ಎಲರನ್ರೂ ತಣಿಸದ ಕಪಿಲೆ – ಪ್ರತಿ ಬಡಾವಣೆಗೂ ತಲುಪದ ನೀರುದ ಹಲವರ ತಕರಾರು

ಮೈಸೂರು,ನ.೮-ಮೈಸೂರು ನಗರಕ್ಕೆ ಕಪಿಲಾ ನದಿಯಿಂದ ನೀರು ಪೂರೈಸುವ ಯೊಜನೆಗೆ ಚಾಲನೆ ಸಿಕ್ಕಿದ್ದು, ಆರಂಭಿಕವಾಗಿ ಕೆಲಮ ವಾರ್ಡ್‌ ಗಳಿಗೆ ನೀರು ಸರಬರಾಜಾಗುತ್ತಿದ್ದರೂ ಕೆಲವೆಡೆ ವ್ಯಕ್ತವಾಗುತ್ತಿರುವ ಅಸಮಾ ಧಾನದ ಉರಿಯನ್ನು ತಣ್ಣಗಾಗಿಸುವಲ್ಲಿ ಕಪಿಲೆ ವಿಫಲವಾಗಿದ್ದಾಳೆ. ಕಳೆದ ಒಂದು ವಾರದಿಂದ ಪ್ರಾಯೊಗಿಕ ವಾಗಿ ಕಪಿಲಾ ನದಿಯಿಂದ ನೀರು ಹರಿ ಸಲಾಗುತ್ತಿತ್ತು. ಬುಧವಾರದಿಂದ ಕೆಲಮ ವಾರ್ಡ್‌ಗಳಿಗೆ ಅಧಿಕೃತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಹಾಪೌರರಾದ ಎಂ.ಸಿ.ರಾಜೇಶ್ವರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಅವರ ಹೇಳಿಕೆಯಂತೆ ಕ್ರಮವಾಗಿ ನಗರದ ೧೩ರಿಂದ ೧೭ನೇ ವಾರ್ಡ್‌ ಗಳವರೆಗೆ ಬುಧವಾರದಿಂದ ಕಪಿಲಾ ನದಿಯ ನೀರು ಸರಬರಾಜಾಗುತ್ತಿದೆ. ಇದರಿಂದಾಗಿ ನೀರಿನ ಬವಣೆ ಸಾಕಷ್ಟು ನೀಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಡಾವಣೆಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಲಭ್ಯವಾಗಲಿದ್ದು, ನೀರಿನ ಕೊರತೆ ನೀಗಲಿದೆ. ಪ್ರತಿ ಬಾರಿ ನಗರಪಾಲಿಕೆ ಕೌನ್ಸಿಲ್‌ ಸಭೆಗಳು ನಡೆದಾಗಲೂ ೧೩ನೇ ವಾರ್ಡಿನ ಪ್ರತಿನಿಧಿಯಾದ ಕೆಂಪಣ್ಣ ಅವರು ತಮ್ಮ ವಾರ್ಡ್‌ನಲ್ಲಿ ನೀರಿನ ಕೊರತೆ ಅತಿ ಯಾಗಿದ್ದು, ಕೂಡಲೇ ಬಗೆಹರಿಸಬೇಕು ಎಂದು ಮಹಾಪೌರರು ಮತ್ತು ಅಧಿ ಕಾರಿಗಳೊಂದಿಗೆ ವಾಗ್ವಾದಕ್ಕಿಳಿಯು ತ್ತಿದ್ದರು. ನೀರಿನ ಕೊರತೆ ನೀಗಿಸಿ ಎಂಬುದು ಅವರ ಏಕೈಕ ಬೇಡಿಕೆಯಾ ಗಿರುತ್ತಿತ್ತು.

No Comments to “ಎಲರನ್ರೂ ತಣಿಸದ ಕಪಿಲೆ – ಪ್ರತಿ ಬಡಾವಣೆಗೂ ತಲುಪದ ನೀರುದ ಹಲವರ ತಕರಾರು”

add a comment.

Leave a Reply

You must be logged in to post a comment.