ಹೊರ ನಡೆಯಾರಪ್ಪ

ಬೆಂಗಳೂರು,ಅ.೩೦-ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವ ರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿಯ ರಾಜ್ಯ ನಾಯಕರು ನಡೆಸಿದ ಯತ್ನಕ್ಕೆ ವರಿಷ್ಠರು ತಣ್ಣೀರು ಎರಚಿದ್ದು, ಯಡಿಯೂರಪ್ಪ ಅಧಿಕಾರಕ್ಕಾಗಿ ಷರತ್ತು ಹಾಕದೇ ಇರುಮದಾದರೆ ಇರಲಿ, ಇಲ್ಲವೇ ಅವರ ದಾರಿ ನೋಡಿಕೊಳ್ಳಲಿ ಎಂದು ಕೈ ತೊಳೆದುಕೊಂಡಿದ್ದಾರೆ. ಬಿಎಸ್‌ವೈ ಡಿ.೧೦ ರಂದು ಕಟ್ಟುತ್ತಿ ರುವ ಹೊಸ ಪಕ್ಷಕ್ಕೆ ಹೋಗಲು ನಮಗಿಷ್ಟ ವಿಲ್ಲ. ಹೀಗಾಗಿ ಅವರನ್ನು ಇಲ್ಲೇ ಉಳಿಸಿ ಕೊಳ್ಳಿ ಎಂದು ಯಡಿಯೂರಪ್ಪ ಬೆಂಬಲಿ ಗರು ದುಂಬಾಲು ಬಿದ್ದ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ನಾಯಕರು ಇಂದು ದೆಹಲಿಗೆ ಧಾವಿಸಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿದರಾದರೂ ಅದು ನಿರೀಕ್ಷಿತ ಫಲ ನೀಡಲಿಲ್ಲ. ಬದಲಿಗೆ ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ ರಾಜ್ಯದ ನಾಯಕರೆದುರು ನಿಷ್ಠರವಾಗಿ ಮಾತನಾಡಿದ ರಾಜ್‌ನಾಥ್‌ ಸಿಂಗ್‌, ಅರುಣ್‌ಜೇಟ್ಲಿ, ಮುರುಳಿ ಮನೋಹರ ಜೋಷಿ ಮತ್ತಿತರ ನಾಯಕರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಸರ್ಕಾರದ ಭ್ರಷ್ಟಾಚಾರವೇ ನಮಗೆ ಮುಖ್ಯ ಅಸ್ತ್ರ. ಹೀಗಾಗಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪ ಹೇಳಿ ದಂತೆ ಕುಣಿಯಲು ಸಾಧ್ಯವಿಲ್ಲ. ಅವರು ಇರುಮದಾದರೆ ಇರಬಹುದು, ಹೋಗುಮ ದಾದರೆ ಹೋಗಬಹುದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿ ಬಿಟ್ಟರು. ಇವತ್ತಿನ ಸ್ಥಿತಿಯಲ್ಲಿ ಯಡಿಯೂ ರಪ್ಪ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲು ಸಾಧ್ಯವಿಲ್ಲ. ಈಗಾಗಲೇ ಗಣಿಕಪ್ಪ ಹಗರಣಕ್ಕೆ ಸಂಬಂಧಿಸಿ ದಂತೆ ಸಿಬಿಐ ಅವರ ವಿರುದ್ಧ ಚಾರ್ಜ್‌ ಷೀಟ್‌ ಸಲ್ಲಿಸಿದೆ. ಹೀಗಿರುವಾಗ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತಂದ ನಂತರ ಸಿಬಿಐ ಅವರನ್ನು ಬಂಧಿಸಿದರೆ ನಮ್ಮ ಕೈಲಿ ರುವ ಭ್ರಷ್ಟಾಚಾರ ವಿರೋಧಿ ಅಸ್ತ್ರ ಮುರಿದು ಬೀಳಲಿದೆ. ಇಡೀ ದೇಶದ ಮುಂದೆ ನಾಮ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾ ಗುತ್ತದೆ.

No Comments to “ಹೊರ ನಡೆಯಾರಪ್ಪ”

add a comment.

Leave a Reply

You must be logged in to post a comment.