಕರನ್ನು ಹಿಂದಿರುಗಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಾದಪ್ಪ ಅವರು ಮಾತನಾಡಿ ದ೦iುಮಾಡಿ ಬೇಸರ ಮಾಡಿಕೊಳ್ಳಬೇಡಿ. ತಿಂಡಿ ತಿನ್ನಿ ಎಂದು ಕೋರಿದರು. ಈ ಸಂದರ್ಭ ದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಇಓ ರವರನ್ನು ದೂರವಾಣಿಯಲ್ಲಿ ಸಂಪರ್ಕಿ ಸಿದರೂ ಸಹ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಕೋರಂ ಅಭಾವದಿಂದ ಸಭೆಯನ್ನು ಮುಂದೂ ಡುಮದಾಗಿ ಒಂದೂವರೆ ಗಂಟೆ ತಡ ವಾಗಿ ಘೋಷಿ ಸಿದರು. ಮತ್ತೋರ್ವ ಸದಸ್ಯ ಅಧ್ಯಕ್ಷರ ಅಪ್ಪಣೆ ಮೇರೆಗೆ ಈ ಸಭೆ ಕರೆಯ ಲಾಗಿದೆಯೆು, ಕರೆದಿದ್ದರೆ ಅವರು ಸಭೆಗೆ ಏಕೆ ಬರಲಿಲ್ಲ ಎಂದು ತರಾಟೆಗೆ ತೆಗೆದು ಕೊಂಡರು. ಮಾದಪ್ಪ ಅವರು ಸಭೆ ಮುಂದೂ ಡಲಾಗಿದೆ ಎಂದು ಹೇಳಿದರಾದರೂ, ಕೆಲ ಸದಸ್ಯರು ಮತ್ತು ಅಧಿಕಾರಿಗಳು ಸಭೆ೦iುಲ್ಲಿ ಗೂಟಾ ಹೊಡೆದು ಕುಳಿತಿದ್ದ ದೃಶ್ಯ ಕಂಡುಬಂತು. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆಯ ಲಾಗಿದ್ದ ಸಭೆ ಆಡಳೀತಾರೂಡs ಪಕ್ಷದ ವರ ಗೈರು ಹಾಜರಿಯಿಂದ ರದ್ದಾ ಯಿತು. ಗ್ರಾಮಗಳ ಮತ್ತು ಕ್ಷೇತ್ರದ ಜನರ ಸಮಸ್ಯೆ, ಅಭಿವೃದ್ಧಿ ಕಾರ್ಯ ಗಳನ್ನು ಮಾಡಲು ಅರ್ಹನೆಂದು ಮತ ಹಾಕಿದ ಜನತೆಯ ವಿಶ್ವಾಸಕ್ಕೆ ಈ ರೀತಿ ತಮ್ಮ ವರ್ತನೆ ತೋರ್ಪಡಿಸಿರುಮದನ್ನು ಗಮನಿಸಿ ಮುಂದಾದರೂ ಅರ್ಹ ವ್ಯಕ್ತಿ ಗಳನ್ನು ಚುನಾಯಿಸುವ ಬುದ್ದಿವಂತಿಕೆ ಬೆಳೆಸಿ ಕೊಳ್ಳಬೇಕು. ಇಲ್ಲವಾದಲ್ಲಿ ತಮ್ಮ ಮತ್ತು ಕ್ಷೇತ್ರಗಳ ಸಮಸ್ಯೆಯಾಗಿಯೆು ಉಳಿ ಯುತ್ತವೆ ಹೊರತು ಪರಿಹಾರ ಕಾಣಲು ಸಾಧ್ಯವಿಲ್ಲ.

No Comments to “ಸಭೆಗೆ ಬಾರದ ಅಧ್ಯಕ್ಷ, ಉಪಾಧ್ಯಕ್ಷರು ; ಕೋರಂ ಅಭಾವದಿಂದ ಮುಂದೂಡಿದ”

add a comment.

Leave a Reply

You must be logged in to post a comment.