ಮರ ಕಡಿದ ಪತಿ ವಿರುದ್ಧವೇ ದೂರು

ಸರಗೂರು,ಡಿ.೨೨- ಇಲ್ಲಿಗೆ ಸಮೀಪದ ಹಲಸೂರು ಗ್ರಾಮದ ಸಣ್ಣಪುಟ್ಟಮ್ಮ ಎಂಬವರು ತಮಗೆ ಸೇರಿದ ಜಮೀನಿನಲ್ಲಿ ಬೆಳೆಸಿದ್ದ ೨ ತೇಗದ ಮರಗಳನ್ನು ಅವರಿಂದ ದೂರವಾಗಿರುವ ಪತಿ ಕಡಿದಿರುವ ಕುರಿತು ವೃತ್ತನಿರೀಕ್ಷಕರಿಗೆ ದೂರು ನೀಡಿರುವ ಘಟನೆ ನಡೆದಿದೆ. ಹಲಸೂರು ಗ್ರಾಮದ ತಮಗೆ ಸೇರಿದ ೫೮ನೇ ಸರ್ವೆ ಭೂಮಿ ಯಲ್ಲಿದ್ದ ೨ ತೇಗದ ಮರ ಗಳನ್ನು ಪತಿ ಹೆಚ್‌.ಎಸ್‌.ನಾಗ ರಾಜು ಡಿಸೆಂಬರ್‌ ೧೬ ರಂದು ಕಡಿದು ಸಾಗಿಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಪತಿ ತಮ್ಮನ್ನು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ದೂರವಾಗಿ ಬೇರೆ ಮದುವೆ ಆಗಿದ್ದರು. ಈ ಕಾರಣದಿಂದಲೇ ಅತ್ತೆ, ಮಾವ ತಮಗೆ ಮೂರು ಎಕರೆ ಜಮೀನು ನೀಡಿದ್ದರು. ಆ ಜಮೀನಿನಲ್ಲಿ ತೇಗದ ಮರವನ್ನು ೩೦ ವರ್ಷದ ಹಿಂದೆ ನೆಟ್ಟು ರಕ್ಷಿಸಿದ್ದೆ. ಆದರೆ ಅದು ನನ್ನದು ಎಂದು ಪತಿ ಹೆಚ್‌.ಎಸ್‌. ನಾಗರಾಜು ತೊಂದರೆ ಕೊಡುತ್ತಿದ್ದರು. ಜಮೀನಿನ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೂ ಅಕ್ರಮವಾಗಿ ನನ್ನ ಜಮೀನಿಗೆ ಬಂದು ೨ ತೇಗದ ಮರಗಳನ್ನು ಕಡಿದು ಬೇರೆ ಕಡೆ ಸಾಗಿಸಿದ್ದಾರೆ ಎಂದು ಸಣ್ಣಪುಟ್ಟಮ್ಮ ದೂರಿನಲ್ಲಿ ತಿಳಿಸಿದ್ದಾರೆ.

No Comments to “ಮರ ಕಡಿದ ಪತಿ ವಿರುದ್ಧವೇ ದೂರು”

add a comment.

Leave a Reply

You must be logged in to post a comment.