ಯುವತಿ ಹತ್ಯೆ ಮಾಡಿದ ಬಗs ್ನಪ್ರೇ ಮಿ

ಮಡಿಕೆರಿ,ಡಿ.೨೨- ಮದುವೆ ಯಾಗಲು ನಿರಾಕರಿಸಿದ ಯುವತಿ ಯನ್ನು ಭಗ್ನ ಪ್ರೇಮಿಯೊಬ್ಬ ಕತ್ತಿ ಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮ ವಾರಪೇಟೆ ತಾಲ್ಲೂಕಿನ ಬೇಳೂರು ಬಾಣೆಯಲ್ಲಿ ಸೋಮವಾರ ನಡೆದಿದೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ರಮ್ಯ (೨೪) ಕೊಲೆಯಾದ ಯುವತಿ. ಘಟನೆ ವಿವರ: ರಾಮನಗರ ಜಿಲ್ಲೆ ಚನ್ನಪಟ್ಟಣ ಎಂಬಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿದ್ದ ರಮ್ಯ ರಜೆ ಹಾಕಿ ಸೋಮವಾರ ಪೇಟೆ ತಾಲ್ಲೂಕಿನ ಕೆಂಚಮ್ಮನ ಬಾಣೆ ಯಲ್ಲಿರುವ ತಮ್ಮ ಅಕ್ಕನ ಮನೆಗೆ ಬಂದಿದ್ದರು. ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದರು. ಕಳೆದ ಐದು ವರ್ಷಗಳಿಂದ ಕೆಂಚಮ್ಮನಬಾಣೆಯ ಸ್ಥಳೀಯ ಯುವಕ ಮಹೇಶ್‌ (೩೦) ಎಂಬಾತ ಈ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಮಹೇಶನನ್ನು ರಮ್ಯ ಎರಡು ವರ್ಷಗಳಿಂದ ತಿರ ಸ್ಕರಿಸುತ್ತಲೇ ಬರುತ್ತಿದ್ದರು ಎಂದು ತಿಳಿದು ಬಂದಿದೆ. ಸೋಮವಾರ ರಮ್ಯ ಮತ್ತು ಸ್ಥಳೀಯ ಆಶಾ ಕಾರ್ಯಕರ್ತೆ ನಾಗಮಣಿ ಅವರು ಗಬಿಣ̈ರ್ಣಿ ಯಾಗಿದ್ದ ರಮ್ಯನ ಅಕ್ಕನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ತ್ತಿದ್ದರು.

No Comments to “ಯುವತಿ ಹತ್ಯೆ ಮಾಡಿದ ಬಗs ್ನಪ್ರೇ ಮಿ”

add a comment.

Leave a Reply

You must be logged in to post a comment.