ಅವಿಶ್ವಾಸಕ್ಕೆ ಸಜ್ಜು – ಮುಂದಿನ ಅಧಿವೇಶನದಲಿ ನಿರ್ಣಯ ಮಂಡನೆಗೆ ಕಾಂಗ್ರೆಸ ತಯಾರಿ

ಬೆಂಗಳೂರು,ನ.೭-ಬಹುಮತ ಕಳೆದುಕೊಂಡಿರುವ ಬಿಜೆಪಿ ಸರ್ಕಾರದ ವಿರುದ್ಧ ಪ್ರಸಕ್ತ ವಿಧಾನಮಂಡಲ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್‌ ಸಜ್ಜಾಗಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, ಬಿಜೆಪಿಯ ನಲವತ್ತಕ್ಕೂ ಹೆಚ್ಚು ಶಾಸಕರು ಹೊಸ ಪಕ್ಷ ಕಟ್ಟಲು ಮುಂದಾಗಿರುವ ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದರು. ಹೀಗಾಗಿ ಬಹುಮತ ಕಳೆದು ಕೊಂಡಿರುವ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಚಿಂತನೆ ನಡೆಸಲಾಗಿದ್ದು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ಅವರ ಜತೆ ಚರ್ಚಿಸಿ ಈ ಸಂಬಂಧ ಅಂತಿಮ ನಿರ್ಣಯ ಕೈಗೊಳ್ಳುಮದಾಗಿ ಅವರು ಹೇಳಿದರು. ಇವತ್ತು ಬಿಜೆಪಿಯ ನಲವತ್ತಕ್ಕೂ ಹೆಚ್ಚು ಸಚಿವರು, ಶಾಸಕರು, ಒಂಬತ್ತು ಮಂದಿ ಸಂಸದರು, ಹನ್ನೆರಡು ಮಂದಿ ವಿಧಾನಪರಿಷತ್‌ ಸದಸ್ಯರು ಯಡಿ ಯೂರಪ್ಪ ಅವರ ಜತೆ ಗುರುತಿಸಿ ಕೊಂಡಿದ್ದಾರೆ. ಹೀಗಾಗಿ ಶೆಟ್ಟರ್‌ ಸರ್ಕಾರಕ್ಕೆ ಬಹುಮತವಿಲ್ಲ ಎಂದರು. ಆಡಳಿತದ ಎಲ್ಲ ರಂಗಗಳಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ಈಗ ತುರ್ತು ನಿಗಾ ಘಟಕದಲ್ಲಿದ್ದು, ಕೃತಕ ಉಸಿರಾಟದ ಮೇಲೆ ಬದುಕಿದೆ. ಕಣ್ಣು ಪಿಳುಕಿಸುತ್ತಿದ್ದರೂ ಮಿದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುಮ ದರಿಂದ ಇದ್ದೂ ಸತ್ತಂತಾಗಿದೆ ಎಂದು ಅವರು ಟೀಕೆ ಮಾಡಿದರು. ಬರಗಾಲ ನಿರ್ವಹಣೆಯಿಂದ ಹಿಡಿದು ಕಾವೇರಿ ನದಿ ನೀರಿನ ಹಂಚಿಕೆಯ ತನಕ, ಕಸ ವಿಲೇವಾರಿಯಿಂದ ಹಿಡಿದು ಅಭಿವೃದ್ಧಿ ಕಾರ್ಯಗಳ ತನಕ ಎಲ್ಲ ವಿಷಯಗಳಲ್ಲಿ ಸರ್ಕಾರ ಸಂಪೂರ್ಣ ವಾಗಿ ವಿಫಲವಾಗಿದೆ. ಹೀಗಾಗಿ ಈ ಸರ್ಕಾರ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದರು. ಒಂದೂ ಮುಕ್ಕಾಲು ಕೋಟಿ ಜನ ಸಂಖ್ಯೆ ಇರುವ ಮುಂಬೈ ಮಹಾನಗರ ದಲ್ಲಿ ಕಸ ವಿಲೇವಾರಿಗಾಗಿ ೧೪೧ ಕೋಟಿ ರೂ. ವೆಚ್ಚ ಮಾಡಿದರೆ, ಒಂದು ಕೋಟಿ ಇಪ್ಪತ್ತು ಲಕ್ಷ ಜನಸಂಖ್ಯೆ ಇರುವ ದಿಲ್ಲಿಯಲ್ಲಿ ಕಸ ವಿಲೇವಾರಿ ಗಾಗಿ ೧೨೭ ಕೋಟಿ ರೂ. ವೆಚ್ಚ ಮಾಡ ಲಾಗುತ್ತಿದೆ. ಆದರೆ ೯೫ ಲಕ್ಷ ಜನಸಂಖ್ಯೆ ಇರುವ ಬೆಂಗಳೂರು ಮಹಾನಗರದಲ್ಲಿ ಕಸ ವಿಲೇವಾರಿಗಾಗಿ ೪೩೦ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಸ ವಿಲೇವಾರಿಯಲ್ಲಿ ಯಾವ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಇಷ್ಟೆಲ್ಲ ಖರ್ಚು ಮಾಡಿದರೂ ಕಸ ವಿಲೇವಾರಿ ಆಗುತ್ತಿಲ್ಲ. ಹೀಗಾಗಿ ಗಾರ್ಡನ್‌ ಸಿಟಿ ಗಾರ್ಬೇಜ್‌ ಸಿಟಿ ಆಗಿ ಪರಿವರ್ತನೆ ಯಾಗಿದೆ ಎಂದು ಟೀಕಿಸಿದರು. ಎಸ್‌.ಎಂ.ಕೃಷ್ಣ ಅವರು ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಜಗತ್ತಿನ ಪ್ರಮುಖ ದೇಶಗಳ ನಾಯಕರು ಭಾರತಕ್ಕೆ ಬಂದರೆ ದಿಲ್ಲಿಗಿಂತ ಮುಂಚೆ ಬೆಂಗಳೂರನ್ನು ನೆನಪಿಸಿಕೊಳ್ಳುತ್ತಿದ್ದರು. ಆದರೆ ಅವತ್ತು ಜಗದ್ವಿಖ್ಯಾತವಾಗಿದ್ದ ನಗರ ಇವತ್ತು ತಿಪ್ಪೆಗುಂಡಿಯಾಗಿದೆ ಎಂದು ದೂರಿದರು. ಸರ್ಕಾರದಲ್ಲಿ ಸಾಮರಸ್ಯ ಎಂಬುದೇ ಇಲ್ಲ. ಒಂದು ದಿನ ಸಹಕಾರ ಸಚಿವ ಪುಟ್ಟಸ್ವಾಮಿ ಹಾಗೂ ವಸತಿ ಸಚಿವ ಸೋಮಣ್ಣ ಬಹಿರಂಗವಾಗಿ ಕಚ್ಚಾಡುತ್ತಾರೆ. ಮತ್ತೊಂದು ದಿನ ರೇಣುಕಾ ಚಾರ್ಯ ಮತ್ತು ಜಾರಕಿಹೊಳಿ ಮುಖ್ಯ ಮಂತ್ರಿ ಸಮ್ಮುಖದಲ್ಲೇ ತೋಳೇರಿಸುತ್ತಾರೆ. ಹೀಗೆ ನೋಡುತ್ತಾ ಹೋದರೆ ಇಡೀ ಬಿಜೆಪಿ ಸರ್ಕಾರದಲ್ಲಿ ಸಾಮರಸ್ಯ ಎಂಬುದೇ ಇಲ್ಲವಾಗಿ ಜನರ ಕೆಲಸ ಕಾರ್ಯಗಳು ನಡೆಯದಂತಾಗಿದೆ. ಇದರಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಇಂತಹ ಸರ್ಕಾರ ಇರುವ ಬದಲು ಹೋಗುಮದೇ ಒಳ್ಳೆಯದು ಎಂದು ನುಡಿದರು.

No Comments to “ಅವಿಶ್ವಾಸಕ್ಕೆ ಸಜ್ಜು – ಮುಂದಿನ ಅಧಿವೇಶನದಲಿ ನಿರ್ಣಯ ಮಂಡನೆಗೆ ಕಾಂಗ್ರೆಸ ತಯಾರಿ”

add a comment.

Leave a Reply

You must be logged in to post a comment.