ಬಿಎಸವೈ ಬಾಂಬ

ಬೆಂಗಳೂರು,ಅ.೮-ರಾಜಕೀಯ ಕ್ಷಿಪ್ರಕ್ರಾಂತಿಯ ಪರಿಣಾಮವಾಗಿ ಫೆಬ್ರವರಿಯಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೊಸ ಬಾಂಬ್‌ ಸಿಡಿಸಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಗುರುವಾರ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಕಾದಿದೆ ಎಂಬ ಮುನ್ಸೂಚನೆ ನೀಡಿದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಫೆಬ್ರವರಿಯಲ್ಲಿ ಚುನಾವಣೆ ನಡೆದು ಏಪ್ರಿಲ್‌ ವೇಳೆಗೆ ಹೊಸ ಸರ್ಕಾರ ಅಸ್ತಿತ್ವದಲ್ಲಿ ರುತ್ತದೆ ಎಂದು ಅವರು ಭವಿಷ್ಯ ನುಡಿದರು. ಸರ್ಕಾರಕ್ಕೆ ಎಚ್ಚರಿಕೆ: ಇದಕ್ಕೂ ಮುನ್ನ ಮಲ್ಲೇಶ್ವರಂನಲ್ಲಿರುವ ಜನಸಂಪರ್ಕ ಕಚೇರಿಯಲ್ಲಿ ಕರೆಯಲಾಗಿದ್ದ ದಲಿತ ಮುಖಂಡರ ಸಭೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಯಡಿ ಯೂರಪ್ಪ, ರಾಜ್ಯದಲ್ಲೀಗ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಇಲ್ಲ. ಇರುಮದು ನನ್ನ ಬೆಂಬಲಿತ ಸಮ್ಮಿಶ್ರ ಸರ್ಕಾರ. ಇದನ್ನು ಮರೆತು ಆಟವಾಡಲು ಹೋದರೆ ಅದಕ್ಕಾಗಿ ತಕ್ಕ ದಂಡ ತೆರಬೇಕಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು. ತಮ್ಮ ಬೆಂಬಲಿಗರ ವಿರುದ್ಧ ಯಾಮದೇ ದುಡುಕಿನ ಕ್ರಮ ತೆಗೆದುಕೊಂಡರೂ ಸರ್ಕಾರಕ್ಕೆ ಗಂಡಾಂತರ ಎದುರಾಗುತ್ತದೆ ಹುಷಾರ್‌ ಎಂದು ಗುಡುಗಿದರಲ್ಲದೆ, ತಾಮ ಬಿಜೆಪಿ ಬಿಡುಮದು ಖಚಿತ, ಹೊಸ ಪಕ್ಷ ಕಟ್ಟುಮದೂ ನಿಶ್ಚಿತ ಎಂದರು. ಜಗದೀಶ್‌ಶೆಟ್ಟರ್‌ ನೇತೃತ್ವದಲ್ಲಿ ಬಿಜೆಪಿ ಈಗ ನಡೆಸುತ್ತಿರುಮದು ಪೂರ್ಣ ಪ್ರಮಾಣದ ಆಡಳಿತವಲ್ಲ. ನನ್ನ ಬೆಂಬಲಿಗರ ಬಲ ಇರುಮದ ರಿಂದ ಈ ಸರ್ಕಾರ ಅಸ್ತಿತ್ವದಲ್ಲಿದೆ. ಹೀಗಾಗಿ ಇದು ಸಮ್ಮಿಶ್ರ ಸರ್ಕಾರ ಎಂದು ಅವರು ವ್ಯಾಖ್ಯಾನಿಸಿದರು. ಈ ಸತ್ಯ ಗೊತ್ತಿದ್ದರೂ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್‌ ಡಿಸೆಂಬರ್‌ ಐದರಿಂದ ಬೆಳಗಾವಿ ಯಲ್ಲಿ ಅಧಿವೇಶನ ಕರೆಯುವ ಮೂಲಕ ಹಾವೇರಿ ಸಮಾವೇಶಕ್ಕೆ ಅಡ್ಡಿಯುಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಡಿಸೆಂಬರ್‌ ೧೦ರ ಬದಲು ಡಿಸೆಂಬರ್‌ ೯ ರಂದೇ ಹಾವೇರಿಯಲ್ಲಿ ಹೊಸ ಪಕ್ಷದ ಜನನವಾಗಲಿದೆ. ಸಮಾವೇಶವೂ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಿಂದ ಈಗಾಗಲೇ ಹೊರಬಂದಿ ರುವ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡು ಮದು ಬಾಕಿ ಇದೆ. ಈಗಲೂ ಅಷ್ಟೇ. ನನ್ನೊಂದಿಗೆ ಬರಲೇಬೇಕು ಎಂದು ಯಾಮದೇ ಸಚಿವರು ಹಾಗೂ ಶಾಸಕರಿಗೆ ನಾನು ಬಲವಂತ ಮಾಡುಮದಿಲ್ಲ. ಯಾರು ಬೇಕಾದರೂ ಬರಲಿ, ಬರಲಾಗದವರು ಬಿಜೆಪಿಯಲ್ಲೇ ಇರಲಿ, ನಾನಂತೂ ಹೊಸ ಪಕ್ಷ ಕಟ್ಟಿ ಹೊಸ ಮುಖಂಡರನ್ನು ಹುಟ್ಟು ಹಾಕುತ್ತೇನೆ. ನನಗೆ ಯಾವ ನಾಯಕರ ಅನಿವಾರ್ಯತೆಯೂ ಇಲ್ಲ ಎಂದು ಹೇಳಿದರು. ಐದು ವರ್ಷ ಪೂರ್ಣ ಪ್ರಮಾಣದಲ್ಲಿ ನನಗೆ ಅಧಿಕಾರ ದೊರೆತಿದ್ದರೆ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಜತೆಗೆ ಗುಜರಾತ್‌ನ್ನೂ ಮೀರಿಸುವಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದೆ. ಆದರೆ ಅದಕ್ಕೆ ನಮ್ಮವರೇ ಅವಕಾಶ ನೀಡಲಿಲ್ಲ. ಇವೆಲ್ಲವನ್ನೂ ಗಮನಿಸಿರುವ ಜನ ಮಾತ್ರ ನನ್ನೊಂದಿಗೆ ಇದ್ದಾರೆ ಎಂದು ಹೇಳಿದರು. ಸಾಮಾನ್ಯವಾಗಿ ಅಧಿಕಾರ ಕಳೆದುಕೊಂಡ ವ್ಯಕ್ತಿಯೊಂದಿಗೆ ಎಲ್ಲರೂ ಕೈಜೋಡಿಸಲು ಹಿಂದೇಟು ಹಾಕುತ್ತಾರೆ.

No Comments to “ಬಿಎಸವೈ ಬಾಂಬ”

add a comment.

Leave a Reply

You must be logged in to post a comment.