ನಿತಿನ ಗಡ್ಕರಿ ಅವಿವೇಕ ಹೇಳಿಕೆಗೆ ಆಕ್ರೊಶ

ಭೂಪಾಲ್‌,ನ.೫-ಭ್ರಷ್ಟಾಚಾರ ಆರೋಪಗಳಿಗೆ ತುತ್ತಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಈಗ ಹೊಸದೊಂದು ವಿವಾದ ಮೈಮೇಲೆದುಕೊಂಡಿದ್ದಾರೆ. ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕøತಿ ಪರಿಚಯಿಸಿದ ಧಾರ್ಮಿಕ ಗುರು ಸ್ವಾಮಿವಿವೇಕಾನಂದ ಹಾಗೂ ಜಗತ್ತಿಗೇ ಕಂಟಕಪ್ರಾಯನಾಗಿ ಕಾಡಿದ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಅವರಿಬ್ಬರ ಬುದ್ಧಿಮತ್ತೆ ಒಂದೇ ಎಂಬ ಹೇಳಿಕೆ ನೀಡುವ ಮೂಲಕ ವಿವಾದದ ಸುಳಿಗೆ ಸಿಲುಕಿದ್ದಾರೆ. ಭೂಪಾಲ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಸ್ವಾಮಿವಿವೇಕಾನಂದ ಅವರು ತಮ್ಮ ಬುದ್ಧಿಮತ್ತೆಯನ್ನು ದೇಶ ಕಟ್ಟಲು, ಸಂಸ್ಕøತಿ ಪಸರಿಸಲು ಬಳಸಿದರೆ, ದಾವೂದ್‌ ಇಬ್ರಾಹಿಂ ಅಪರಾಧ ಕೃತ್ಯಗಳನ್ನು ಎಸಗಲು ಬಳಸಿಕೊಂಡಿದ್ದಾನೆ ಎಂದು ಪ್ರತಿಪಾದಿಸಿದ್ದಾರೆ. ತೀವ್ರ ಖಂಡನೆ: ನಿತಿನ್‌ ಗಡ್ಕರಿ ಅವರ ಈ ಹೇಳಿಕೆ ಯನ್ನು ವಿವಿಧ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿರುವ ಗಡ್ಕರಿಯವರಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿವೆ. ಗಡ್ಕರಿ ಸ್ಪಷ್ಟನೆ: ವಿವಾದದ ಕುರಿತು ಪ್ರತಿಕ್ರಿಯಿಸಿರುವ ನಿತಿನ್‌ ಗಡ್ಕರಿ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಧ್ಯಮಗಳ ಮೇಲೆಯೆು ಗೂಬೆ ಕೂರಿಸಿದ್ದಾರೆ. ಈ ಹಿಂದೆ ಮಹಮ್ಮದ್‌ ಅಲಿ ಜಿನ್ನಾ ಅವರು ಜಾತ್ಯತೀತವಾದಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಲ್‌.ಕೆ.ಆದ್ವಾನಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

No Comments to “ನಿತಿನ ಗಡ್ಕರಿ ಅವಿವೇಕ ಹೇಳಿಕೆಗೆ ಆಕ್ರೊಶ”

add a comment.

Leave a Reply

You must be logged in to post a comment.