ಯಶಸ್ವೀ ಬೋಜನ ಕೂಟ

ಬೆಂಗಳೂರು,ನ.೬-ಬಿಜೆಪಿಗೆ ಗುಡ್‌ಬೈ ಹೇಳಲು ಸಜ್ಜಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೇಷರತ್‌ ಬೆಂಬಲ ಘೋಷಿಸಿರುವ ಅರವತ್ತಕ್ಕೂ ಹೆಚ್ಚು ಸಚಿವರು, ಸಂಸದರು, ಶಾಸಕರು ಹಾಲಲ್ಲಾದರೂ ಹಾಕಿ, ನೀರಲ್ಲಾದರೂ ಹಾಕಿ, ನಾಮ ನಿಮ್ಮ ಜತೆಗಿರು ತ್ತೇವೆ, ನೀಮ ಹೇಳಿದ ದಿನ ಹೊಸ ಪಕ್ಷಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಅದೇ ಕಾಲಕ್ಕೆ ಯಡಿಯೂರಪ್ಪ ಅವರು, ಜಗದೀಶ್‌ ಶೆಟ್ಟರ್‌ ಸರ್ಕಾರ ಅವಧಿ ಪೂರೈಸುವವರೆಗೆ ಜತೆಗಿರಿ. ಚುನಾವಣೆ ಘೋಷಣೆಯಾದ ನಂತರ ನನ್ನ ಜತೆ ಬನ್ನಿ ಎಂದು ಸಚಿವರು ಹಾಗೂ ಶಾಸಕರಿಗೆ ಮುಕ್ತ ಅವಕಾಶ ನೀಡಿದ್ದಾರೆ. ಹೀಗೆ ಯಡಿಯೂರಪ್ಪ ಅವರ ನಿವಾಸ ದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ೬೦ಕ್ಕೂ ಹೆಚ್ಚು ಮಂದಿ ಸಚಿವರು, ಶಾಸಕರು, ಸಂಸದರು ಹೊಸ ಪಕ್ಷದ ವೇದಿಕೆ ಏರಲು ಸಿದ್ಧ ಎಂದು ಘೋಷಿಸುತ್ತಿದ್ದಂತೆಯೆು ಅತ್ತ ಬಿಜೆಪಿ ಪಾಳೆಯದಲ್ಲಿ ತಲ್ಲಣ ಶುರುವಾಯಿ ತಲ್ಲದೇ ರಾಜ್ಯ ಬಿಜೆಪಿಗೆ ಟಾನಿಕ್‌ ನೀಡಲು ರಾಜ್ಯಕ್ಕೆ ಆಗಮಿಸಬೇಕಿದ್ದ ಧರ್ಮೇಂದ್ರ ಪ್ರಧಾನ್‌ ದಿಡಿüರನೆ ತಮ್ಮ ಕಾರ್ಯಕ್ರಮವನ್ನು ರದ್ದು ಗೊಳಿಸಿದರು. ಇದಕ್ಕೂ ಮುನ್ನ ಕೆಜೆಪಿ ಜನನಕ್ಕೆ ಡಿಸೆಂಬರ್‌ ಹತ್ತರ ಮುಹೂರ್ತ ನಿಗದಿ ಮಾಡಿರುವ ಯಡಿ ಯೂರಪ್ಪ ಇಂದು ತಮ್ಮ ಜತೆ ಬರುವವರು ಯಾರು? ಕೈ ಕೊಡುವವರು ಯಾರು? ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳಲು ಡಾಲರ್‌ ಕಾಲೋನಿಯ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಭೋಜನ ಕೂಟ ಬಹುತೇಕ ಯಶಸ್ವಿಯಾಯಿತು. ಯಡಿಯೂರಪ್ಪ ಅವರ ಹೊಸ ಪಕ್ಷದ ಜತೆ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದ ಅನೇಕರು ಇಂದು ಇದ್ದಕ್ಕಿದ್ದಂತೆ ಡಾಲರ್‌ ಕಾಲೋನಿಯ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಲ್ಲದೇ, ನೀಮ ಕಟ್ಟುವ ಹೊಸ ಪಕ್ಷಕ್ಕೆ ಬರುಮದಾಗಿ ಭರವಸೆ ನೀಡಿದರು. ಆದರೆ ನಾವೇ ತಂದು ಕೂರಿಸಿದ ಜಗದೀಶ್‌ ಶೆಟ್ಟರ್‌ ಅವರ ಸರ್ಕಾರವನ್ನು ಉರುಳಿಸುವ ಕೆಲಸ ಮಾಡಕೂಡದು. ಹಾಗೇನಾದರೂ ಮಾಡಿದರೆ ನಮ್ಮ ಮೇಲೇ ಅಪವಾದ ಬರುತ್ತದೆ.

No Comments to “ಯಶಸ್ವೀ ಬೋಜನ ಕೂಟ”

add a comment.

Leave a Reply

You must be logged in to post a comment.