ಜಿಲ್ಲೆಯಲ್ಲಿ ೩೫ ಅನಧಿಕೃತ ಶಾಲೆ

ಕುವೆಂಪುನಗರದ ಜ್ಞಾನ ಗಂ ಗಾ ಶಾಲೆಯಪಕ್ರ ರ ಣ ದಿಂದ  ಎಚತ್ಚಿೆ ರ್ತ ು ವ  ಸಾರ್ವ ಜನಿಕ ಶಿಕ್ಷಣ ಇಲಾಖೆ, ಇದೀಗ ಮೈಸೂರು ಜಿಲ್ಲೆ ಯಲ್ಲಿರುವ ೩೫ ಅನಧಿಕೃತ ಹಾಗೂ ಮಾನ್ಯತೆ ನವೀ ಕರಣಗೊಳಿಸಿಕೊಳ್ಳದ ೮೧ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜ್ಞಾನಗಂಗಾ ಶಾಲೆಯ ಹಾದಿ ರಂಪಾಟದ ನಂತರ ತಡವಾಗಿಯಾದರೂ ಶಿಕ್ಷಣ ಇಲಾಖೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸ ಮಾಡಿದ್ದು, ನಗರ ಸೇರಿದಂತೆ ಮೈಸೂರು ಜಿಲ್ಲೆಯ ವ್ಯಾಪ್ತಿಗೊಳಪಡುವ ಅನಧಿಕೃತ ಪ್ರಾಥಮಿಕ ಹಾಗೂ ಪ್ರೌಡsಶಾಲೆಗಳ ಪಟ್ಟಿ ಬಿಡುಗಡೆಗೊಳಿಸಿದೆ. ಶಿಕ್ಷಣ ಇಲಾಖೆಯ ನಿಯಮಾವಳಿಯಂತೆ ಯಾಮದೇ ಸಂಘ-ಸಂಸ್ಥೆಗಳು ಶಾಲೆಯನ್ನು ತೆರೆಯ ಬೇಕಾದಲ್ಲಿ ಇಲಾಖೆಯ ಅನುಮತಿ ಪಡೆಯುಮದು ಕಡ್ಡಾಯ. ಅದಲ್ಲದೆ, ಪ್ರತೀ ವರ್ಷ ಶಾಲೆಯ ಮಾನ್ಯತೆ ಯನ್ನು ನವೀಕರಿಸಿಕೊಳ್ಳಬೇಕು. ಆದರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ೩೫ ಶಾಲೆಗಳು ಇಲಾಖೆಯ ಅನುಮತಿಯನ್ನೇ ಪಡೆಯದೆ ಮಕ್ಕಳನ್ನು ದಾಖಲು ಮ ಾಡಿಕೊ ಂಡಿವ.ೆ ಅಲದ್ಲ ,ೆ ಜಿಲ್ಲೆಂ iು ಪತ್ರಿ ಷಿತ್ಠ  ಶಾಲಗೆ ಳ ೂ ಸೇರಿದಂತೆ ೮೧ ಶಾಲೆಗಳು ಮಾನ್ಯತೆಯನ್ನು ನವೀ ಕರಿಸಿಕೊಂಡಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುವಂತೆ ಅನಧಿಕೃತ ಶಾಲೆಗಳಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದ್ದರೂ, ಅದನ್ನು ನಿರ್ಲಕ್ಷಿಸಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಕೂಡ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಸಂದರ್ಭದಲ್ಲಿ ಆ ಶಾಲೆ ಇಲಾಖೆಯ ಅನುಮತಿ ಪಡೆದಿದೆಯೆು ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಿಲ್ಲ. ಕೆಲ ಶಾಲೆಗಳು ಅನುಮತಿ ಪಡೆದಿದ್ದರೂ ಕಾಲಕಾಲಕ್ಕೆ ಮಾನ್ಯತೆಯನ್ನು ನವೀಕರಿಸಿ ಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸತ್ಯಾ ಸತ್ಯತೆಯನ್ನು ತಿಳಿಸುವ ಉದ್ದೇಶದಿಂದ ಈಗ ಅಂತಹ ಶಾಲೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

One Comment to “ಜಿಲ್ಲೆಯಲ್ಲಿ ೩೫ ಅನಧಿಕೃತ ಶಾಲೆ”

  1. kiran says:

    Inthaha shalegalu manyathe nirakarisidare inthaha shalegalanu muchisa beku

Leave a Reply

You must be logged in to post a comment.