ಮಡಿಕೇರಿ ಬಳಿ ಯುವತಿ ಹತ್ಯೆ ಪ್ರಕರಣ – ಆರೋಪಿ ಆತ್ಮಹತ್ಯೆ

ಮಡಿಕೇರಿ,ಡಿ.೨೩- ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಸೋಮವಾರ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಯುವಕ ಸೋಮವಾರಪೇಟೆ ತಾಲ್ಲೂಕಿನ ಕೆಂಚಮ್ಮನ ಬಾಣೆಯ ನಿವಾಸಿ ಮಹೇಶ (೩೦) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಸಂಭವಿಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಎಂಬಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂ ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ರಮ್ಯ (೨೪) ಎಂಬ ಯುವತಿಯನ್ನು ಮಹೇಶ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸೋಮವಾರ ಮದುವೆಯಾಗಲು ನಿರಾಕರಿಸಿದ ಕಾರಣ ರೊಚ್ಚಿಗೆದ್ದ ಮಹೇಶ ಸೋಮವಾರಪೇಟೆ ತಾಲ್ಲೂಕಿನ ಬೇಳೂರು ಬಾಣೆಯ ಬಳಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ನಂತರ ಸ್ಥಳದಿಂದ ಪರಾರಿಯಾಗಿದ್ದ ಮಹೇಶ್‌ ಸೋಮವಾರ ತಡರಾತ್ರಿ ಬೇಳೂರು ಬಾಣೆ ಬಳಿಯ ಖಾಸಗಿ ಕಾಪಿಣ̈ ತೋಟವೊಂದರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ. ರಮ್ಯ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಸೋಮ ವಾರಪೇಟೆ ಪೊಲೀಸ್‌ ಠಾಣೆಯ ಸಿಬ್ಬಂದಿ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು. ಮಂಗಳವಾರ ಆತನ ವೊಬೈಲ್‌ನ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಮೀಪದ ಕಾಪಿಣ̈ ತೋಟವೊಂದರಲ್ಲಿ ವೊಬೈಲ್‌ ನೆಟ್‌ವರ್ಕ್‌ ಪತ್ತೆಯಾಗಿದೆ. ನಂತರ ನೆಟ್‌ವರ್ಕ್‌ ಪತ್ತೆಯಾದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಸಂದರ್ಭ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹೇಶನ ಮೃತದೇಹ ಪತ್ತೆಯಾಗಿದೆ. ಪಕ್ರ ರ ಣ ಕ್ಕೆ ಸಂ ಬಂದಿಸಿಣ̈ ದಂ ತ ೆ ಸೊ ಮ ವಾರಪ ೆ ಟ ೆ ಪೊ ಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಶವ ಪರೀಕ್ಷೆಯನ್ನು ಸಮೀಪದ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

No Comments to “ಮಡಿಕೇರಿ ಬಳಿ ಯುವತಿ ಹತ್ಯೆ ಪ್ರಕರಣ – ಆರೋಪಿ ಆತ್ಮಹತ್ಯೆ”

add a comment.

Leave a Reply

You must be logged in to post a comment.