ಊಟದ ಆಟ

ಬೆಂಗಳೂರು, ನ.೫-ಬಿಜೆಪಿ ಪಾಳೆಯದಲ್ಲಿ ಶುರುವಾಗಿರುವ ಆಂತರಿಕ ಸಂಘರ್ಷ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಬಿಜೆಪಿ ಪ್ರಧಾನ್‌ (ಧರ್ಮೇಂದ್ರ ಪ್ರಧಾನ್‌) ಹಾಗೂ ಕೆಜೆಪಿ ಪ್ರಧಾನ್‌ (ಯಡಿಯೂರಪ್ಪ) ತಮ್ಮ ರಣತಂತ್ರಕ್ಕೆ ವೇದಿಕೆ ಸಜ್ಜುಗೊಳಿಸಿದ್ದಾರೆ. ಬಿಜೆಪಿ ತೊರೆದು ಕೆಜೆಪಿ ಕಟ್ಟಲು ಸಜ್ಜಾಗಿರುವ ಯಡಿಯೂರಪ್ಪ ತಮ್ಮ ಜತೆ ಬರುವವರು ಯಾರು? ಕೈ ಕೊಡುವವರು ಯಾರು? ಎಂಬುದನ್ನು ಖಚಿತ ಪಡಿಸಿಕೊಂಡು ಮುಂದಿನ ಹೆಜ್ಜೆ ಇಡಲು ತಯಾರಾ ಗಿದ್ದು, ಇದಕ್ಕಾಗಿ ಮಂಗಳವಾರ ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ತಮ್ಮ ಆಪ್ತ ಸಚಿವರು, ಸಂಸದರು, ಶಾಸಕರ ಸಭೆ ಕರೆದಿದ್ದಾರೆ. ಅದೇ ಕಾಲಕ್ಕೆ ಯಡಿಯೂರಪ್ಪ ಅವರ ಆಪ್ತ ಸಚಿವರು, ಸಂಸದರು, ಶಾಸಕರು ಹೊರಹೋಗದಂತೆ ತಡೆಯಲು, ಪಕ್ಷದ ಶಕ್ತಿ ಕುಗ್ಗದಂತೆ ನೋಡಿಕೊಳ್ಳಲು ಬಿಜೆಪಿ ವರಿಷ್ಠರು ರಣತಂತ್ರ ಹೆಣೆಯುತ್ತಿದ್ದು ಈ ಹಿನ್ನೆಲೆಯಲ್ಲೇ ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತ ಧರ್ಮೇಂದ್ರ ಪ್ರಧಾನ್‌ ಮಂಗಳವಾರ ರಾಜ್ಯಕ್ಕೆ ಆಗಮಿಸು ತ್ತಿದ್ದು, ಬುಧವಾರ ಸರಣಿ ಸಭೆ ನಡೆಸಲಿದ್ದಾರೆ. ಯಡಿಯೂರಪ್ಪ ಹೊಸ ಪಕ್ಷ ಸಂಘಟನೆಗೆ ಮಂಗಳವಾರದಿಂದಲೇ ಚಾಲನೆ ನೀಡಲು ತೀರ್ಮಾನಿ ಸಿದ್ದು, ಈ ಹಿನ್ನೆಲೆಯಲ್ಲಿ ಭೋಜನಕೂಟದ ಹೆಸರಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಅವರು ನೂತನ ಪಕ್ಷ ಕಟ್ಟಿದರೆ ತಮ್ಮ ಜತೆಗಿರುವವರು ಯಾರು? ದೂರ ಉಳಿಯುವ ವರು ಯಾರು? ಎಂಬುದನ್ನು ಪಕ್ಕಾ ಮಾಡಿಕೊಳ್ಳ ಲಿದ್ದಾರೆ. ಯಾಮದೇ ಕಾರಣಕ್ಕೂ ಬಿಜೆಪಿಯಲ್ಲಿ ಉಳಿಯುಮದಿಲ್ಲ ಎಂದು ಪದೇ ಪದೇ ಪುನರು ಚ್ಚರಿಸಿರುವ ಯಡಿಯೂರಪ್ಪ, ಈಗಾಗಲೇ ತಮ್ಮ ಹೊಸ ಪಕ್ಷಕ್ಕೆ ಸೂಕ್ತ ಹಾಗೂ ಸಮರ್ಥ ನಾಯಕರ ಹುಡುಕಾಟದಲ್ಲಿ ತೊಡಗಿದ್ದು, ಹೊಸ ಪಕ್ಷ ಕಟ್ಟಿದರೆ ಈಗ ಬಿಜೆಪಿಯಲ್ಲಿರುವ ಬೆಂಬಲಿಗರ ಪೈಕಿ ನಿಜಕ್ಕೂ ಎಷ್ಟು ಮಂದಿ ತಮ್ಮ ಜತೆ ಉಳಿಯುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ.

No Comments to “ಊಟದ ಆಟ”

add a comment.

Leave a Reply

You must be logged in to post a comment.