ಜ್ಞಾನಗಂಗಾ: ಸ ರ್ಕಾರಕ್ಕೆ ವರದಿ ಸ ಲ್ಲಿಕೆ

ಮೈಸೂರು,ಡಿ.೫-ಮಾನ್ಯತೆ ನವೀಕರಣ ಹಾಗೂ ಇನ್ನಿತರ ಆರೋಪದಡಿ ನಗರದ ಜ್ಞಾನಗಂಗಾ ಶಾಲೆಯ ಮಾನ್ಯತೆ ರದ್ದುಗೊಂಡ ಪಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಮೂರು ತಿಂಗಳು ಶಾಲೆಯನ್ನು ನಡೆಸಲು ಅನುಮತಿ ನೀಡಬಹುದು ಎಂದು ಡಿಡಿಪಿಐ ಕಚೇರಿಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಶಿಕ್ಷಕರ ಹಾಗೂ ಮಕ್ಕಳ ಕಲ್ಯಾಣ ನಿಧಿಯನ್ನು ದುರ್ಬಳಕೆ ಮಾಡಿ ಕೊಂಡಿರುಮದು ಹಾಗೂ ೨೦೦೫ನೇ ಸಾಲಿನಿಂದೀಚೆಗೆ ಪೌಡsಶಾಲೆಯ ಮಾನ್ಯತೆಯನ್ನು ನವೀಕರಿಸಿಕೊಂಡಿಲ್ಲ ಮತ್ತು ಆರೋಪಗಳಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುವಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರ ಶಾಲೆಯ ಪೌಡsಶಾಲಾ ವಿಭಾಗದ ಮಾನ್ಯತೆಯನ್ನು ಕಳೆದ ಒಂದು ತಿಂಗಳ ಹಿಂದೆ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಮಾನ್ಯತೆ ರದ್ದುಗೊಂಡಿರುವ ವಿಷಯವನ್ನು ತಿಳಿದ ಪೋಷಕರು ಗುರು ವಾರ ಸಂಜೆ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಮವನ್ನು ಖಂಡಿಸಿ ಶಾಲೆಯ ಮುಂಭಾಗ ಧರಣಿ ಆರಂಭಿಸಿದ್ದರು. ಸ್ಥಳಕ್ಕೆ ಬಂದಿದ್ದ ಶಾಸಕ ಎಂ.ಕೆ.ಸೋಮಶೇಖರ್‌ ಪೋಷಕ ರ ೊಂದಿಗ ೆ ಮಾತುಕತೆ ನಡೆಸಿ, ಮೂರು ತಿಂಗಳ ಮಟ್ಟಿಗೆ ಶಾಲೆಯನ್ನು ಆರಂಭಿಸಲು ಮುಖ್ಯಮಂತಿ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳೊಡನೆ ಮಾತನಾಡಿ, ಕಮ ಕೈಗೊಳ್ಳುಮದಾಗಿ ಹೇಳಿ ಸಮಾಧಾನಪಡಿಸಿದ್ದರು. ಅದರಂತೆ ಶುಕವಾರ ಬೆಳಿಗ್ಗೆ ಕೂಡ ಪೋ ್ರ ಷಕರು ಶಾಲಾ ಆವರಣಕ್ಕೆ ಬಂದು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಪೋಷಕರ ಮನವಿಗೆ ಶಿಕ್ಷಣ ಇಲಾಖೆ ಸ್ಪಂದಿಸಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ಣಗೊಳ್ಳು ವವರೆಗೂ ಶಾಲೆಯನ್ನು ನಡೆಸಲು ಅನುಮತಿ ನೀಡಬಹುದೆಂದು ಸರ್ಕಾರಕ್ಕೆ ವರದಿ ನೀಡಿದೆ.

No Comments to “ಜ್ಞಾನಗಂಗಾ: ಸ ರ್ಕಾರಕ್ಕೆ ವರದಿ ಸ ಲ್ಲಿಕೆ”

add a comment.

Leave a Reply

You must be logged in to post a comment.